ಅದು 1974 ರ ಕಾಲಘಟ್ಟ. ಅಂದು ಪತ್ರಿಕೆಯೊಂದರಲ್ಲಿ ಉದ್ಯೋಗ ಕುರಿತು ಜಾಹೀರಾತು ಒಂದು ಪ್ರಕಟಣೆಯಾಗಿತ್ತು. ಆ ಜಾಹೀರಾತು ಭಾರತದ ಅತಿದೊಡ್ಡ ಕಂಪನಿಯಾದ ಟಾಟಾ ಇಂಜಿನಿಯರಿಂಗ್ ಅಂಡ್ ಲೋಕೋಮೋಟಿವ್ ಕಂಪನಿಯದ್ದಾಗಿತ್ತು. ಆದರೆ ಅಜರ್ಿಯ ಪ್ರಕಟಣೆಯಲ್ಲಿ "ಈ ಕೆಲಸಕ್ಕೆ ಮಹಿಳೆಯರು ಅಜರ್ಿ ಹಾಕುವಂತಿಲ್ಲ ಎಂಬ ಸೂಚನೆ ಕೊಟ್ಟಿದ್ದರು. ಜಾಹೀರಾತು ಪ್ರಕಟಣೆ ನೋಡಿದವರಿಗೆ ಬಹಳ ಸ್ಪಷ್ಟವಾಗಿ ಕಾಣುವಂತಿತ್ತು. ಅದೇ ತಾನೆ ಇಂಜಿನಿಯರಿಂಗ್ ಪದವಿಯಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದ ಯುವತಿಯೊಬ್ಬಳಿಗೆ ಆ ಪ್ರಕಟಣೆಯ ಸಂದೇಶವನ್ನು ನೋಡಿದಾಕ್ಷಣ ಅರಗಿಸಿಕೊಳ್ಳಲಾಗಲಿಲ್ಲ! ಕೂಡಲೇ ಆಕೆ ಆ ಕಂಪನಿಯ ಮುಖ್ಯಸ್ಥರಾದ ಜೆ.ಆರ್ಡಿ. ಟಾಟಾರವರಿಗೆ ಪತ್ರವೊಂದನ್ನು ಬರೆದೇಬಿಟ್ಟಳು.
ಉದ್ಯೋಗದಲ್ಲಿ ಮಹಿಳೆಯರ ಬಗ್ಗೆ ನಿರ್ಲಕ್ಷ್ಯ ಮತ್ತು ತಾರತಮ್ಯದ ಧೋರಣೆಯನ್ನು ಪತ್ರದಲ್ಲಿ ಖಂಡಿಸಿದ್ದಳು. ದೇಶದಲ್ಲಿ ಅತಿ ದೊಡ್ಡ ಕಂಪನಿಯಾದ ಟಾಟಾದಲ್ಲಿ ಮಹಿಳೆಯರ ಬಗ್ಗೆ ಯಾಕಿಷ್ಟು ನಿರ್ಲಕ್ಷ್ಯ ಎಂದು ಪ್ರಶ್ನಿಸಿದ್ದಳು. ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವಷ್ಟು ಸಮರ್ಥರಾಗಿದ್ದಾರೆ. ಹಾಗಾಗಿ ನಿಮ್ಮ ಈ ತಾರತಮ್ಯ, ನಿರ್ಲಕ್ಷ್ಯಕ್ಕೆ ನನ್ನ ಆಕ್ಷೇಪವಿದೆ ಎಂದು ಟಾಟಾರಿಗೆ ಪತ್ರ ಕಳುಹಿಸಿದ್ದಳು.
ಅಂದು ಪತ್ರ ಓದಿದ್ದ ಜೆಆರ್ಡಿ ಟಾಟಾ, ಆ ಯುವತಿಯ ಧೈರ್ಯ, ಜಾಣ್ಮೆಯನ್ನು ಮೆಚ್ಚಿದ್ದರು. ಅಷ್ಟೇ ಅಲ್ಲದೇ ಅವರು ಕೆಲ ದಿನಗಳ ನಂತರ ಸಂದರ್ಶನಕ್ಕೆ ಹಾಜರಾಗುವಂತೆ ಪತ್ರ ಕಳಿಸುತ್ತಾರೆ. ಸಂದರ್ಶನದಲ್ಲಿ ಆ ಪ್ರಕಟಣೆಯ ವಿಚಾರವನ್ನು ಸ್ಪಷ್ಟಪಡಿಸುತ್ತಾರೆ, ಅದು ನೈಟ್ ಶಿಫ್ಟ್ ಕೆಲಸ ಮತ್ತು ಆ ಕೆಲಸವನ್ನು ಮಹಿಳೆಯರು ಬಹಳ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ, ಆದ್ದರಿಂದ ಪ್ರಕಟಣೆಯಲ್ಲಿ ಹಾಗೆ ಸೂಚಿಸಲಾಗಿತ್ತು ಎಂದು ಸ್ಪಷ್ಟನೆ ನೀಡುತ್ತಾರೆ. ಸಂದರ್ಶನದಲ್ಲಿ ಯುವತಿಯ ಜಾಣ್ಮೆ, ಕೆಲಸಕಾರ್ಯಗಳಲ್ಲಿನ ಆಸಕ್ತಿ ಕಂಡು ಬೆರಗುಗೊಳ್ಳುತ್ತಾರೆ. ಟಾಟಾ ಕಂಪನಿಯಲ್ಲೇ ಯುವತಿಗೆ ಕೆಲಸ ಸಿಗುತ್ತದೆ. ಅಂತಹ ದೊಡ್ಡ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ ಮೊದಲ ಮಹಿಳೆ ಎಂಬ ಕೀತರ್ಿಗೆ ಪಾತ್ರರಾಗಿದ್ದವರು ಬೇರಾರು ಅಲ್ಲ, ಅವರೇ ಡಾ.ಸುಧಾ ಮೂತರ್ಿಯವರು.
