ಬೆಂಗಳೂರು, ಜೂನ್ 7, ರಾಜ್ಯಾದ್ಯಂತ ಈ ವಾರ ಹೆಚ್ಚಿನ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದ ಉಸ್ತುವಾರಿ ನಿರ್ದೇಶಕ ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ.ಈ ಕುರಿತು ಮಾತನಾಡಿದ ಅವರು, ಮುಂಗಾರು ಎಂದಿನಂತೆ, ವಾಡಿಕೆಯಂತೆ ಜೂನ್ 1 ರಂದು ಕೇರಳ ರಾಜ್ಯವನ್ನು ಪ್ರವೇಶ ಮಾಡಿದೆ. ಆದರೆ ಮುಂಗಾರು ದುರ್ಬಲವಾದ ಕಾರಣ ರಾಜ್ಯಕ್ಕೆ ಬರುವುದು ಸ್ವಲ್ಪ ವಿಳಂಬವಾಗಿತ್ತು. ಕರಾವಳಿ, ದಕ್ಷಿಣ ಒಳನಾಡು, ಮಲೆನಾಡು ಪ್ರದೇಶಕ್ಕೆ ಇದೇ 4 ಮತ್ತು 5 ರಂದು ಮುಂಗಾರು ಆಗಮನವಾಗಿದ್ದು ಅನೇಕ ಕಡೆ ಮಳೆಯಾಗಿದೆ.ಆದರೆ ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡ ವಾಯುಭಾರ ಕುಸಿತದಿಂದ ಇದೆ 10 - 12 ರ ವೇಳೆಗೆ ಮುಂಗಾರು ರಾಜ್ಯದ ಎಲ್ಲಾ ಭಾಗಗಳಿಗೆ ಆವರಿಸಲಿದ್ದು ಪರಿಣಾಮ ಈ ವಾರ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಹೆಚ್ಚಿನ ಮಳೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.