ಹೆಗ್ಗರಣಿ ಸೇವಾ ಸಹಕಾರಿ ಸಂಘದಲ್ಲಿ ಸಪ್ತಾಹ ಸೋಮವಾರ

ಲೋಕದರ್ಶನ ವರದಿ

ಸಿದ್ದಾಪುರ, 20: ಹೆಗ್ಗರಣಿ ಸೇವಾ ಸಹಕಾರಿ ಸಂಘದಲ್ಲಿ ಸಪ್ತಾಹ ಸೋಮವಾರ ನಡೆಯಿತು. ಸಪ್ತಾಹವನ್ನು ಉದ್ಘಾಟಿಸಿದ ಕೆ.ಡಿ.ಸಿ.ಸಿ ಬ್ಯಾಂಕಿನನಿದರ್ೇಶಕ  ಎಸ್.ಬಿ.ಗೌಡರ ಮಾತನಾಡಿ "ಸದಸ್ಯರಿಗೆ ಸೇವೆ ನೀಡುವಲ್ಲಿ ಉತ್ತರಕನ್ನಡ ಜಿಲ್ಲೆಯ ಸಹಕಾರಿ ಸಂಘಗಳು ರಾಜ್ಯಕ್ಕೆ ಮಾದರಿಯಾಗಿದೆ"ಎಂದರು ಕೆ.ಡಿ.ಸಿ.ಸಿ ಬ್ಯಾಂಕನ ಉಪಾಧ್ಯಕ್ಷ ಬಾಸ್ಕರ ಹೆಗಡೆ ಕಾಗೇರಿಯವರು ಯುವಜನ, ಮಹಿಳಾ ಮತ್ತು ಅಬಲವರ್ಗದವರಿಗಾಗಿ ಸಹಕಾರಿ ವ್ಯವಸ್ತೆಕುರಿತು ಉಪನ್ಯಾಸ ನೀಡಿದರು. ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಜಿ.ಟಿ.ಹೆಗಡೆ ತಟ್ಟಿಸರ ಮುಖ್ಯ ಅತಿಥಿಯಾಗಿ ಮಾತನಾಡಿ ಇಂದಿನ ವಿದ್ಯಾಥರ್ಿಗಳಿಗೆ ಶಾಲೆಗಳಲ್ಲಿ ಸಹಕಾರ ವಿಷಯದ ಕುರಿತು ಪಾಠಮಾಡುವ ಅವಶ್ಯಕತೆ ಇದೆ ಎಂದರು. ಮುಖ್ಯಅತಿಥಿಗಳಾಗಿ ಆರ್.ಎಮ್.ಹೆಗಡೆ ಅಧ್ಯಕ್ಷರು ಟಿ.ಎಮ್.ಎಸ್ ಸಿದ್ದಾಪುರ ಆಗಮಿಸಿದ್ದು ಇಂದಿನ ಕಾರ್ಯಕ್ರಮದ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿ ಕಾರ್ಯಕ್ರಮ ಬಹಳ ಅರ್ಥಪೂಣ್ವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ ಹೆಗ್ಗರಣಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಮ್.ಎಲ್.ಭಟ್ಟ ಉಂಚಳ್ಳಿ ಮಾತನಾಡಿ ಉತ್ತರ ಕನ್ನಡದ ಸಹಕಾರ ವ್ಯವಸ್ಥೆ ಉನ್ನತ ಸ್ಥಾನಕ್ಕೇರಲು ಈ ಕ್ಷೇತ್ರದಲ್ಲಿ ದುಡಿದ ಅನೇಕ ಸಹಕಾರಿ ಮಹನೀಯರ ಪ್ರಾಮಾಣಿಕ ಪ್ರಯತ್ನ ಕಾರಣವಾಗಿದೆ. ಅದನ್ನ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ವೇದಿಕೆ ಮೇಲೆ, ಕೆ.ಜಿ.ನಾಗರಾಜ,ಅಧ್ಯಕ್ಷರು ಎ.ಪಿ.ಎಮ್.ಸಿ.ಸಿದ್ದಾಪುರ, ಎಲ್.ಕೆ.ಹೆಗಡೆ, ಕೆ.ಎಮ್.ಎಪ್ ನಿದರ್ೇಶಕರು, ಸೀತಾರಾಮ ಗೌಡ, . ನಿದರ್ೇಶಕರು ಪಿ.ಎಮ್.ಸಿ.ಸಿದ್ದಾಪುರ, ಎಮ್.ವಿ. ಹೆಗಡೆ ಕಂಚಿಕೈ ಸಹಕಾರಿ ಯುನಿಯನ್ ನಿದರ್ೇಶಕರು, ಸುಮನಾ ಹೆಗಡೆ ಅಧ್ಯಕ್ಷರು ಗ್ರಾ.ಪಂ. ಹೆಗ್ಗರಣಿ ಉಪಸ್ಥಿತರಿದ್ದರು.