ಸುಧಾಮೂತರ್ಿಯವರ ಜೀವನದ ಒಂದೊಂದು ಹಂತವೂ ರೋಚಕ. ಅವರ ಜೀವನ, ಬೆಳೆದು ಬಂದ ರೀತಿ, ಎದುರಿಸಿದ ಸಮಸ್ಯೆ, ಸವಾಲುಗಳೆಲ್ಲ ಮಹಿಳೆಯರಿಗೆ ಸ್ಪೂತರ್ಿಯ ಸೆಲೆ. ಪುಣೆಯ ವಾಲ್ಚಂದ್ ಗ್ರೂಪ್ ಆಫ್ ಇಂಡಸ್ಟ್ರೀಸ್ನಲ್ಲಿ ಹಿರಿಯ ಸಿಸ್ಟಂ ಅನಾಲಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಆ ಸಂದರ್ಭದಲ್ಲಿ, ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಾರಾಯಣ ಮೂತರ್ಿಯವರ ಮೊದಲ ಭೇಟಿಯಾಗುತ್ತದೆ. ಭೇಟಿ ಪರಿಚಯವಾಗಿ, ಪರಿಚಯ ಪ್ರೇಮವಾಗಿ ಮುಂದೆ ಮದುವೆಯಾಗಿ ದಾಂಪತ್ಯಕ್ಕೆ ಕಾಲಿಡುತ್ತಾರೆ. ಆ ಸಮಯದಲ್ಲಿ ಸಾಫ್ಟ್ವೇರ್ ಕ್ಷೇತ್ರ ಕೂಡಾ ಪ್ರಾರಂಭವಾಗಿತ್ತು. ಆಗ ನಾರಾಯಣ ಮೂತರ್ಿಯವರಿಗೆ ಹೊಸ ಕಂಪನಿಯೊಂದನ್ನು ಆರಂಭಿಸಬೇಕೆಂಬ ಆಲೋಚನೆ ಶುರುವಾಗುತ್ತದೆ. ಅವರ ಬಳಿ ಬಿಡಿಗಾಸೂ ಇರಲಿಲ್ಲ. ಆದರೆ ಕನಸೊಂದು ಮನದಲ್ಲಿ ಹರಳುಗಟ್ಟಿತ್ತಲ್ಲ! ಅಂದು ಸುಧಾ ಮೂತರ್ಿಯವರು ಕೊಟ್ಟ ಹತ್ತು ಸಾವಿರ ರೂಪಾಯಿಯಿಂದ 1981ರಲ್ಲಿ ಒಂದು ಪುಟ್ಟ ಮನೆಯಲ್ಲಿ, ಇನ್ಫೋಸಿಸ್ ಕಂಪನಿ ಶುರು ಮಾಡುತ್ತಾರೆ. ಆರಂಭದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಾರೆ. ಆ ಕಂಪನಿ ಆರಂಭವಾದ 18 ವರ್ಷಗಳ ನಂತರ ಅದರ ಆದಾಯ ನೂರು ಮಿಲಿಯನ್ ಡಾಲರ್ ಆಗುತ್ತದೆ! ಜತೆಗೆ ಅಮೆರಿಕದ ಷೇರು ಮಾರುಕಟ್ಟೆಗೆ ಸೇರಿದ ಮೊದಲ ಭಾರತೀಯ ಕಂಪನಿ ಅನ್ನೋ ರೆಕಾಡರ್್ ಕೂಡಾ ಇನ್ಫೋಸಿಸ್ ಕಂಪನಿ ಮಾಡುತ್ತದೆ. ಅಂದು ಒಂದು ಪುಟ್ಟ ಮನೆಯಲ್ಲಿ ಶುರುವಾಗಿದ್ದ ಇನ್ಫೋಸಿಸ್ ಕಂಪನಿ ಇಂದು ವಿಶ್ವಮಟ್ಟಕ್ಕೆ ಬೆಳೆದು ನಿಲ್ಲುತ್ತದೆ ಎಂದರೆ ಆ ಕಂಪನಿ ಕಟ್ಟಿ ಬೆಳೆಸಿರುವ ಸುಧಾಮೂತರ್ಿ, ನಾರಾಯಣಮೂತರ್ಿಯವರ ಶ್ರಮ, ಶ್ರದ್ಧೆ ಎಂಥಾದ್ದಿರಬಹುದು ಊಹಿಸಿ!
