ಚೈತನ್ಯ ಸ್ನೇಹಿತರ ಬಳಗದಿಂದ ಮುರಾಳಗೆ ಸನ್ಮಾನ
ತಾಳಿಕೋಟಿ 19: ಪಟ್ಟಣದ ಪ್ರತಿಷ್ಠಿತ ತಾಳಿಕೋಟಿ ಸಹಕಾರಿ ಬ್ಯಾಂಕ್ ನಿಯಮಿತ ಇದರ ಬಲಶಟ್ಟಿಹಾಳ ಶಾಖೆಯ 2025-30 ನೇ ಅವಧಿಗೆ ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆಯಾದ ಮಹಾಂತೇಶ ಎಸ್.ಮುರಾಳ ಇವರನ್ನು ಚೈತನ್ಯ ಸ್ನೇಹಿತರ ಬಳಗದ ವತಿಯಿಂದ ಬುಧವಾರ ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ಚೈತನ್ಯ ಸ್ನೇಹಿತರ ಬಳಗದ ಸದಸ್ಯರಾದ ಪ್ರಕಾಶ ಹಜೇರಿ, ಖಜಾಂಚಿ ರಾಜು ಸಜ್ಜನ, ಇಬ್ರಾಹಿಂ ಮನ್ಸೂರ, ಸಂಜು ಹಜೇರಿ, ಕಾಶಿನಾಥ್ ಸಜ್ಜನ, ಅಶೋಕ ಚಿನಗುಡಿ, ಅಪ್ಪು ಕಲ್ಲೂರ, ದೇವು ಸಿಂಗ್ ಹಜೇರಿ, ಭೀಮಣ್ಣ ಸುಳೇಬಾವಿ, ಮಲ್ಲಿಕಾರ್ಜುನ್ ಪಾಲ್ಕಿ ಮತ್ತಿತರರು ಇದ್ದರು.