ನಾಸಿಕ್, ಸೆ 18 ವಿಧಾನಸಭಾ ಚುನಾವಣೆ ಸಮೀಪವಾಗುತ್ತಿರುವ ಹಿನ್ನಲೆಯಲ್ಲಿ ಬಿಜೆಪಿ ನಾಯಕರು ಮೇಲೀಂದ ಮೇಲೆ ಮಹಾರಾಷ್ಟ್ರಕ್ಕೆ ಬರುತ್ತಿದ್ದಾರೆ ಪ್ರಧಾನಿ ನರೇಂದ್ರ ಮೋದಿ ನಾಳೆ ನಾಸಿಕ್ ಗೆ ಭೇಟಿ ನೀಡಲಿದ್ದು ಈ ಹಿನ್ನಲೆಯಲ್ಲಿ ನಗರದಲ್ಲಿ ಭಾರಿ ಬಿಗಿಭದ್ರತೆ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಮೂರು ಹಂತದ ಮಹಾಜನದೇಶ ಯಾತ್ರೆಯ ಮುಕ್ತಾಯದ ಅಂಗವಾಗಿ ಪ್ರಧಾನಮಂತ್ರಿ ನರೆಂದ್ರ ಮೋದಿ ಅವರು ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.ಮುಖ್ಯಮಂತ್ರಿಯವರ ಮಹಾಜನದೇಶ ಯಾತ್ರೆ ನಗರಕ್ಕೆ ಆಗಮಿಸುತ್ತಿದೆ. ಇದರ ಹಿನ್ನಲೆಯಲ್ಲಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿದೆ.
ನಾಲ್ಕು ಉಪ ಪೊಲೀಸ್ ಆಯುಕ್ತರು, ಹತ್ತು ಸಹಾಯಕ ಆಯುಕ್ತರು, 22 ಪೊಲೀಸ್ ಇನ್ಸ್ಪೆಕ್ಟರ್ಗಳು, 35 ಸಹಾಯಕ ಇನ್ಸ್ಪೆಕ್ಟರ್ಗಳು ಮತ್ತು ಸಬ್ ಇನ್ಸ್ಪೆಕ್ಟರ್ಗಳು, 888 ಪೊಲೀಸರು, 600 ಮಹಿಳಾ ಪೊಲೀಸರು, 204 ಟ್ರಾಫಿಕ್ ಪೊಲೀಸರು, ರಾಜ್ಯ ಕಾಯ್ದಿರಿಸಿದ ಪೊಲೀಸ್ ಪಡೆಯ ಎರಡು ಘಟಕಗಳು, ಗಲಭೆ ನಿಯಂತ್ರಣ ದಳ ಮತ್ತು ಕ್ಷಿಪ್ರ ಕಾರ್ಯ ಪಡೆಗಳನ್ನು ನಿಯೋಜಿಸಲಾಗಿದೆ.