ಹಲವಾರು ಬಾರಿ ಜೆ. ಆರ್. ಡಿ ಟಾಟಾ ಅವರೊಂದಿಗೆ ಮುಖಾಮುಖಿ ಮಾತುಕತೆ ನಡೆಸಿದ್ದ ಸುಧಾ ಮೂತರ್ಿ ಒಂದು ದಿನ "ನಾನು, ನನ್ನ ಪತಿ ಬೆಂಗಳೂರಿನಲ್ಲಿ ನಮ್ಮದೇ ಆದ ಒಂದು ಸಂಸ್ಥೆ ಮಾಡುತ್ತಿದ್ದೇವೆ" ಎಂದಾಗ ಜೆ.ಆರ್ಡಿ ಅವರು "ನೀವು ಖಂಡಿತ ಯಶಸ್ವಿಯಾಗುತ್ತೀರ, ಆಗ ನೀವು ದೇಶದ ಅಭಿವೃದ್ಧಿಗೂ ಕೆಲಸ ಮಾಡಿ" ಎಂದು ಹೇಳಿದರಂತೆ. ಮುಂದೆ ನಡೆದದ್ದು ಇತಿಹಾಸ. ಸುಧಾ ಮೂತರ್ಿ ಮತ್ತು ನಾರಾಯಣ ಮೂತರ್ಿಗಳು ಇಂದು ದೇಶಕ್ಕೆ ತಂದ ಹೊಸ ರೀತಿಯ ಅಭಿವೃದ್ಧಿಯ ಮುಖ, ಇಡೀ ಲೋಕವೇ ಬಲ್ಲ ವಿಷಯ. ಸುಧಾಮೂತರ್ಿ ಅವರು ಯಾವಾಗಲೂ ಹೇಳುತ್ತಾರೆ, 'ಖಜಠಿಜಚಿಣಜಜ ಣಛಿಛಿಜ ಟಚಿಞಜ ಠಿಜಡಿಠಟಿ ಚಿಡಿಡಿಠರಚಿಟಿಣ, ಡಿಜಠಿಜಚಿಣಜಜ ಜಿಚಿಟಣಡಿಜ ಟಚಿಞಜ ಠಿಜಡಿಠಟಿ ಜಜಠಿಜಟಿಜಜಟಿಣ. ಖಣಛಿಛಿಜ ಚಿಟಿಜ ಜಿಚಿಟಣಡಿಜ ಚಿಡಿಜ ಛಿಠಟಟಠಟಿ. ಖಿಜಥಿ ಣಜಚಿಛಿ ಡಿರಣ ಟಜಠಟಿ ಟಿ ಟಜಿಜ'. ಅತಿಯಾದ ಯಶಸ್ಸು ನಿಮ್ಮನ್ನು ಉದ್ಧಟ ವ್ಯಕ್ತಿಯನ್ನಾಗಿ ಮಾಡುತ್ತದೆ, ಸದಾಕಾಲ ಸೋಲುಂಡಮೇಲೆ ನೀವು ನಿವರ್ಿಣ್ಯರಾಗಿ ಬಿಡುತ್ತಿರಿ, ಜೀವನದಲ್ಲಿ ಸೋಲುಗಳು ಬೇಕೆ ಬೇಕು, ನಿಮ್ಮ ಕೈಮಿರಿದ ಘಟ ನೆಗಳು ನಡೆಯಲೇಬೇಕು, ಹಾಗೆ ಆದಾಗ ಮಾತ್ರ ಜೀವನ ಏನೆಂಬುದು ಅರ್ಥವಾಗಲು ಸಾಧ್ಯ, ಸಾಧನೆಗೆ ಬಲ ಬರುತ್ತದೆ.
ಇನ್ಫೋಸಿಸ್ ಹಾಗೂ ಟಿಸಿಎಸ್ ಎರಡು ಸಾಫ್ಟ್ವೇರ್ ಕಂಪನಿಗಳು ಬಹಳ ಉನ್ನತವಾದವು ಮತ್ತು ಸ್ಪಧರ್ಾಳುಗಳು, ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಶಸ್ತಿ ಪಡೆದ ನಂತರ ಅಲ್ಲಿಯೇ ಇದ್ದ ರತನ್ ಟಾಟಾರವರ ಕಾಲಿಗೆ ನಮಸ್ಕರಿಸಿ ಆಶೀವರ್ಾದ ಪಡೆದ ನಾರಾಯಣಮೂತರ್ಿ ಅವರ ಸರಳತೆಯನ್ನು ಮೆಚ್ಚಲೇಬೇಕಲ್ಲವೇ. ಆ ದೃಶ್ಯವನ್ನ ಕಂಡ ಅನೇಕರು ಮೂಕವಿಸ್ಮಿತರಾದರು. ಇನ್ಫೋಸಿಸ್ ಕೇವಲ ಲಾಭ ಗಳಿಕೆಗಾಗಿ ದುಡಿಯುತ್ತಿರುವ ಕಂಪನಿ ಎಂದು ಹಲವರು ತಿಳಿದಿದ್ದಾರೆ. ಆದರೆ ಇನ್ಫೋಸಿಸ್ ಕಂಪನಿ ಸಾಮಾಜಸೇವೆಯಲ್ಲೂ, ಬಡವರ ಒಳತಿಗಾಗಿ ಮುಂಚೂಣಿಯಲ್ಲಿದೆ. ನಾರಾಯಣಮೂತರ್ಿಯವರು ಇನ್ಫೋಸಿಸ್ ಡೆವೆಲಪ್ ಮಾಡುತ್ತ ಸಂಪಾದನೆ ಮಾಡುತ್ತಾರೆ. ಅದೇ ಸಂಪಾದನೆಯಿಂದ ಬಂದಂತಹ ಲಾಭದ ಪ್ರಮುಖ ಭಾಗವನ್ನು ಈ ಸಮಾಜದ ಏಳ್ಗೆಗಾಗಿ ಬಡವರು, ದೀನ-ದಲಿತರ ಉದ್ಧಾರಕ್ಕಾಗಿ ಬಳಸುತ್ತಿರುವುದು ನಿಮಗೆಲ್ಲ ತಿಳಿಯದ ವಿಷಯವೇನೂ ಅಲ್ಲ. ಇಂಥದ್ದೇ ಒಂದೊಳ್ಳೆ ಸಾಮಾಜಿಕ ಸೇವೆಯ ಉದ್ದೇಶದಿಂದ 1996 ರಲ್ಲಿ ಸುಧಾಮೂತರ್ಿಯವರ ನೇತೃತ್ವದಲ್ಲಿ ಇನ್ಫೋಸಿಸ್ ಫೌಂಡೇಶನ್ ಪ್ರಾರಂಭ ಮಾಡುತ್ತಾರೆ. ಆ ಫೌಂಡೇಶನ್ನಿನ ವಾಷರ್ಿಕ ಬಜೆಟ್ 330 ಕೋಟಿ ರೂಪಾಯಿ! ಇಡೀ ಫೌಂಡೇಶನ್ ಹ್ಯಾಂಡಲ್ ಮಾಡುವವರು ಕೇವಲ ಐದು ಜನ ಮಾತ್ರ. ಹಣದ ಬಗ್ಗೆ ಡಾ. ಸುಧಾ ಮೂತರ್ಿಯವರ ಮನದಾಳದ ಮಾತು "ಹಣವನ್ನು ಆ ಭಗವಂತ ನಮಗೆ ಕೊಟ್ಟಿರುವುದು ಆತನಿಗೆ ನೇರವಾಗಿ ಬಂದು ಜನರ ಕಷ್ಟಗಳನ್ನು ಆಲಿಸಲಿಕ್ಕಾಗುವುದಿಲ್ಲ. ಹಾಗಾಗಿ ನಮ್ಮ ಮೂಲಕ ಆ ಕೆಲಸವನ್ನು ಮಾಡಿಸುತ್ತಿದ್ದಾನೆ. ನಾವು ಇಲ್ಲಿ ನಿಮಿತ್ಯ ಮಾತ್ರ. ಎಲ್ಲವೂ ಆ ಭಗವಂತನ ಮಹಿಮೆಯಾಗಿದೆ". ಹಣದ ಬಗ್ಗೆ ಹೆಚ್ಚು ಒತ್ತು, ಮಹತ್ವ ಕೊಡುತ್ತಾ ಹೋದಷ್ಟು ಅದೇ ಮಾನದಂಡವಾಗಿ ಬಿಡುತ್ತದೆ. ನಾವು ಹೆಚ್ಚು ಹೆಚ್ಚು ಹಣ ಕೂಡಿಡುತ್ತ ಹೋದರೆ ಅದರಿಂದ ಮುಂಬರುವ ಜನರೇಶನ್ ಹಾಳಾಗಿ ಹೋಗುತ್ತದೆ. ನಾವೇ ಮುಂದೆ ಕುಳಿತು ಹಾಳು ಮಾಡುವ ಬದಲು, ರುಚಿಗೆ ತಕ್ಕಷ್ಟು ಉಪ್ಪು ಹೇಗೋ, ಮನುಷ್ಯನಿಗೂ ಕೂಡಾ ಹಾಗೇ ಅವಶ್ಯಕತೆಗಿಂತ ಹೆಚ್ಚಾಗಿ ಹಣ ಕೂಡಿಡುವುದರ ಬದಲಾಗಿ ಗಳಿಸಿದ ಬಹುತೇಕ ಸಂಪತ್ತನ್ನು ದಾನ ಮಾಡಬೇಕು. ಅದರಿಂದ ಜೀವನ ಬಹಳ ಸುಖಮಯವಾಗಿರುತ್ತದೆ. ಕಿತ್ತುಕೊಂಡು ತಿನ್ನುವವರ ಹೊಟ್ಟೆ ಎಂದೆಂದಿಗೂ ತುಂಬುವುದಿಲ್ಲ. ಆದರೆ ಹಂಚಿಕೊಂಡು ತಿನ್ನುವವರು ಎಂದಿಗೂ ಉಪವಾಸದಿಂದಿರಲು ಸಾಧ್ಯವೇ ಇಲ್ಲ. ಹಾಗಾಗಿ ಮನುಷ್ಯ ಜೀವನದಲ್ಲಿ ದಾನ ಕಾರ್ಯ ಬಹಳ ಮುಖ್ಯವಾದದ್ದು.
'ದಾನಂ ಪ್ರವಾಹ ಸಹಿತಂ ಶ್ರದ್ಧಾಯದಾನಂ' ದಾನ ಉಸಿರಾಟದಷ್ಟೇ ಶ್ರೇಷ್ಠ. ದಾನವನ್ನು ಕೊಡುವಾಗ ಅತ್ಯಂತ ಸ್ವಚ್ಛ ಮನಸ್ಸಿನಿಂದ ಅದನ್ನು ಕೊಡಬೇಕು. ಕೊಟ್ಟ ಮೇಲೂ ಅಹಂಕಾರ ಪಡಬಾರದು. ನಮ್ಮಲ್ಲಿ ಯಾವುದು ಒಳ್ಳೆಯದಿದೆಯೋ ಅದನ್ನು ಮಾತ್ರ ದಾನ ಮಾಡಬೇಕು" ಎಂಬ ದಾನದ ವಾಸ್ತವದ ಸತ್ಯವನ್ನು ಸುಧಾ ಮೂತರ್ಿಯವರ ತಂದೆ ಬಹಳ ಚೆನ್ನಾಗಿ ಅರಿತಿದ್ದರು. ತಮ್ಮ ತೋಟದಲ್ಲಿ ಎರಡು ಕ್ವಾಲಿಟಿಯ ಅಕ್ಕಿ ಬೆಳೆಯುತ್ತಿದ್ದರು ಅದನ್ನು ಕಣಜಗಳಲ್ಲಿ ಕೂಡಿಟ್ಟು, ಪ್ರತಿನಿತ್ಯ ಮನೆಗೆ ಬರುತ್ತಿದ್ದ ಭಿಕ್ಷುಕರಿಗೆ ತಮ್ಮ ಭತ್ತದ ಕಣಜದಿಂದ ಮೊದಲ ಕ್ವಾಲಿಟಿ ಅಕ್ಕಿಯನ್ನು ದಾನ ಮಾಡಿ, ತಾವು ಎರಡನೇ ಕ್ವಾಲಿಟೀಯ ಕೆಂಪು ಅಕ್ಕಿ ಬಳಸುತ್ತಿದ್ದರು. ಆಗ ಬಾಲಕಿಯಾಗಿದ್ದ ಸುಧಾರವರ ಮನಸ್ಸಿನ ಮೇಲೆ ಈ ಎಲ್ಲಾ ಘಟನೆಗಳು ಬಹಳ ಪ್ರಭಾವ ಬಿರಿದವು. ಮುಂದೆ ಸುಧಾ ಮೂತರ್ಿಯವರು ಈ ಎಲ್ಲಾ ಘಟನೆಗಳನ್ನು ತಮ್ಮ "ಕೆಂಪು ಅಕ್ಕಿಯ ಕಣಜ" ಅನ್ನುವ ಕೃತಿಯಲ್ಲಿ ಬಹಳ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ಅವರ ತಂದೆಯ ಈ ಗುಣವೇ ಅವರಿಗೆ ಇನ್ಫೋಸಿಸ್ ಫೌಂಡೇಶನ್ ಮೂಲಕ ಬಡವರ ಸೇವೆ ಮಾಡಲು ಬಹಳ ದೊಡ್ಡ ಪ್ರೇರಣೆಯಾಗುತ್ತದೆ. ಸುಧಾಮೂತರ್ಿಯವರ ಜೀವನದಲ್ಲಿ ನಡೆದಂತ ಕೆಲ ಪ್ರಸಂಗಗಳನ್ನು ಈ ಸಂದರ್ಭದಲ್ಲಿ ನಾವು ಸ್ಮರಿಸಬಹುದು:- ಒಮ್ಮೆ ಲಂಡನ್ ಏರ್ಪೋಟರ್್ ನಲ್ಲಿ ಫ್ಲೈಟ್ ಹತ್ತಲು ಕ್ಯೂನಲ್ಲಿ ನಿಂತಿರುತ್ತಾರೆ. ಆಗ ಒಬ್ಬ ಮಹಿಳೆ ಇವರನ್ನು ನೋಡಿ ನಿಮ್ಮ ಬ್ಯುಸಿನೆಸ್ ಪಾಸ್ ತೋರಿಸಿ ಎನ್ನುತ್ತಾರೆ. ಇದು ಬ್ಯಸಿನೆಸ್ ಕ್ಲಾಸ್ಗೆ ಇರುವ ಕ್ಯೂ, ನೀವು ಇರಬೇಕಾದದ್ದು ಅಲ್ಲಿ ಅಂತ ಎಕನಾಮಿಕಲ್ ಕ್ಲಾಸ್ನ ಕ್ಯೂ ತೋರಿಸುತ್ತಾರೆ. ಆಗ ಇನ್ನಿರ್ವ ಮಹಿಳೆಯರು, ಈ ಲೋಕಲ್ ಕ್ಲಾಸ್ ಜನರೊಂದಿಗೆ ವಾದಿಸಬಾರದೆಂಬುದಾಗಿ ಹೇಳಿ ಹೊರಟುಹೊಗುತ್ತಾರೆ, ಯಾಕೆಂದರೆ ಸುಧಾ ಮೂತರ್ಿ ಮೊದಲೆ ಸೀದಾ ಸಾದಾ ವ್ಯಕ್ತಿ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಹಾಗೇ ನಿಲ್ಲುತ್ತಾರೆ. ಬಹಳ ಆಶ್ಚರ್ಯಕರ ಸಂಗತಿ ಎಂದರೆ ಈ ಇರ್ವ ಮಹಿಳೆಯರು ಹೋಗಿದ್ದ ಆ ಕಾರ್ಯಕ್ರಮದಲ್ಲಿ ಡಾ. ಸುಧಾಮೂತರ್ಿಯವರೇ ಮುಖ್ಯ ಅತಿಥಿಗಳಾಗಿರುತ್ತಾರೆ! ಅವರನ್ನು ನೋಡಿದಾಕ್ಷಣ ಆ ಮಹಿಳೆಯರು ಆಶ್ಚರ್ಯಚಕಿತರಾಗುತ್ತಾರೆ. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸುಧಾ ಮೂತರ್ಿಯವರು ಹೇಳುತ್ತಾರೆ, 'ಖಿಜ ಛಜಚಿಣಣಥಿ ಠಜಿ ಚಿ ಠಿಜಡಿಠಟಿ ಟಿ /ಜಡಿ ಟಠಿಟಛಿಣಥಿ ಚಿಟಿಜ ಟಿಠಣ ಟಿ ಣಜ ಜಥಣಜಡಿಟಿಚಿಟ ಜಡಿಜಜ ಠಡಿ ಠಡಿಟಿಚಿಟಜಟಿಣ'. 'ಒಬ್ಬ ಮನುಷ್ಯನ ಅಂದ ಆತನ ಸರಳತೆಯಲ್ಲಿ ಇರುತ್ತದೆ ಹೊರತು ನಾವು ಹಾಕಿಕೊಳ್ಳುವ ಬಟ್ಟೆ ಆಭರಣಗಳಲ್ಲಿ ಅಲ್ಲ ಎಂಬ ಸಂದೇಶವನ್ನು ಅಲ್ಲಿ ಕೊಡುತ್ತಾರೆ.
