ಬೆಂಗಳೂರು,
ಮಾ 27, ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಗೊಂಡಿರುವ ಬಗ್ಗೆ ಪ್ರಧಾನಿ ನರೇಂದ್ರ
ಮೋದಿ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದು, ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವಂತೆ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದ್ದಾರೆ.ಯಡಿಯೂರಪ್ಪ ಅವರೊಂದಿಗೆ ಇಂದು ನರೇಂದ್ರ ಮೋದಿ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದ್ದು, ಲಾಕ್ ಡೌನ್ ಇನ್ನಷ್ಟು ಬಿಗಿಗೊಳಿಸುಗಂತೆ ಸೂಚಿಸಿದ್ದಾರೆ.ಸುದ್ದಿಗಾರರ
ಜತೆ ಮಾತನಾಡಿ ಯಡಿಯೂರಪ್ಪ, ಬೆಳಗ್ಗೆ 9.30ಕ್ಕೆ ಪ್ರಧಾನಿ ನರೇಂದ್ರ ಮೋದಿ ತಮ್ಮೊಂದಿಗೆ
ಮಾತನಾಡಿದ್ದು, ಲಾಕ್ ಡೌನ್ ಇದ್ದರೂ ಕರ್ನಾಟಕದಲ್ಲಿ ಇನ್ನೂ ಓಡಾಟ ಮುಂದುವರಿದಿದೆ.
ಹೀಗಾಗಿ ಇನ್ನಷ್ಟು ಬಂದೋಬಸ್ತ್ ಬಿಗಿಗೊಳಿಸುವಂತೆ ಸೂಚನೆ ಕೊಟ್ಟಿದ್ದಾರೆ ಎಂದರು. ಕೊರೋನಾ
ಸೋಂಕಿತರು ಶೇ.99 ರಷ್ಟು ಗುಣಮುಖರಾಗುತ್ತಾರೆ. ಆದರೂ ಜನ ಗಾಬರಿಗೊಂಡಿದ್ದಾರೆ. ಕೆಲ
ಮಾಧ್ಯಮಗಳು ಭಯ, ಭೀತಿ ಮೂಡಿಸುತ್ತಿವೆ. ರೋಗ ವಾಸಿಮಾಡಲು ಎಲ್ಲ ಸಿದ್ಧತೆ
ಮಾಡುತ್ತಿದ್ದು, ಇದಕ್ಕಾಗಿ ಸೂಕ್ತ ವೈದ್ಯಕೀಯ ವ್ಯವಸ್ಥೆ ಆಗಿದೆ ಎಂದು
ಸ್ಪಷ್ಟಪಡಿಸಿದರು.ಅಗತ್ಯ ವಸ್ತುಗಳನ್ನು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಿದರೇ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದರು.