ಬೆಂಗಳೂರು, ಜೂನ್ 5,ಅವಧಿಗೂ ಮುನ್ನ ಮುಂಗಾರು ರಾಜ್ಯ ಪ್ರವೇಶಿಸಿದ್ದು, ಪರಿಣಾಮ ಭಾನುವಾರದಿಂದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ವಾಡಿಕೆಯಂತೆ ಜೂನ್ 1ರಂದು ನೈಋತ್ಯ ಮುಂಗಾರು ಕೇರಳವನ್ನು ಪ್ರವೇಶ ಮಾಡಿತ್ತು. ಕೇರಳ ಪ್ರವೇಶಿಸಿದ ಒಂದೆರಡು ದಿನಗಳಲ್ಲಿ ಮುಂಗಾರು ರಾಜ್ಯದ ಕರಾವಳಿಗೂ ಆಗಮಿಸುವುದು ವಾಡಿಕೆ. ಕೇರಳ ಪ್ರವೇಶಿಸಿದ ಮುಂಗಾರು ದುರ್ಬಲವಾಗಿದ್ದರಿಂದ ರಾಜ್ಯಕ್ಕೆ ಆಗಮಿಸುವುದರಲ್ಲಿ ವಿಳಂಬವಾಗಲಿದೆ ಎಂದು ಹೇಳಲಾಗಿತ್ತು , ಗುರುವಾರವೇ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಮುಂಗಾರು ಆಗಮನವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.