ಕೆನಡಾದಲ್ಲಿ ಮಾರಕ ಕರೋನ ಸೋಂಕಿಗೆ 7 ಸಾವಿರಕ್ಕೂ ಹೆಚ್ಚು ಜನ ಬಲಿ

ಮಾಸ್ಕೋ, ಜೂನ್ 8, ಕೆನಡಾದಲ್ಲಿ  ಈವರೆಗೆ  ಕರೋನಸೋಂಕಿಗೆ  ತುತ್ತಾದವರ   ಸಂಖ್ಯೆ 95,057 ಕ್ಕೆ ಏರಿಕೆಯಾಗಿದ್ದು,   7 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ  ಎಂದು ಸಾರ್ವಜನಿಕ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳು ಭಾನುವಾರ ಬಹಿರಂಗಪಡಿಸಿವೆ.ಆರೋಗ್ಯ ಏಜೆನ್ಸಿಯ ಮಾಹಿತಿಯ ಪ್ರಕಾರ, ಕ್ವಿಬೆಕ್ ಪ್ರಾಂತ್ಯದಲಿ ಹೆಚ್ಚಿನ ಸೋಂಕು ಸಾವಿನ  ಪ್ರಕರಣ ದಾಖಲಾಗಿದೆ. ಇದು ದೃಡಪಡಿಸಿದ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚಿನದಾಗಿದೆ ಇದನ್ನು  ಹೊರತುಪಡಿಸಿದರೆ  ಒಂಟಾರಿಯೊ ಪ್ರಾಂತ್ಯದಲ್ಲಿ  30,202 ದೃಡಪಡಿಸಿದ  ಪ್ರಕರಣಗಳು  ದಾಖಲಾಗಿದೆ.  ಕೆನಡಾದಾದ್ಯಂತದ ಈವರೆಗೆ 1,868,000 ಜನರನ್ನು ಪರೀಕ್ಷೆಗೆ  ಒಳಪಡಿಸಲಾಗಿದೆ ಎಂದು  ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ -19 ಏಕಾಏಕಿ ಸಾಂಕ್ರಾಮಿಕ ರೋಗ ಎಂದು ಘೋಷಿಸಿತು. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ದತ್ತಾಂಶದ ಪ್ರಕಾರ ಜಾಗತಿಕವಾಗಿ  ಪ್ರಕರಣಗಳ ಒಟ್ಟು ಸಂಖ್ಯೆ 6.9 ದಶಲಕ್ಷವನ್ನು ಮೀರಿದೆ ಹಾಗೂ ಪಡಿಸಿದೆ, ಸಾವಿನ ಸಂಖ್ಯೆ 4 ಲಕ್ಷದಾಟಿದೆ ಎಂದು ಹೇಳಿದೆ.