ಮೂರು ಸಾವಿರಕ್ಕೂ ಹೆಚ್ಚು ಮನೆಗಳು ನೆಲಸಮ

ಕೋಲ್ಕತ್ತಾ,  ನ 11 :   ಬುಲ್ ಬುಲ್ ಚಂಡಮಾರುತದ  ಪಶ್ಚಿಮ ಬಂಗಳ ಮತ್ತು ಒಡಿಸ್ಸಾ  ಭಾರಿ  ಅನಾಹುತ  ಉಂಟು ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಮೂರು ಸಾವಿರಕ್ಕೂ ಹೆಚ್ಚು   ಮನೆಗಳು ನೆಲಸಮಗೊಂಡಿದ್ದು,  ಮತ್ತು ಲಕ್ಷಾಂತರ  ಎಕರೆ ಪ್ರದೇಶದಲ್ಲಿನ ಬೆಳೆ ಹಾಳಾಗಿ ವ್ಯಾಪಕ ನಷ್ಟ ಉಂಟಾಗಿದೆ ಎಂದು ಸಚಿವ ಜಾವದ್  ಖಾನ್ ಹೇಳಿದ್ದಾರೆ.     ಲಕ್ಷಾಂತರ ಜನರು ಮನೆ-ಮಠ  ಕಳೆದುಕೊಂಡು   ಆಶ್ರಯ ಕೇಂದ್ರಗಳಲ್ಲಿ  ಆಶ್ರಯ  ಪಡೆದಿದ್ದಾರೆ.  ಚಂಡಮಾರುತದ ಹೊಡೆತಕ್ಕೆ ನೂರಾರು ಮರಗಳು ಉರುಳಿ ಬಿದ್ದಿದ್ದು ಒಟ್ಟು 2,473 ಮನೆಗಳು ನೆಲಸಮವಾಗಿವೆ. 26 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ  ಹಾನಿಯಾಗಿದೆ.  ಬುಲ್ ಬುಲ್ ಚಂಡಮಾರುತದಿಂದ 2.73 ಲಕ್ಷ ಕುಟುಂಬಗಳು ತೊಂದರೆಗೆ ಸಿಲುಕಿವೆ. 1.78 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ. ಒರಿಸ್ಸಾ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಮುನ್ನೆಚ್ಚರಿಕಾ ಕ್ರಮವಾಗಿ ಹೈ ಅಲರ್ಟ್ ಘೋಷಣೆ ಮಾಡಿವೆ. ಇನ್ನೂ 3 ದಿನಗಳ ಕಾಲ ಚಂಡಮಾರುತದ ಅಬ್ಬರ ಇರುತ್ತದೆ ಎನ್ನಲಾಗಿದ್ದು, ಭಾರಿ  ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಹೇಳಿದೆ.  ಚಂಡಮಾರುತದಿಂದ ಮತ್ತಷ್ಟು  ಹಾನಿ ಸಂಭವಿಸಬಹುದೆಂದು ರಾಜ್ಯ ಸರ್ಕಾರಗಳು ಈಗಾಗಲೇ ಮುನ್ನೆಚ್ಚರಿಕೆ ವಹಿಸಿ  ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಪುರಿ, ಜಗತ್ ಸಿಂಗ್ ಪುರ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.