ಲೋಕದರ್ಶನ ವರದಿ
ಮೂಡಲಗಿ: ಬಾಲ್ಯದಲ್ಲಿ ಮಗುವಿನ ಉತ್ತಮ ಭವಿಷ್ಯ ನಿಮರ್ಾಣ ಮಾಡುವಲ್ಲಿ ತಾಯಿಯ ಪಾತ್ರ ಬಲು ಮುಖ್ಯವಾಗಿದೆ ಎಂದು ಮೂಡಲಗಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು.
ಗುರುವಾರ ತಾಲೂಕಿನ ತುಕ್ಕಾನಟ್ಟಿಯ ಸಕರ್ಾರಿಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿಲ್ಲಾಗಿದ "ಅಮ್ಮಾ ನಿನ್ನ ತೋಳಿನಲ್ಲಿ ಶಿಷರ್ಿಕೆಯಡಿ ವಿದ್ಯಾಥರ್ಿಗಳ ತಾಯಿಂದರ ಸಮುಖದಲ್ಲಿ ವಿದ್ಯಾಥರ್ಿಗಳ ನೇತೃತ್ವದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಮಕ್ಕಳ ಶಿಕ್ಷಣಕ್ಕಾಗಿ ಸಕರ್ಾರ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿದ್ದು ಅವುಗಳನ್ನು ಸದುಪಯೋಗಪಡಿಸಿಕೊಂಡು ಮಗುವಿನ ಜೀವನ ರೂಪಿಸುವಲ್ಲಿ ತಾಯಿಯು ಪ್ರಮುಖ ಪಾತ್ರ ವಹಿಸಿಸಬೇಕೆಂದರು.
ಕಲ್ಲೋಳಿ ಸಮೂಹ ಸಂಪ್ಮೂಲ ವ್ಯಕ್ತಿ ಜಿ.ಕೆ.ಉಪ್ಪಾರ ಮಾತನಾಡಿದರು. ವಿದ್ಯಾಥರ್ಿಗಳು ಸಸಿಗೆ ನೀರು ಹಾಕುವ ಮುಖಾಂತರ ಸಮಾರಂಭವನ್ನು ಉದ್ಘಾಟಿಸಿದರು.
ವಿದ್ಯಾಥರ್ಿ ನೇತ್ರತ್ವದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳೇ ಅತಿಥಿ, ಅಧ್ಯಕ್ಷತೆ ಸ್ಥಾನ ವಹಿಸಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಅಧ್ಯಕ್ಷತೆಯನ್ನು 8ನೇ ತರಗತಿ ವಿದ್ಯಾಥರ್ಿ ಹೊಳೆಪ್ಪಾ ಬಾಗೇವಾಡಿ ವಹಿಸಿದ್ದನು, ಅತಿಥಿಗಳಾಗಿ ಸಂಗೀತಾ ಪಡದಳ್ಳಿ, ಭಾಗೀರತಿ ತುರನೂರ, ಮನುಪ್ರೀಯಾ ಬಬಲಿ, ಕಾವೇರಿ ಬೋಜ, ಮಹಾದೇವಿ ಹಡಪದ ವೇದಿಕೆಯಲ್ಲಿದ್ದರು.
ವಿದ್ಯಾಥರ್ಿಗಳಾದ ಸಾವಿತ್ರಿ ಬಾಗೇವಾಡಿ ಮತ್ತು ಸಾಕ್ಷಿ ಹುಕುಂದ ಸಂಗೀತಾ ಪಡದಳ್ಳಿ ಸ್ವಾಗತಿಸಿದರು, ತಾಯವ್ವಾ ಗದಾಡಿ ವಂದಿಸಿದರು.
ನೂರಾರು ತಾಯಿಂದರು ಭಾಗವಹಿಸಿದ್ದರು, ಅಕ್ಷರ ದಾಸೋಹ ಕಾರ್ಯಕ್ರಮದಡಿ ಮಕ್ಕಳಿಗೆ ಹಾಗೂ ತಾಂಯಿಂದರು ವಿಶಿಷ್ಟ ಸಿಹಿ ಖಾದ್ಯಗಳಾದ ಕರಿಗಡುಬು, ಬಜ್ಜಿ, ಮೊಸರಗಾಯಿ, ಪಲಾವ ಸಿಹಿ ಭೋಜನ ಸವಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಎ.ವ್ಹಿ.ಗಿರೆಣ್ಣವರ, ಶಿಕ್ಷಕರಾದ ಲಕ್ಷ್ಮೀ ಹೆಬ್ಬಾಳ, ಪುಷ್ಪಾ ಭರಮದೆ, ಎಮ್.ಎಸ್.ಕಡಕೋಳ, ಕುಸುಮಾ ಚಿಗರಿ, ಎಸ್.ಡಿ.ಲಮಾಣಿ, ಕೆ.ಆರ್.ಭಜಂತ್ರಿ, ಸಂಗೀತಾ ತಳವಾರ, ಎಮ್.ಕೆ.ಕಮಾರ, ಎಮ್.ಡಿ.ಗೋಮಾಡಿ, ವಿಮಲಾಕ್ಷಿತೋರಗಲ್ಲ ಶಿವಾ ಕಲಕಣರ್ಿ ಉಪಸ್ಥಿತರಿದ್ದರು.