ಒಮ್ಮೆ ಅವರು ರೈಲಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ 14 ವರ್ಷದ ಒಬ್ಬ ಬಾಲಕಿ ಹರಿದ ಬಟ್ಟೆಗಳ ಜೊತೆಗೆ ಅಲ್ಲಿನ ಸೀಟಿನ ಕೆಳಗೆ ಅವಿತು ಕುಳಿತಿರುತ್ತಾಳೆ. ಅಷ್ಟರಲ್ಲಿ ಟಿಸಿ ಬಂದು ಟಿಕೆಟ್ ಎಲ್ಲಿ ಅಂತ ಆ ಹುಡುಗಿಯನ್ನು ಗದರಿಸುತ್ತಾನೆ. ಆ ಬಾಲಕಿಯ ಬಳಿ ಟಿಕೆಟ್ ಇರುವುದಿಲ್ಲ. ನಂತರದ ಸ್ಟೇಷನ್ ಬಳಿ ಇಳಿದುಕೋ ಅಂತ ಸರಿಯಾಗಿ ಬೈಯುತ್ತಾನೆ. ಇದನ್ನು ಗಮನಿಸಿದ ಸುಧಾ ಮೂತರ್ಿಯವರು ಆ ಹುಡುಗಿಗೆ ಒಂದು ಟಿಕೆಟ್ ಕೊಳ್ಳುತ್ತಾರೆ. ತನ್ನ ಬಳಿ ಕೂಡಿಸಿ ಆಕೆಯನ್ನು ಮಾತನಾಡಿಸುತ್ತ ಕೇಳುತ್ತಾರೆ. ಆಗ ಆ ಹುಡುಗಿಗೆ ತಂದೆ-ತಾಯಿ ಇರದ ವಿಷಯ ತಿಳಿಯುತ್ತದೆ. ಆಕೆಯ ಸಂಬಂಧಿಕರೂ ಕೂಡ ನಿತ್ಯ ಊಟ ಕೊಡದೆ ಹೊಡೆಯುತ್ತಾರೆ ಎಂಬ ಸಂಗತಿ ತಿಳಿದಾಗ, ಆ ಹುಡುಗಿಯನ್ನು ಕರೆದುಕೊಂಡು ತಮ್ಮ ಫೌಂಡೇಶನ್ ಮೂಲಕ ಓದಿಸುತ್ತಾರೆ. ಸುಮಾರು 20 ವರ್ಷಗಳು ಕಳೆದ ನಂತರ ಸುಧಾ ಮೂತರ್ಿಯವರು ಕಾಲೇಜಿನ ಕಾರ್ಯಕ್ರಮವೊಂದನ್ನು ಮುಗಿಸಿ ಹೊಟೇಲ್ವೊಂದರಲ್ಲಿ ಊಟ ಮಾಡುತ್ತಾರೆ. ಆ ಊಟದ ಬಿಲ್ಲನ್ನು ಬೇರೆ ಯಾರೋ ಪೇ ಮಾಡಿಬಿಟ್ಟಿರುತ್ತಾರೆ. ವಿಚಾರಿಸಿದ ನಂತರ ಆ ವೇಟರ್ ಒಬ್ಬ ಯುವತಿಯನ್ನು ತೋರಿಸುತ್ತಾನೆ. ಆಗ ಸುಧಾ ಮೂತರ್ಿಯವರು ಆ ಯುವತಿಯನ್ನು ನೀವು ಯಾಕೆ ಹೀಗೆ ಮಾಡಿದ್ರಿ? ಅಂತ ಕೇಳುತ್ತಾರೆ, ಆಕೆ ಕೊಟ್ಟ ಉತ್ತರ, 'ನೀವು ಅಂದು ನನ್ನ ಟ್ರೇನ್ ಟಿಕೇಟ್ ಪೇ ಮಾಡಿದ್ದೀರಿ, ಅದಕ್ಕೆ ನಾನು ಕೃತಜ್ಞತೆಯಾಗಿ ನಿಮ್ಮ ಊಟದ ಬಿಲ್ ಪೇ ಮಾಡಿದೆ ಎಂದು ಹೇಳುತ್ತ ಸಾಷ್ಟಾಂಗ ನಮಸ್ಕಾರ ಮಾಡುತ್ತಾಳೆ. ಅಂದೊಮ್ಮೆ ಹರಿದ ಬಟ್ಟೆ ಹಾಕಿದ ಹುಡುಗಿ ಅಮೆರಿಕದ ಬಹು ದೊಡ್ಡ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆಂದರೆ ಅದಕ್ಕೆ ಕಾರಣ ಸುಧಾಮೂತರ್ಿ ಅವರು.
ಇನ್ನೊಂದು ಘಟನೆ ನೋಡಿ, ಅದೊಂದು ಉರಿನಲ್ಲಿ ಮಹಿಳೆಯರು ಹೊಟ್ಟೆಪಾಡಿಗಾಗಿ ವೇಶ್ಯಾವಾಟಿಯನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದರು. ಅದು ತಿಳಿಯುತ್ತಿದ್ದಂತೆ ಸುಧಾ ಮೂತರ್ಿಯವರು ಅವರ ಊರಿಗೆ ಹೋಗುತ್ತಾರೆ. ಆದರೆ ಮೊದಮೊದಲು ಇವರಿಗೆ ಸಹಕಾರ ಸಿಗುವುದಿಲ್ಲ, ಇವರ ಮೇಲೆ ಚಪ್ಪಲಿ ಎಸೆಯುತ್ತಾರೆ. ಬೈಗುಳಗಳ ಸುರಿಮಳೆಗೈಯುತ್ತಾರೆ, ಪರಿವರ್ತನೆಗಾಗಿ ಪಣತೊಟ್ಟ ಸುಧಾಮೂತರ್ಿಯವರು ಅವರೊಂದಿಗೆ ಬೆರೆತು ಅವರ ಮನಃ ಪರಿವರ್ತನೆ ಮಾಡುವಲ್ಲಿ ಯಶಸ್ಸನ್ನ ಕಾಣುತ್ತಾರೆ, ಅಲ್ಲಿನ ಸಾವಿರಾರು ಮಹಿಳೆಯರಿಗೆ ಕೆಲಸ ಕೊಡಿಸುತ್ತಾರೆ. ಆ ಮೂಲಕ ಅವರನ್ನು ವೇಶ್ಯಾವಾಟಿಕೆ ವೃತ್ತಿಯಿಂದ ಹೊರತರುತ್ತಾರೆ.
