ಮುದ್ದೇಬಿಹಾಳ: 'ಯಡಿಯೂರಪ್ಪ ಸಂತ್ರಸ್ತರ ನೋವು ಆಲಿಸಲಿಲ್ಲಾ'

ಮುದ್ದೇಬಿಹಾಳ 14: ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುದ್ದೇಬಿಹಾಳಕ್ಕೆ ಆಗಮಿಸಿದ್ದರು. ಆದರೆ ಅವರು ತಮ್ಮದೇ ಪಕ್ಷದ ಸ್ಥಳೀಯ ಶಾಸಕರ ಮನೆಗೆ ಬಂದಿದ್ದರೇ ಹೊರತು ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವ ಸಂತ್ರಸ್ತರ ನೋವು ಆಲಿಸಲು ಬಂದಿರಲಿಲ್ಲ ಎಂದು ರಾಜ್ಯ ಜೆಡಿಎಸ್ ಮಹಿಳಾ ಕಾಯರ್ಾಧ್ಯಕ್ಷೆ ಮಂಗಳಾದೇವಿ ಬಿರಾದಾರ ಟೀಕಿಸಿದ್ದಾರೆ.

ಪಕ್ಷದ ಸಂಘಟನಾ ಸಭೆಗೂ ಮುನ್ನ ತಮ್ಮ ಲಕ್ಷ್ಮೀ ನಿವಾಸದಲ್ಲಿ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರವಾಹ ಪರಿಸ್ಥಿತಿ ಅವಲೋಕನ ಪ್ರವಾಸ ಎಂದಿದ್ದರೂ ಅವರು ಇಲ್ಲಿನ ನೆರೆಪೀಡಿತ ಒಂದೇ ಒಂದು ಗ್ರಾಮಕ್ಕೂ ಭೇಟಿ ನೀಡುವ ಕೆಲಸ ಮಾಡಲಿಲ್ಲ. ಇದು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದವರಿಗೆ ಶೋಭೆ ತರುವಂಥದ್ದಲ್ಲ. ಸ್ಥಳೀಯ ಶಾಸಕರೂ ಈ ಬಗ್ಗೆ ಉದಾಸೀನತೆ ತೋರಿಸಿದರು. ಚುನಾವಣೆ ಮುಗಿದ ಮೇಲೆ ಮತದಾರರನ್ನು ಮರೆಯುವುದು ಜನಪ್ರತಿನಿಧಿಯಾದವರಿಗೆ ಸರಿ ಕಾಣುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಧುರೀಣರಾದ ಎಂ.ಎಚ್.ಹಾಲಣ್ಣವರ್ ವಕೀಲರು, ಜಿಲಾನಿ ಮುದ್ನಾಳ, ಅರ್ಶದ್ ಮೋಮಿನ್, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಕೌಸರಬಾನು ಬಿದರಕುಂದಿ, ಪ್ರಭುಗೌಡ ಪಾಟೀಲ, ಅರವಿಂದ ಕಾಶಿನಕುಂಟಿ, ಭೀಮನಗೌಡ ಕೊಡಗಾನೂರ, ಬಸವರಾಜ ಸಂಕನಾಳ, ಚಂದ್ರಶೇಖರ ಗೋನಾಳ, ಬಿ.ಎಚ್.ಹಾಲಣ್ಣವರ್, ಶಿವನಗೌಡ ಬಿರಾದಾರ, ದ್ಯಾಮನಗೌಡ ಪಾಟೀಲ ಸೇರಿದಂತೆ ಹಲವರು ಇದ್ದರು.