ನವದೆಹಲಿ, ಫೆ 1- ಜಮ್ಮು ಕಾಶ್ಮೀರ ಮತ್ತು ಲಡಾಕ್ ಗೆ ಅನುದಾನ ಬಿಡುಗಡೆಗೊಳಿಸುವ ಸರ್ಕಾರದ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ, ಹಣ ಸ್ವಾತಂತ್ರ್ಯಕ್ಕೆ ಪರ್ಯಾಯವಾಗಲಾರದು ಎಂದಿದ್ದಾರೆ.
ಜಮ್ಮು ಕಾಶ್ಮೀರ ಮತ್ತು ಲಡಾಕ್ ನ ಜನರಿಗೆ ಅಗತ್ಯವಿರುವುದು ಸ್ವಾತಂತ್ರ್ಯ. ಜಮ್ಮು ಕಾಶ್ಮೀರದ ಜನರಿಗೆ ಅವರ ಮಾನವ ಹಕ್ಕುಗಳ ಅಗತ್ಯವಿದೆ. ಮುಕ್ತ ಸಮಾಜದದಲ್ಲಿ ಮಾತ್ರ ಜನರು ಅಭಿವೃದ್ಧಿಯ ಫಲವನ್ನು ಅನುಭವಿಸಲು ಸಾಧ್ಯ. ಅವರು ಸ್ವತಂತ್ರರಾಗಿಲ್ಲ ಎಂಬ ಭಾವ ಜನರಲ್ಲಿದ್ದರೆ ಯಾವುದೇ ಹಣ ಅವರಿಗೆ ಸಂತಸ ನೀಡಲಾಗದು. ಸರ್ಕಾರದ ಯೋಚನೆ ಸಂಪೂರ್ಣ ತಪ್ಪಾಗಿದೆ ಎಂದರು.
ಇದಕ್ಕೂ ಮುನ್ನ ಲೋಕಸಭೆಯಲ್ಲಿ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜಮ್ಮು ಕಾಶ್ಮೀರದ ಅಭಿವೃದ್ಧಿಗಾಗಿ 30, 757 ಕೋಟಿ ರೂ. ಹಾಗೂ ಲಡಾಕ್ ಗೆ 5958 ಕೋಟಿ ರೂ. ಮೀಸಲಿರಿಸಿರುವುದಾಗಿ ಘೋಷಿಸಿದ್ದರು. ಇದು ಕಾಶ್ಮೀರದ ಜನರ ಮನವೊಲಿಸಲು ಕೇಂದ್ರ ಸರ್ಕಾರದ ದುರ್ಬಲ ಮತ್ತು ಕಪಟ ಪ್ರಯತ್ನವಾಗಿದೆ . ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದಿದ್ದಾರೆ.