ಸಪ್ತಾಹದ ಅಂಗವಾಗಿ

ಜಿ.ಟಿ.ಹೆಗಡೆ, ತಟ್ಟಿಸರ "ಸಹಕಾರ ರತ್ನ" ಪುರಸ್ಕೃತ

ಎಮ್. ಎಲ್. ಭಟ್ಟ, ಉಂಚಳ್ಳಿ "ಉತ್ತಮ ಸಹಕಾರಿಗಳು"

ಎಂ.ಪಿ.ಹೆಗಡೆ ಹೆಗಡೆಕಟ್ಟಾ "ಉತ್ತಮ ಸಹಕಾರಿಗಳು"

ಜಿ.ಎಸ್.ಭಟ್ಟ ಓಣಿಕೇರಿ " ಉತ್ತಮ ನಿವೃತ್ತ ಸಿಬ್ಬಂದಿ"

ಎಸ್.ಎಮ್.ಭಟ್ಟ ದೊಡ್ಮನೆ " ಉತ್ತಮ ನಿವೃತ್ತ ಸಿಬ್ಬಂದಿ"

ಜೋಶಿ ಕಾನಸೂರಿನ ಸಿದ್ದಾಪುರ ತಾಲೂಕಿನ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು.

ಹೆಗ್ಗರಣಿ ಸೇವಾ ಸಹಕಾರಿ ಸಂಘದ ವ್ಯಾಪ್ತಿಯ ಈ ಕೆಳಗಿನ ಕೃಷಿ ಹಾಗೂ ಕೃಷಿಕೂಲಿಕಾರರಿಗೆ ಸನ್ಮಾನಿಸಲಯಿತು.

ಮಾಬ್ಲೇಶ್ವರ ಹೆಗಡೆ ಡೊಂಬೆ, ಗಜನನ ವಿ. ಹಾಸ್ಯಗರ, ಕುಳ್ಳೆ. ತಿಮ್ಮ ಬೊಮ್ಮ ಗೌಡ, ನೆಡಕಾರಮನೆ. ವೆಂಕಟ್ರಮಣ ಪ. ಭಟ್ಟ, ಹಳೇಹಳ್ಳ, ಗಣಪತಿ ಈಶ್ವರ ಗೌಡ, ಕುಳಿಕಟ್ಟು, ಮಂಜು ಕೆರಿಯಾ ಗೌಡ, ಹುಕ್ಕಳಿ

ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಡಿಯಲ್ಲಿ, ಪ್ರಸಾದ ವೆಂ. ಹೆಗಡೆ ಚಾರೆ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ, 10ನೇ ತರಗತಿಯಲ್ಲಿ ಕುಮಾರ ವಿರಾಜ ಭಟ್ಟ ಪ್ರಥಮ, ಕುಮಾರಿ ಶ್ರೇಯಾ ದ್ವಿತೀಯ, ಕುಮಾರ ಮಧುಕೇಶ್ವರ ಶಾಸ್ತ್ರಿ ತೃತಿಯ, ಹಾಗೂ ಪಿಯುಸಿ 2ನೇ ವರ್ಚದ ಪರೀಕ್ಷೆಯಲ್ಲಿ ಕಲಾವಿಭಾಗದಲ್ಲಿ ಸಾವಿತ್ರಿ ಡಿ. ಗೌಡ, ಪ್ರಥಮ. ಕಮಲಾಕ್ಷಿ ಎಚ್. ಗೌಡ, ದ್ವಿತೀಯ, ವಾಣಿಜ್ಯ ವಿಬಾಗದಲ್ಲಿ ಭವ್ಯಾ ಎನ್. ಹಗಡೆ. ಪ್ರಥಮ. ರಮ್ಯ ಕುಲಕಣರ್ಿ ದ್ವಿತೀಯ. ಇದೆ ಸಂದರ್ಭದಲ್ಲಿ ಸಭಿಕರಿಗಾಗಿ ರಸ ಪ್ರಶ್ನೆ ಕಾರ್ಯಕ್ರಮವನ್ನು ಸಂಘದ ಸಿಬ್ಬಂದಿಗಳಾದ ಸಿ.ಎಮ್.ನಾಯ್ಕ ಹಾಗೂ ಪ್ರಕಾಶ ಹೆಗಡೆ ನಡೆಸಿಕೊಟ್ಟರು ಮಹಿಳೆಯರಿಗಾ ಆರತಿ ತಾಟಿನ ಸ್ಪಧರ್ೆ ಯಲ್ಲಿ ಶುಭಾ ಎಮ್. ಹೆಗಡೆ ಪಥಮ, ಶ್ರೀಲತಾ ಸು. ಭಟ್ಟ ದ್ವಿತೀಯ, ವರದಾ ಎಸ್. ಹೆಗಡೆ ತೃತೀಯ ಬಹುಮಾನ ಪಡೆದರು. ಸ್ಥಳಿಯ ಪ್ರೌಢ ಶಾಲಾ ಮಕ್ಕಳ ಪ್ರಾರಂಭವಾದ ಕಾರ್ಯಕ್ರಮವನ್ನು ಎಮ್.ಎಸ್. ಹೆಗಡೆ ನಿರ್ವಹಿಸಿದರು, ಸುಬ್ರಾಯ ಹೆಗಡೆ ವಂದನಾರ್ಪಣೆ ನೆರವೇಸಿಕೊಟ್ಟರು ಇದಕ್ಕೆ ಸಹಕಾರಿ ಯೂನಿಯನ್ ಕಾರ್ಯನಿವರ್ಾಹಕರು ಸಹಕರಿಸಿದರು.