ಕಾರವಾರದಲ್ಲಿ ಚಂದ್ರ ಹಾಗೂ ಗ್ರಹಗಳ ವೀಕ್ಷಣೆ

ಲೋಕದರ್ಶನ ವರದಿ

ಕಾರವಾರ : ಕಾರವಾರದ ಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ಆಕಾಶ ಕಾಯ ಮತ್ತು ಚಂದ್ರನನ್ನು ನೋಡಲು ಅತ್ಯಾಧುನಿಕ ದೂರದರ್ಶಕ ಯಂತ್ರವಿದ್ದು ವಿದ್ಯಾಥರ್ಿಗಳು ಇದರ ಪ್ರಯೋಜನ ಪಡೆಯತೊಡಗಿದ್ದಾರೆ. 

ವಿದ್ಯಾಥರ್ಿಗಳಿಗೆ, ಶಿಕ್ಷಕರಿಗೆ ಹಾಗೂ ಜನಸಾಮಾನ್ಯರಿಗೆ ಚಂದ್ರ ಹತ್ತಿರದಿಂದ ನೋಡಿದಾಗ ಹೇಗೆ ಇರುತ್ತದೆ ಹಾಗೂ ಭೂಮಿಯಂತೆ ಇತರ ಗ್ರಹಗಳು ಹೇಗೆ ಇರುತ್ತವೆ ಎಂಬುವ ಕುತೂಹಲಕ್ಕೆ ಅತ್ಯಾಧುನಿಕ ದೂರದರ್ಶನ ನೆರವಾಗುತ್ತಿದೆ.  ಬರಿಗಣ್ಣಿನಿಂದ ನೋಡುವ ಕಾಯಗಳಿಗೆ ಹಾಗೂ ದೂರದರ್ಶಕದಿಂದ ನೋಡುವ ಕಾಯಗಳಿಗೆ ತುಂಬಾ ವ್ಯತ್ಯಾಸವಿದ್ದು, ಇದನ್ನು ಕಾರವಾರದ  ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಯುವ ಸಮೂಹಕ್ಕೆ ಮನವರಿಕೆ ಮಾಡುತ್ತಿದೆ.  ದೂರದರ್ಶಕದ ಮೂಲಕ ಈಚೆಗೆ   ಸಂಜೆ 6.00 ಗಂಟೆಯಿಂದ 8.00 ಗಂಟೆಯವರೆಗೆ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಕೋಡಿಬಾಗ ಕಾರವಾರದಲ್ಲಿ ವಿದ್ಯಾಥರ್ಿಗಳಿಗೆ, ಶಿಕ್ಷಕರಿಗೆ ಹಾಗೂ ಅಲ್ಲಿನ ಸಾರ್ವಜನಿಕರಿಗೆ ಚಂದ್ರ ಹಾಗೂ ಮಂಗಳ ಮತ್ತು ಶನಿ ಗ್ರಹಗಳನ್ನು ವಿಕ್ಷೀಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವೀಕ್ಷಕರು ಬರಿಗಣ್ಣಿನಿಂದ ನೋಡಿದಾಗ ಕಾಣುವ ಚಂದ್ರ ಹಾಗೂ ದೂರದರ್ಶಕದಿಂದ ನೋಡಿದಾಗ ಚಂದ್ರನ ಮೇಲಿರುವ ಕಲೆಗಳನ್ನು ಹಾಗೂ ಮಂಗಳ ಗ್ರಹವನ್ನು ಮತ್ತು ಶನಿ ಗ್ರಹದ ಉಂಗುರು ವ್ಯವಸ್ಥೆಯನ್ನು ವಿಕ್ಷೀಸಿ ಸಂತಸ ವ್ಯಕ್ತಪಡಿಸಿದರು. 

ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಮಯೇಕರ ವಿದ್ಯಾಥರ್ಿಗಳ ಜೊತೆ ಆಗಮಿಸಿ ,ಆಕಾಶಕಾಯ ವೀಕ್ಷಿಸಿ  ಪ್ರಾಸ್ತಾವಿಕ ಮಾತನ್ನಾಡಿದರು. ಶಿಕ್ಷಕ ವಿಕ್ರಾಂತ ತಾಂಡೇಲ್ ವೀಕ್ಷಣೆಗೆ ನೆರವು ನೀಡಿದರು.  ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯುರೇಟರ್ ಆದ ಡಾ. ಸಂಜೀವ ಪಿ. ದೇಶಪಾಂಡೆ, ಹಾಗೂ ವಿಜ್ಞಾನ ಕೇಂದ್ರದ ಸಿಬ್ಬಂದಿಗಳು ದೂರದರ್ಶಕದಿಂದ ಕಾಯಗಳನ್ನು ವಿಕ್ಷೀಸಲು ಸಹಾಯಮಾಡಿದರು.