ಜಮಖಂಡಿ 07: ತಾಲ್ಲೂಕಿನ ಮುತ್ತೂರ ಗ್ರಾಮದಲ್ಲಿ ಸ್ನಾನ ಮಾಡಲು ಹೋದ ಮಹಿಳೆ ಮಸನ ಸೇರಿದಳು.
ಬೆಳ್ಳಂ ಬೆಳಿಗ್ಗೆ ಅರೆ ಕತ್ತಲೆಯಲ್ಲಿ ಮಹಿಳೆಯ ಕೊಲೆ ನಡೆದಿದೆ. ಮತ್ತೂರ ಗ್ರಾಮದ ಶೋಭಾ ಪರಸಪ್ಪ ಮಾಂಗ (40) ಮನೆಯಲ್ಲಿ ಬೆಳಗ್ಗೆ ಸ್ನಾನ ಮಾಡಲು ಹೋಗುವ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳಿಂದ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಮಹಿಳೆಯ ತಲೆಗೆ ಭಾಗಕ್ಕೆ ಕಟ್ಟಿಗೆಯಿಂದ ಅಪರಿಚಿತರು ಹೊಡೆದ ಪರಿಣಾಮ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮಹಿಳೆಯ ಉಸಿರು ನಿಂತಿದೆ. ಮಹಿಳೆಯ ಕೊಲೆಗೆ ಕಾರಣ ತಿಳಿದು ಬಂದಿರುವುದಿಲ್ಲ. ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಗಂಗಾಧರ ಪೂಜಾರಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೋಲಿಸರು ಜಾಲ ಬೀಸಿದ್ದಾರೆ.