ಲೋಕದರ್ಶನ ವರದಿಗಾರ ಶಶಿಧರ ಶಿರಸಂಗಿ ಅಪಘಾತದಲ್ಲಿ ನಿಧನ
ಗದಗ 08 : ಶಶಿಧರ ಶಿರಸಂಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕ್ರಿಯಾಶೀಲ ವ್ಯಕ್ತಿಯಾಗಿ ಲೋಕದರ್ಶನ ದಿನಪತ್ರಿಕೆ ಶಿರಹಟ್ಟಿ ತಾಲೂಕ ವರದಿಗಾರರಾಗಿ ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಕಳೆದ ವಾರ ಅಪಘಾತದಲ್ಲಿ ಗಾಯಗೊಂಡು, ಚಿಕಿತ್ಸೆಯಿಂದ ಗುಣಮುಖರಾಗಿ ಬರುತ್ತಾರೆ ಎಂಬ ನಂಬಿಕೆಯಲ್ಲಿದ್ದೇವು ಆದರೆ ವಿಧಿಯಾಟ ಕೊನೆಗೆ ಅವರ ಪ್ರಾಣ ಪಕ್ಷಿಯನ್ನ ಕಸಿದು ಕೊಂಡಿತು.
ಅವರ ಸಾವು ತುಂಬಾ ನೋವಿನ ಸಂಗತಿ.ಅವರ ಅಗಲುವಿಕೆ ಸಂಘಕ್ಕೂ ಹಾನಿಯಾಗಿದೆ.ಲೋಕ ದರ್ಶನ ದಿನಪತ್ರಿಕೆಯ ಶಿರಹಟ್ಟಿ ತಾಲೂಕ ವರದಿಗಾರರಾಗಿದ್ದ ಅವರು ಇತ್ತಿಚೆಗೆ ಅಂಗವಿಕಲರ ರಾಜ್ಯ ಒಕ್ಕೂಟದ ರಾಜ್ಯಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿತ್ತು.ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಘಟಕವು ತೀವ್ರ ಸಂತಾಪ ವ್ಯಕ್ತಪಡಿಸಿದೆ ಎಂದುಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ರಾಜು ಹೆಬ್ಬಳ್ಳಿ ತಿಳಿಸಿದ್ದಾರೆ.
"ಬಾಕ್ಸ್ ಮಾಡಿ"ಮಿಂಚಿ ಮರೆಯಾದ ಸ್ನೇಹಜೀವಿ ಶಶಿಧರ ಶಿರಸಂಗಿ ಅವರ ಸಾವು ನಂಬಲಿಕ್ಕೆ ಆಗುತ್ತಿಲ್ಲ ಕೆಲವೆ ದಿನಗಳ ಹಿಂದೆ ಕಾರ್ಯಕ್ರಮದಲ್ಲಿ ಬೇಟಿಯಾಗಿ ಭವಿಷ್ಯದ ದಿನಗಳ ಬಗ್ಗೆ ಮಾತನಾಡಿ, ಆತ್ಮೀಯವಾಗಿ ಬೆರೆತು ಅವರಿಗೆ ಪ್ರೀತಿಯಿಂದ ಊಟ ಬಡಿಸಿದ್ದು ಕೊನೆಯದಾಗುತ್ತದೆ ಎಂದು ನಂಬಿರಲಿಲ್ಲ ಹೋರಾಟದಿಂದ ಸಾಧನೆ ಮಾಡಿ ಎಲ್ಲರಿಗೂ ಪ್ರೇರಣೆ ಯಾಗಿದ್ದ ಶಶಿಧರ ಅವರು ಬದುಕಿನ ಹೋರಾಟದಲ್ಲಿ ಇಷ್ಟು ಬೇಗನೆ ಸೋಲು ಒಪ್ಪಿಕೊಂಡಿರುವದು ಸಹಿಸಲು ಆಗುತ್ತಿಲ್ಲ.