ಲೋಕದರ್ಶನ ವರದಿ
ಮುಧೋಳ 13: ತಾಲೂಕಿನ ಕೇವಲ 2 ಶಾಲೆಗಳಲ್ಲಿ ಮಾತ್ರ ಇಂಗ್ಲೀಷ ಮಾಧ್ಯಮ ಆರಂಭಗೊಳ್ಳಿಸುವ ಕ್ರಮ ಸರಿಯಾದುದ್ದಲ್ಲಾ, ಸಕರ್ಾರದ ಈ ಇಬ್ಬಗೆಯ ನೀತಿ ಖಂಡಿನಿಯಾದದ್ದು ಎಂದು ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಸಮಾಜ ಸೇವಕ ಬಸವರಾಜ ಲಕ್ಷ್ಮೇಶ್ವರ ಹೇಳಿದರು.
ಅವರು ಸುದ್ದಿಗಾರರೊಮದಿಗೆ ಮಾತನಾಡಿ,ಭವಿಷ್ಯದ ದೃಷ್ಠಿಯಿಂದ ಸಾಮಾನ್ಯ ಕೂಲಿಕಾರನ ಮಕ್ಕಳಿಗೂ ಇಂಗ್ಲೀಷ ಮಾದ್ಯಮದ ಅನಿವಾರ್ಯತೆ ಇದೆ. ಶ್ರೀಮಂತರ ಮಕ್ಕಳು ಮಾತ್ರ ಐ.ಎ.ಎಸ್. ಕೆ.ಎ.ಎಸ್., ಡಾಕ್ಟರ್, ಇಂಜನೀಯರ್ ಆಗಬಹುದು. ಬಡವರ ಮಕ್ಕಳಿಗೆ ಅದು ದೂರದ ಬೆಟ್ಟವಾಗಿದೆ. ಪ್ರತಿಯೊಬ್ಬ ವಿದ್ಯಾಥರ್ಿಗೆ ಇಂದಿನ ದಿನದಲ್ಲಿ ಇಂಗ್ಲೀಷ ಶಿಕ್ಷಣದ ಅಗತ್ಯ ಇದೆ. ಸಕರ್ಾರಕ್ಕೆ ಏನೇ ತಾಂತ್ರಿಕ ಕಾರಣಗಳಿದ್ದರೂ ರಾಜ್ಯದ ಎಲ್ಲ ಕನ್ನಡ ಶಾಲೆಗಳಲ್ಲಿ ಇಂಗ್ಲೀಷ ಮಾದ್ಯಮ ಶಿಕ್ಷಣವನ್ನು ಪ್ರಾರಂಭಿಸಬೇಕೆಂದು ಬಸವರಾಜ ಒತ್ತಾಯಿಸಿದ್ದಾರೆ. ತಾಲೂಕಿನಲ್ಲಿ ಕೇವಲ 60 ವಿದ್ಯಾರ್ಥಿಗಳಿಗೆ ಅವಕಾಶ ನೀಡಿದರೆ ಉಳಿದ ವಿದ್ಯಾರ್ಥಿಗಳ ಗತಿಯೇನು. ಒಂದಿಷ್ಟು ವಿದ್ಯಾರ್ಥಿಗಳಿಗೆ ಬೆಣ್ಣೆ, ಒಂದಿಷ್ಟುವಿದ್ಯಾರ್ಥಿಗಳಿಗೆ ಸುಣ್ಣವಾಗಬಾರದು. ಹೀಗೆ ಮಾಡಿದರೆ ಶಿಕ್ಷಣ ರಂಗ ಭ್ರಷ್ಟಚಾರದ ಗೂಢವಾಗುವುದರಲ್ಲಿ ಸಂದೇಹವಿಲ್ಲ, ಸರ್ಕಾರ ಈನಿರ್ಧಾರದಿಂದ ಹಿಂದೆ ಸರಿದು ಎಲ್ಲ ಕನ್ನಡ ಶಾಲೆಗಳಲ್ಲಿ ಇಂಗ್ಲೀಷ ಮಾಧ್ಯಮವನ್ನು ಆರಂಭಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.