ಮುಂಡರಗಿ ತಾಲೂಕ ಮಟ್ಟದ ವಿಶ್ವ ಮಲೇರಿಯಾ ದಿನಾಚಾರಣೆ

Mundaragi Taluk Level World Malaria Day Celebration

ಮುಂಡರಗಿ 26 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಂಣಾಧಿಕಾರಿಳ ಕಾರ್ಯಾಲಯ ತಾಲೂಕ ಆಡಳಿತ, ತಾಲೂಕ ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮುಂಡರಗಿ   ಹಾಗೂ ತಾಲೂಕಾ ಆರೋಗ್ಯ ಅಧಿಕಾರಿಗಳು ಮುಂಡರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ 25/04/2025 ರಂದು ಮುಂಡರಗಿ ತಾಲೂಕ ಮಟ್ಟದ ವಿಶ್ವ ಮಲೇರಿಯಾ ದಿನಾಚಾರಣೆ  ಕಾರ್ಯಕ್ರಮವನ್ನು ಆಚರಿಸಲಾಯಿತ್ತು.  

ಕಾರ್ಯಕ್ರಮದ ಪು​‍್ಪಾಸಮರೆ್ಪಣಯ ನಂತರ ಪ್ರಾಸ್ತಾವಿಕ ಭಾಷಣವನ್ನು ಶ್ರೀಮತಿ ಎಮ್ ಎಸ್ ಸಜ್ಜನರ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳು ಮುಂಡರಗಿರವರ ಇವರು ಮೆಲೇರಿಯಾ ರೋಗವು ಇದು ಒಂದು ಬರಿಕಣ್ಣಿಗೆ ಕಾಣಿಸದ ಒಂದು ಅತೀ ಸಣ್ಣ ಕ್ರಿಮಿ ಇದಕ್ಕೆ ಪರೋಪ ಜೀವಿ ಎಂದು ಕರೆಯಲಾಗುತ್ತದೆ. ಇದು ಅನಾಫಿಲಿಸ ಜಾತಿಯ ಹೆಣ್ಣು ಸೊಳ್ಳೆಗಳು ಮಲೇರಿಯಾ ರೋಗವನ್ನು ಒಂಬ್ಬರಿಂದೊಬ್ಬರಿಗೆ ಹರಡಿತ್ತದೆ. ಈ ರೋಗದ ಲಕ್ಷಣಗಳು ಮೊದಲು ಚಳಿ, ನಂತರ ವಿಪರೀತ ಜ್ವರ ಸ್ವಲ್ಪ ಹೊತ್ತಿನ ನಂತರ ಮೈಬೆವರುವುದು, ಮೈ-ಕೈ ನೋವು ಇರುತ್ತದೆ. ಈ ರೋಗದಲ್ಲಿ 4 ವಿಧಗಳು ಅವು ಯಾವುವೆಂದರೇ, ಪ್ಲಾಸ್ಮೋಡಿಯಂ ವೈವ್ಯಾಕ್ಸ್‌, ಪ್ಲಾಸ್ಮೋಡಿಯಂ ಫಾಲ್ಸಿಫಾರಂ, ಪ್ಲಾಸ್ಮೋಡಿಯಂ ಓವಲೆ ಮತ್ತು ಪ್ಲಾಸ್ಮೋಡಿಯಂ ಮಲೇರಿಯಾ ಅದರಲ್ಲಿ ನಮ್ಮ ಕರ್ನಾಟಕದಲ್ಲಿ ಪಿ ವಿ ಮತ್ತು ಪಿ ಎಫ್ ಹೆಚ್ಚಾಗಿ ಕಂಡು ಬರುತ್ತದೆ. ಇದನ್ನು ರಕ್ತ ಪರೀಕ್ಷೆ ಮಾಡುವುದರ ಮೂಲಕ ಮಲೇರಿಯಾ ರೋಗವನ್ನು ಕಂಡು ಹಿಡಿಯಬಹುದು. ಅದಕ್ಕೆ ಸರಿಯಾಗಿ ಚಿಕಿತ್ಸೆಯನ್ನು ತಗೆದುಕೊಂಡರೆ ಮಾತ್ರ ರೋಗವನ್ನು ಗುಣಪಡಿಸಬಹುದು ಎಂದು ಹೇಳಿದರು. 

