ವಿಶ್ವಾದ್ಯಂತ 20 ಲಕ್ಷ ಕೊರೊನಾ ವೈರಾಣು ಸೋಂಕಿತರು

ಮಾಸ್ಕೋ, ಏ 14, ಜಗತ್ತಿನಾದ್ಯಂತ 20 ಲಕ್ಷಕ್ಕೂ ಹೆಚ್ಚು ಜನರಲ್ಲಿ ಕೊರೊನಾ ವೈರಾಣು ಸೋಂಕು ದೃಢಪಟ್ಟಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ. ಪ್ರಪಂಚದಾದ್ಯಂತ 20,19,320 ಜನರಲ್ಲಿ ಸೋಂಕು ದೃಢಪಟ್ಟಿದ್ದು 1,19,483 ಜನರು ಈ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆಯೂ ಹೆಚ್ಚಾಗಿದ್ದು 4,48,655 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.