ಕನರ್ಾಟಕದ ಪ್ರತಿಯೊಂದು ಶಾಲೆಯಲ್ಲಿ ಲೈಬ್ರರಿ ಮತ್ತು ಕಂಪ್ಯೂಟರ್ ಇರುವಂತೆ ಸರಕಾರಕ್ಕೆ ಸಹಕಾರವನ್ನ ನೀಡುತ್ತಿದ್ದಾರೆ, ದೇಶಾದ್ಯಾಂತ 14 ಸಾವಿರದಷ್ಟು ಸಾರ್ವಜನಿಕ ಶೌಚಾಲಯಗಳನ್ನು ನಿಮರ್ಿಸುವುದರ ಜೊತೆಗೆ ಸರಕಾರದ 60 ಸಾವಿರದಷ್ಟು ಶಾಲೆಯ ಲೈಬ್ರರಿಗಳಿಗೆ ಹತ್ತಾರು ಕೋಟಿ ಮೌಲ್ಯದ ಪುಸ್ತಕಗಳನ್ನು ವಿತರಿಸಿದ್ದಾರೆ. ಬೆಂಗಳೂರಿನಲ್ಲಿ ಕ್ಯಾನ್ಸರ್ ರೋಗಿಗಳಿಗಾಗಿ ಕ್ಯಾನ್ಸರ್ ಆಸ್ಪತ್ರೆ ನಿಮರ್ಾಣ ಮಾಡಿದ್ದಾರೆ, ಬಡ ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಸ್ಕಾಲರ್ಶಿಪ್ ಸಹ ನೀಡುತ್ತಿದ್ದಾರೆ. ಸೈನ್ಯದಲ್ಲಿ ಹುತಾತ್ಮರಾದ ವೀರ ಯೋಧರ ಕುಟುಂಬಗಳ ನೆರವಿಗೋಸ್ಕರ ಪ್ರತಿ ವರ್ಷ 10 ಕೋಟಿಯಷ್ಟು ಹಣ ಮೀಸಲಿಟ್ಟಿದ್ದಾರೆ. ಪ್ರವಾಹ ಸಂತ್ರಸ್ತರಿಗೆ, ಕರೋನಾ ಪೀಡಿತರಿಗೆ ತಮ್ಮ ಸಂಸ್ಥೆಯಿಂದ ಸೂರು ಕಲ್ಪಿಸಿ, ಅಗತ್ಯತೆ ವಸ್ತುಗಳನ್ನು ಪೂರೈಸುವ ಮೂಲಕ ಮಾತೃ ಹೃದಯದ ಪ್ರೀತಿಯನ್ನು ಸಮಾಜಕ್ಕೆ ಪರಿಚಯಿಸಿದ್ದಾರೆ. ಸುಧಾ ಮೂತರ್ಿಯವರು ಇನ್ಫೋಸಿಸ್ ಫೌಂಡೇಶನ್ನ್ನು ಆರಂಭ ಮಾಡಿದ ನಂತರ ಸಮಾಜದಲ್ಲಿನ ದುಃಖ, ಸಾವು, ನೋವು, ನಲಿವು, ಸುಖ ಎಲ್ಲವೂ ಕೂಡಾ ಬಹಳ ಸರಳವಾಗಿ ಅವರಿಗೆ ಅನುಭವಕ್ಕೆ ಬರಲಾರಂಭಿಸಿದವು. ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆಯಂತೂ ಅಪಾರ. ಕಂಪ್ಯೂಟರ್ ಇಂಜಿನೀಯರ್ಗೂ ಮತ್ತು ಸಾಹಿತ್ಯಕ್ಕೂ ಏನು ಸಂಬಂಧ ಅಂತ ಕೇಳಿದರೆ 'ಎತ್ತಣ ಮಾಮರ ಎತ್ತಣ ಕೋಗಿಲೆ' ಅನ್ನುವ ಹಾಗೇ ಇರುತ್ತದೆ ನಿಜ. ಆದರೆ ಸುಧಾಮೂತರ್ಿ ಅವರು ಇದನ್ನು ಸಾಕಾರಗೊಳಿಸಿದರು. ಇವರು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಕೆಲವು ಕೃತಿಗಳು ಕನ್ನಡ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿವೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಇವರ ಕೊಡುಗೆ ಬಲು ಅಪಾರ. ಸುಧಾಮೂತರ್ಿ ಅವರಿಗೆ ಪದ್ಮಶ್ರೀ, ರಾಜ್ಯೋತ್ಸವ, ಗೌರವ ಡಾಕ್ಟರೇಟ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರ ಸಾಧನೆಯನ್ನು ಗುರುತಿಸಿ ಹುಡುಕಿಕೊಂಡು ಬಂದಿವೆ. ಅವರ ಸರಳ ಬದುಕಿನ ಸಾಧನೆಗೆ ಇಷ್ಟೊಂದು ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದರೂ ಅವರಿಗೆ ಕಿಂಚಿತ್ತೂ ಅಹಂ ಅನ್ನುವುದಿಲ್ಲ. 'ಎಲ್ಲರೊಳಗು ಒಂದಾಗು ಮಂಕು ತಿಮ್ಮ ಅನ್ನೋ ಡಿವಿಜಿ ಅವರ ಮಾತಿನಂತೆ ಎಲ್ಲರೊಂದಿಗೆ ಅತ್ಯಂತ ಸರಳತೆಯಿಂದಿದ್ದಾರೆ. ಅವರ ಈ ಸರಳ ಬದುಕಿಗೆ ಡಾ. ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟರು ಬರೆದ ಕವಿತೆಯ ಸಾಲುಗಳು ಹಿಡಿದ ಕೈಗನ್ನಡಿಯಂತಿವೆ. 'ಇತಜಟಿ ಜಿ ಟತಜ ಜಿಠಡಿ ಣತಿಠ ಜಚಿಥಿ, ಟತಜ ಟಞಜ ಚಿಟಿ ಇಚಿರಟಜ ಜಿಟಥಿಟಿರ ರ ಟಿ ಣಜ ಞಥಿ ಟಚಿಞಟಿರ ಠಿಜಠಠಿಟಜ ಣಠ ಟಠಠಞ ಚಿಣ ಥಿಠಣ ತಿಣ ತಿಠಟಿಜಜಡಿ ಚಿಟಿಜ ಣಡಿಠಿಡಿಜ'. 'ಎರಡೇ ದಿನ ಬಾಳಿದರೂ ಗರುಡನಂತೆ ಬಾಳಬೇಕು, ಗಗನದಗಲ ಹಾರಬೇಕು ರೆಕ್ಕೆಯ ಬೀಸುತ, ಕಂಡ ಜನ ಬೆರಗುಗೊಂಡು ವ್ಹಾ ಏನ್ಚಂದ ಅನ್ನಬೇಕು, ಊಗೇ ಊಗೇ ಕೂಗಬೇಕು, ಮೆಟ್ಟಿ ತೋರುತ' ಹೀಗೆ ಅವರ ಸರಳತೆಯ ಛಾಯೆ ಸಾಮಾನ್ಯ ಜನರ ಹೃದಯದ ಮೇಲೆ ಅಚ್ಚಳಿಯದ ಮುದ್ರೆಯನ್ನೊತ್ತಿದೆ.
