ಮುಂಡಗೋಡ: ಪಟ್ಟಣದಲ್ಲಿ ಚಿರತೆ ಸಂಚಾರ

ಮುಂಡಗೋಡ 16: ಪಟ್ಟಣದಲ್ಲಿ ಚಿರತೆ  ಸಂಚರಿಸುತ್ತಿದೆ ಎಂಬುದನ್ನು ಕೆಲವರು ದೃಡಪಡಿಸುತ್ತಿದ್ದಾರೆ ಹಾಗೂ ಪಟ್ಟಣದ ಕೆಲವಂದು ಮಾರ್ಗದಲ್ಲಿ ಸಂಚರಿಸಬೇಡಿ ಎಂದು ಹೇಳುತ್ತಿರುವುದು ಕಂಡು ಬರುತ್ತಿದೆ.

ಪಟ್ಟಣದ ಮಳಗನಕೊಪ್ಪ ಗ್ರಾಮ ಸುತ್ತಲು ಹಾಗೂ ಗಾಂಧಿನಗರ ಸಮೀಪದ ಘನತಾಜ್ಯ ಡಂಪಿಂಗ್ ಮಾಡುವ ಸ್ಥಳದ ಸುತ್ತ ಮುತ್ತಲೂ ಮತ್ತು ಸನವಳ್ಳಿ ಗ್ರಾಮದ ಬಂಕಾಪುರ ರಸ್ತೆಯಲ್ಲಿ ಚಿರತೆ ಕಂಡು ಬಂದಿದೆ ಎಂದು ಬೆಳಗಿನ ವಾಕ್ ಹೋದವರು ಹೇಳುತ್ತಿದ್ದಾರೆ.

ಇದರಿಂದ ಬಂಕಾಪುರ ರಸ್ತೆಗೆ ವಾಕಿಂಗ್ಗೆ ಹೋಗಲು ಹಾಗೂ ಆ ಪ್ರದೇಶದಲ್ಲಿರುವ ನಿವಾಸಿಗಳು  ಹೆದರುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಕುರಿತು ಅರಣ್ಯ ಇಲಾಖೆ ಇತ್ತ ಗಮನಕೊಡುವುದು ಅವಶ್ಯವಾಗಿದೆ.