ಒಮಾನ್ ದೊರೆ ಗೌರವಾರ್ಥ ಕೇರಳದಲ್ಲಿ ಶೋಕಾಚರಣೆ

ತಿರುವನಂತಪುರಂ, ಜನವರಿ 13 , ಒಮಾನ್ ಸುಲ್ತಾನ್ ಖಬೂಸ್ ಬಿನ್ ಸೈದ್ ಅಲ್ ಸೈದ್ ಅವರ ನಿಧನದ ಗೌರವಾರ್ಥ ಕೇರಳ ಸರ್ಕಾರ ರಾಜ್ಯಾದ್ಯಂತ ಇಂದು ಶೋಕಾಚರಣೆ ಘೋಷಿಸಲಾಗಿದೆ. ಶೋಕಾಚರಣೆಯ  ಅಂಗವಾಗಿ ರಾಷ್ಟ್ರ  ಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗುತ್ತಿದೆ ಇಂದು  ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮ ಇರುವುದಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯದ ಪ್ರಕಟಿದೆ.

ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು   ಎಲ್ಲಾ ಸ್ಥಳಗಳಲ್ಲಿ ಅರ್ಧ ಮಟ್ಟದಲ್ಲಿ  ರಾಷ್ಟ್ರಧ್ವಜವನ್ನು ಹಾರಿಸಲು ನಿರ್ದೇಶಿಸಿದ್ದಾರೆ. ಒಮಾನ್ ದೊರೆ ಕಳೆದ  ಜನವರಿ 10 ರಂದು ನಿಧನರಾದರು. ಅರಬ್ ವಿಶ್ವದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಆಡಳಿತಗಾರನ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂತಾಪ ಸೂಚಿಸಿದ್ದು, ಅವರ ಕೊಡುಗೆ  ಈ ಪ್ರದೇಶಕ್ಕೆ ಶಾಂತಿಯ ದಾರಿದೀಪ ಎಂದೂ  ಬಣ್ಣಿಸಿದ್ದಾರೆ.