ನಂತರ ಭಾಷಣದಲ್ಲಿ ಶ್ರೀ ಕೆ ವಿ ಬಡಿಗೇರ ಹಿ.ಎಚ್‌.ಐ ಓ ಮುಂಡರಗಿ ರವರ ಈ ಒಂದು ಮಲೇರಿಯಾ ರೋಗ ಬರದ ಹಾಗೇ ಮುನ್ನೇಚರಿಕೆ ಕ್ರಮಗಳು ಯಾವುವೆದಂರೇ, ಮನೆಯ ಸುತ್ತ ಮುತ್ತ ನೀರು ನಿಲ್ಲದ ಹಾಗೆ ಸ್ವಚ್ಚವಾಗಿ ಇಡಬೇಕು ಮತ್ತು ಮನೆಯ ಒಳಗೆ ನೀರು ತುಂಬುವ ಪತ್ರೆಗಳನ್ನು ವಾರಕ್ಕೊಮ್ಮೆ ಸ್ವಚ್ಚವಾಗಿ ತೊಳೆದು ಒಣಗಿಸಿ ನೀರು ತುಂಬಿ ಮೇಲಗಡೆ ಮುಚ್ಚಬೇಕು. ಮತ್ತು ಮನೆಯ ಕಿಡಕಿಗಳಿಗೆ ಜಾಲರಿಗಳನ್ನು ಬಳಸಬೇಕು ಮತ್ತು ಮಲಗುವಾಗ ಸೊಳ್ಳೆ ಪರದೇಗಳನ್ನು ಬಳಸಬೇಕು ಮತ್ತು ಸಾಯಂಕಾಲ ಬೇವಿನ ಸೊಪ್ಪಿನ ಹೊಗೆಯನ್ನು ಹಾಕಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು ಮತ್ತು ಯಾವುದೇ ಜ್ವರವಿರಲ್ಲಿ ಮೊದಲು ಮೇಲೆರಿಯಾ ಎಂದು ತಿಳಿದು ರಕ್ತ ಪರೀಕ್ಷೆ ಮಾಡಿಸಿ ಎಂದು ಹೇಳಿದರು. 

ಉದ್ಘಾಟಕರಿಂದ ಭಾಷಣ :- ಡಾ.ಲಕ್ಷ್ಮಣ ಪೂಜಾರ ತಾಲೂಕಾ ಆರೋಗ್ಯಾಧಿಕಾರಿಗಳು ಮುಂಡರಗಿ ರವರು ಈ ಒಂದು ಕಾರ್ಯಕ್ರಮದಿಂದ ಜನರಿಗೆ ಮಲೇರಿಯಾ ರೋಗದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆಯನ್ನು ನೀಡುವುದು ಆಗಿದೆ  ಈ ವರ್ಷದ ಘೋಷವಾಕ್ಯ; “ಮಲೇರಿಯಾ ನಮ್ಮೊಂದಿಗೆ ಕೊನೆಗೊಳ್ಳುತ್ತದೆ, ಮರುಹೂಡಿಕೆ ಮಾಡಿ, ಮರು ಕಲ್ಪನೆ ಮಾಡಿ ಮರು ಉತ್ತೇಜನ ಮಾಡೋಣ”. 2027 ಕ್ಕೆ ಮಲೇರಿಯಾ ಮುಕ್ತ ಭಾರತವನ್ನು ಮಾಡುವುದು ನಮ್ಮೆಲ್ಲರ ಗುರಿ ಯಾಗಿದೆ  ತಿಳುವಳಿಕೆಯಿಂದ ವಿದ್ಯಾರ್ಥಿಗಳು  ತಮ್ಮ ತಮ್ಮ ಮನೆಯನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ಮತ್ತು ನಿಮ್ಮ ಮನೆಯ ಸುತ್ತಮುತ್ತ ಜನರಿಗೆ ಈ ಒಂದು ರೋಗದ ಬಗ್ಗೆ ಜನರಿಗೆ ಮಾಹಿತಿಯನ್ನು ತಿಳಿಸಿ ಹೇಳಿರಿ ಎಂದು ಹೇಳಿದರು. 

ಅಧ್ಯಕ್ಷತೆ:  ಶ್ರೀ ಚನಸಂಗಪ್ಪ ಕು ಗಡೆದ ತರಬೇತಿ ಅಧಿಕಾರಿಗಳು  ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮುಂಡರಗಿ 

ನಂತರ ರೋಗವಾಹಕ ಸೊಳ್ಳೆಗಳಿಂದ ಹರಡುವ ರೋಗಗಳಾದ ಮಲೇರಿಯಾ, ಡೆಂಗ್ಯೂಜ್ವರ, ಚಿಕೂನ್‌ಗುನ್ಯಾ, ಆನೆ ಕಾಲು ರೋಗ, ಮೆದುಳು ಜ್ವರ ರೋಗಗಳು ಬರುತ್ತವೆ. ಅದಕ್ಕಾಗಿ ಸೊಳ್ಳೆಗಳ ನಿಯಂತ್ರಣ ಅತಿ ಅವಶ್ಯ ಈ ಎಲ್ಲಾ ರೋಗಗಳು ಬರದ ಹಾಗೇ ಮುನ್ನೇಚರಿಕೆ ಕ್ರಮಗಳನ್ನು ಕೈಗೊಂಡು ಎಲ್ಲರು ಆರೋಗ್ಯವನ್ನು ಕಾಡಿಕೊಳ್ಳಬೇಕು ಆರೋಗ್ಯವೆ ಭಾಗ್ಯ, ಅದಕ್ಕಾಗಿ ಸಮುದಾಯದವರು ಎಲ್ಲರು ಕೈ ಜೋಡಿಸುವುದರಿಂದ ಮಲೇರಿಯಾವನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ಹೇಳಿದರು. 

ಕೊನೆಯಲ್ಲಿ  ಎಸ,ಎಲ್,ಕೋರಿ ಇವರು ಎಲ್ಲರೂ ಕಾರ್ಯಕ್ರಮದ ಪರವಾಗಿ ವಂದನಾರ್ಪಣೆ ಹೇಳಿದರು. ಈ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.