ಮೂಡಲಗಿ 10: ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದಜರ್ೆ ಕಾಲೇಜಿನ ವಾಲಿಬಾಲ್ ತಂಡವು ಮಾ.8 ರಂದು ಗೋಕಾಕನ ಸರಕಾರಿ ಪ್ರಥಮದಜರ್ೆ ಮಹಾವಿದ್ಯಾಲಯ ಹಮ್ಮಿಕೊಂಡ್ಡಿದ್ದ ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯದ ನಾಲ್ಕನೆಯ ವಲಯಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಅಂತರ್ ವಲಯಗಳ ಕ್ರೀಡಾಕೂಟಕ್ಕೆ ಅರ್ಹತೆಯನ್ನು ಪಡೆದಿದೆ.
ಈ ತಂಡಕ್ಕೆ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಆರ್. ಬಿ. ಕೊಕಟನೂರ, ತರಬೇತುದಾರ ಡಾ.ರವಿ ಗಡದನ್ನವರ ಹಾಗೂ ವ್ಯವಸ್ಥಾಪಕ ಬಿ.ಸಿ. ಹೆಬ್ಬಾಳ ಹಾಗೂ ಸಿಬ್ಬಂದಿವರ್ಗದವರು ಶುಭ ಹಾರೈಸುವದರೊಂದಿಗೆ ಮಹಾವಿದ್ಯಾಲಯದ ಉಪನ್ಯಾಸಕರಾದ ಸಂಜು ಗಾಣಿಗೇರ ಮತ್ತು ಚೇತನ ರಾಜ್ ಬಿ. ಇವರು ತಂಡಕ್ಕೆ ಸಮವಸ್ತ್ರ ಒದಗಿಸಿ ಸ್ಫೂತರ್ಿಯನ್ನು ತುಂಬಿದ್ದಾರೆ.