ನವದೆಹಲಿ,
ಏ 19 ಕೋವಿಡ್-19 ತಹಬದಿಗೆ ಬಂದಿರದ ಕಾರಣ ದೇಶದ ಪ್ರತಿಷ್ಠಿತ ಫುಟ್ಬಾಲ್ ಲೀಗ್ ಗಳಲ್ಲಿ
ಒಂದಾದ ಐ-ಲೀಗ್ ಟೂರ್ನಿಯ ಉಳಿದ 28 ಪಂದ್ಯಗಳನ್ನು ರದ್ದುಗೊಳಿಸಿದ ನಂತರ ಮೋಹನ್ ಬಗಾನ್
ತಂಡವನ್ನು ಶನಿವಾರ ಅಧಿಕೃತ ಚಾಂಪಿಯನ್ ಎಂದು ಘೋಷಿಸಲಾಗಿದೆ.ಅಖಿಲ ಭಾರತ ಫುಟ್ಬಾಲ್
ಒಕ್ಕೂಟದ ಹಿರಿಯ ಉಪಾಧ್ಯಕ್ಷ ಮತ್ತುಲೀಗ್ ಸಮಿತಿಯ ಮುಖ್ಯಸ್ಥರಾದ ಸುಬ್ರತಾ ದತ್ತ
ನೇತೃತ್ವದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಏ.18ರಂದು ನಡೆದ ಎಐಎಫ್ ಎಫ್ ಲೀಗ್ ಸಮಿತಿ
ಸಭೆಯಲ್ಲಿ ಕೊರೊನಾ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಲಾಯಿತು. ಅಂತಿಮವಾಗಿ ಲೀಗ್
ನ ಇತರ ಪಂದ್ಯಗಳನ್ನು ರದ್ದುಗೊಳಿಸಿ 2019-20ನೇ ಆವೃತ್ತಿಯನ್ನು ಮುಕ್ತಾಯಗೊಳಿಸಲು
ತೀರ್ಮಾನಿಸಲಾಗಿದೆ. ಹೀಗಾಗಿ ಮಾರ್ಚ್ 14ರಂದು ಅಮಾನತು ಘೋಷಣೆವರೆಗೂ ಐ-ಲೀಗ್ ಟೂರ್ನಿಯ
ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದ ಮೋಹಾನ್ ಬಗಾನ್ ತಂಡವನ್ನು 2019-20ರ
ಐ-ಲೀಗ್ ಚಾಂಪಿಯನ್ ಎಂದು ಘೋಷಿಸಲಾಗಿದೆ. ಎಐಎಫ್ ಎಫ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.