`1950 ರ ಅಗಷ್ಟ 19 ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಸುಶಿಕ್ಷಿತ ಕುಟುಂಬವೊಂದರಲ್ಲಿ ಜನಿಸಿದ ಸುಧಾ ಮೂತರ್ಿಯವರಿಗೆ ಅವರ ತಂದೆ ಹಾಗೂ ಅಜ್ಜನ ಶಿಸ್ತು, ಸಮಯ ಪ್ರಜ್ಞೆಯೇ ಅವರಿಗೆ ಬಹಳ ಧೈರ್ಯ ಮತ್ತು ಪ್ರೇರಣೆಯನ್ನು ನೀಡಿತ್ತು. ಹಾಗಾಗಿಯೇ ಅವರು ನಮಗೆಲ್ಲ ಆದರ್ಶರಾದರು. ಕನರ್ಾಟಕ ಕಂಡ ಶ್ರೇಷ್ಠ ಮಹಿಳೆಯರಲ್ಲಿ ಸುಧಾಮೂತರ್ಿ ಒಬ್ಬರು. ಬದುಕು ಬಡತನದಲ್ಲಿ ಆರಂಭವಾದರೂ ಮುಂದುವರೆಯುತ್ತಿರುವುದು ಮಾತ್ರ ಪರಿಶುದ್ಧ ಶ್ರೀಮಂತಿಕೆಯಲ್ಲಿ.ತನ್ನ ಮಾತೃ ಹೃದಯದಲ್ಲಿರುವ ಅಪಾರ ಪ್ರೀತಿಯನ್ನು ಬಡವರಿಗೆ, ನೊಂದವರಿಗೆ ಅದೆಷ್ಟೋ ಮಂದಿ ಸಂತ್ರಸ್ತರ ನೆರವಿಗೆ ಬರುವುದರ ಮೂಲಕ ಹಂಚುತ್ತಿದ್ದಾರೆ.ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಉನ್ನತ ಸ್ಥಾನದಲ್ಲಿದ್ದರೂ ತಾಯಿಭಾಷೆ,ನೆಲದ ಋಣ ತೀರಿಸುವ ಕೆಲಸ ಮಾಡುತ್ತಲೇ ಇರುತ್ತಾರೆ.ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ಅಗ್ರಜನೆನಿಸಿಕೊಂಡಿರುವ ಇನ್ಫೋಸಿಸ್ ಸಂಸ್ಥೆಯ ಒಡತಿಯಾಗಿದ್ದರೂ ತನ್ನನು ತಾನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದಲ್ಲದೇ ಬರಹಗಾತರ್ಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿ ಹಣ , ಶ್ರೀಮಂತಿಕೆ ಬದುಕಿನ ಒಂದು ಭಾಗವಷ್ಟೇ ಎನ್ನುವುದನ್ನು ಸದಾ ನಿರೂಪಿಸುತ್ತಿದ್ದಾರೆ. 'ಘಜ ಛಿಠಟಠಿಚಿಡಿಜ ಟಠಣ ಠಜಿ ಣಟಿರ ಠಟಿ ಣಜ ಜಚಿಡಿಣ ಣಠ ತಿಠಟಜಟಿ ಜಿಠಡಿ ಣಜಥಿ ಥಿಟಛಠಟದಜ ಚಿಞಣ. ಖಣಜಚಿ ಒಣಡಿಣಥಿ ಣಛಿ ಚಿಟಿ ಟಿಠಿಡಿಟಿರ ತಿಠಟಚಿಟಿ ಠಜಿ ಠಣಡಿ ಣಟಜ' ಇಡೀ ಭೂ ಮಂಡಲದಲ್ಲಿರುವ ಬಹುತೇಕ ವಸ್ತುಗಳನ್ನು ಹೆಣ್ಣಿಗೆ ಹೋಲಿಸುತ್ತೇವೆ. ಆ ಇಡೀ ಹೆಣ್ಣಿನ ಸಂಕುಲಕ್ಕೆ ಕಳಶಪ್ರಾಯ ಆದರ್ಶಮೂತರ್ಿಯಾದ ಡಾ. ಸುಧಾ ಮೂತರ್ಿ ಅಮ್ಮನವರಿಗೆ ಜನ್ಮದಿನದ ಹಾದರ್ಿಕ ಶುಭಾಶಯಗಳು.