ನ್ಯೂಯಾರ್ಕ್, ಏ 10,ಕೊರೊನಾ ವೈರಾಣು ಸೋಂಕಿನಿಂದ ವಿಶ್ವಾದ್ಯಂತ 95 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ. ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕೇಂದ್ರದಲ್ಲಿ ನಿರ್ವಹಿಸಲಾಗುತ್ತಿರುವ ದತ್ತಾಂಶ ನಕ್ಷೆಯಲ್ಲಿ 95,506 ಜನರು ಕೊರೊನಾ ವೈರಾಣು ಸೋಂಕಿನಿಂದ ಮೃತಪಟ್ಟಿರುವುದು ದಾಖಲಾಗಿದೆ.ಇಟಲಿಯಲ್ಲಿ ಅತಿ ಹೆಚ್ಚು 18279 ಜನರು ಈ ಸೋಂಕಿಗೆ ಬಲಿಯಾಗಿದ್ದು ಸ್ಪೇನ್ ನಲ್ಲಿ 15447 ಜನರು ಈ ಸೋಂಕು ತಗುಲಿ ಮೃತಪಟ್ಟಿದ್ದಾರೆ.