ಲೋಕದರ್ಶನ ವರದಿ
ಮುದ್ದೇಬಿಹಾಳ 07: ತಾಲೂಕಿನ ಹಿರೇಮುರಾಳ ಗ್ರಾಮದಲ್ಲಿ ಹಾಯ್ದುಹೋಗುವ 3 ಕಿಮಿ ಅಂತರದ ಜಿಲ್ಲಾ ಮುಖ್ಯ ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದಲ್ಲಿ ನಡೆಯುತ್ತಿದೆ, ಕಾಮಗಾರಿಗೆ ಕಳಪೆ ಗರಸು ಮಣ್ಣನ್ನು ಬಳಸಲಾಗುತ್ತಿದೆ. ಇದನ್ನು ಕೂಡಲೇ ತಡೆಗಟ್ಟಿ ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಪಿಡಬ್ಲೂಡಿ ಎಇಇ ಜಿ.ಎಸ್.ಪಾಟೀಲ ಅವರನ್ನು ಸಂಜೆ ತರಾಟೆಗೆ ತೆಗೆದುಕೊಂಡರು.
ಈಗಾಗಲೇ ಮುದ್ದೇಬಿಹಾಳದಿಂದ ಕವಡಿಮಟ್ಟಿ ಮತ್ತು ಹಿರೇಮುರಾಳ ಮಧ್ಯೆ, ಜಂಗಮುರಾಳ ಕ್ರಾಸ್ನಿಂದ ನಾಗರಬೆಟ್ಟದವರೆಗೆ ರಸ್ತೆ ಮೇಲ್ದಜರ್ೆಗೇರಿಸಿ ದುರಸ್ತಿಪಡಿಸಲಾಗಿದೆ. ಈಗ ಉಳಿದಿರುವ 3 ಕಿಮಿ ರಸ್ತೆಯನ್ನು ದುರಸ್ತಿಪಡಿಸಲು ಇಲಾಖೆಯವರು ಕ್ರಮ ಕೈಕೊಂಡಿದ್ದಾರೆ. ಆದರೆ ಗುಣಮಟ್ಟಕ್ಕೆ ಆದ್ಯತೆ ಕೊಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.
ಕವಡಿಮಟ್ಟಿ ದಾಟಿದ ಮೇಲೆ ಬರುವ ಹಳ್ಳದಿಂದ ಹಿರೇಮುರಾಳ ಗ್ರಾಮದ ಮೂಲಕ ಜಂಗಮುರಾಳ ಕ್ರಾಸ್ವರೆಗೆ ಹೆದ್ದಾರಿ ಮೇಲ್ದಜರ್ೆಗೇರಿಸಿ ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು. ಕಾಮಗಾರಿ ಗುತ್ತಿಗೆ ಹಿಡಿದಿರುವ ಗುತ್ತಿಗೆದಾರರು ಕಳಪೆ ಗುಣಮಟ್ಟದ ಗರಸು ಮಣ್ಣನ್ನು ನೆಲ ಗಟ್ಟಿಗೊಳಿಸಲು ಬಳಸುತ್ತಿದ್ದು ಕೂಡಲೇ ಅದನ್ನು ತಡೆಗಟ್ಟಬೇಕು. ಗ್ರಾಮದಲ್ಲಿ ಹಾಯ್ದುಹೋಗುವ ರಸ್ತೆಯ ಎರಡೂ ಬದಿ ಚರಂಡಿ ನಿರ್ಮಿಸಬೇಕು. ಡಾಂಬರೀಕರಣ ಕಾಮಗಾರಿ ಕಳಪೆ ಆಗದಂತೆ ಇಲಾಖೆಯ ಪ್ರತಿನಿಧಿಯೊಬ್ಬರು ಯಾವಾಗಲೂ ಕಾಮಗಾರಿ ಸ್ಥಳದಲ್ಲೇ ಇದ್ದು ಉಸ್ತುವಾರಿ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಶೇಖಪ್ಪ ನಾರಯಣಪೂರ, ಬಿ.ಬಿ.ಭೋವಿ, ಗೌಡಪ್ಪ ಯಾಳವಾರ, ಬಸವಂತ್ರಾಯ ನಾಗರತ್ತಿ, ಸುಭಾಸ ಧನ್ನೂರ, ಆದೇಶ ನಾಗರತ್ತಿ, ಮಲ್ಲಿಕಾರ್ಜನ ಬಿರಾದಾರ, ನಿಂಗಣ್ಣ ರಾಮೋಡಗಿ, ಶಿವು ನಾಡಗೌಡ್ರ, ರಶೀದ ಮುಲ್ಲಾ, ಆದಪ್ಪ ರಾಮೋಡಗಿ, ಮೈಬು ಮುಲ್ಲಾ, ನಾಗರಾಜ ರಾಮೋಡಗಿ, ಸೋಮಪ್ಪ ವಡಿಗೇರಿ ಸೇರಿದಂತೆ ಹಲವರು ಇದ್ದರು.