ಅಮೆರಿಕದಲ್ಲಿ 1.26 ಲಕ್ಷಕ್ಕೂ ಹೆಚ್ಚು ಜನ ಕೊರೊನಾದಿಂದ ಸಾವು

ವಾಶಿಂಗ್ಟನ್, ಜೂನ್ 30: ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದಾಗಿ 1.26 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.ಸಾಂಕ್ರಾಮಿಕ ರೋಗವು ಅಮೆರಿಕದಲ್ಲಿ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ ಮತ್ತು ಇದುವರೆಗೆ 25 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ.ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕೇಂದ್ರ (ಸಿಎಸ್‌ಎಸ್‌ಇ) ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ಅಮೆರಿಕದಲ್ಲಿ ಕೊರೊನಾದ ಸಾವಿನ ಸಂಖ್ಯೆ  1,26,131 ಕ್ಕೆ ತಲುಪಿದೆ ಮತ್ತು ಸೋಂಕಿತರ ಸಂಖ್ಯೆ 25,88,020 ದಾಟಿದೆ. ದೇಶದಲ್ಲಿ ಕೊರೊನಾ ಮಹಾಮಾರಿಯಿಂದ ಸುಮಾರು ಆರು ಲಕ್ಷ ಜನ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಲ್ಲಿ ಈ ರೋಗದಿಂದ ಜನ ಕಂಗಾಲಾಗಿದ್ದು, ಈ ಪ್ರಾಂತ್ಯಗಳಲ್ಲಿ ದಿನೇ ದಿನೇ ಪೀಡಿತರ ಸಂಖ್ಯೆ ವೃದ್ಧಿಸುತ್ತಲೆ ಇದೆ. ನ್ಯೂಯಾರ್ಕ್ ನಲ್ಲಿ ಐದು ದಶಲಕ್ಷಕ್ಕೂ ಹೆಚ್ಚು ಕೊರೊನಾ ಸೋಂಕಿನ ಪ್ರಕರಣಗಳು ದೃಢಪಟ್ಟರೆ, 31 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನ್ಯೂಜೆರ್ಸಿಯಲ್ಲಿ ಈವರೆಗೆ ಒಂದು ಲಕ್ಷಕ್ಕೂ ಹೆಚ್ಚು ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಈ ಸಾಂಕ್ರಾಮಿಕ ರೋಗದಿಂದ ಸುಮಾರು 15,000 ಜನರು ಸಾವನ್ನಪ್ಪಿದ್ದಾರೆ.