ಲೋಕದರ್ಶನ ವರದಿ
ಕುಮಟಾ,8 : ಅಕ್ಷರ ದಾಸೋಹ ನೌಕರರು ಬದ್ದತೆ, ಪ್ರಾಮಾಣಿಕತೆ, ವಿಶ್ವಾಸಾರ್ಹತೆಯಿಂದ ಸೇವೆ ಗೈಯುವ ಜೊತೆಗೆ ಚುನಾವಣೆ ಮುಂತಾದ ವಿಶೇಷ ಸಂದರ್ಭದಲ್ಲಿ ಇವರಿಂದ ಹೆಚ್ಚುವರಿ ಸೇವೆಯನ್ನು ಪಡೆಯಲಾಗುತ್ತದೆ. ಹೀಗಿದ್ದರೂ ಪ್ರಾಮಾಣಿಕತೆ ಹಾಗೂ ದುಡಿಮೆಗೆ ಬೆಲೆ ಇಲ್ಲದಂತಾಗಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಮುಖ ಕಾಮರ್ಿಕ ವರ್ಗದ ಸಾಥ ಬಿಟ್ಟು, ಕಾಮರ್ಿಕರ ಬಾಳಲ್ಲಿ ಕಪ್ಪು ದಿನಗಳನ್ನು ತಂದಿದ್ದಾರೆ ಎಂದು ಅಖಿಲ ಭಾರತ ಅಕ್ಷರ ದಾಸೋಹ ನೌಕರರ ಸಂಘದ ರಾಷ್ಟ್ರೀಯ ಅಧ್ಯಕ್ಷ ಎಸ್ ವರಲಕ್ಷ್ಮಿ ಕೇಂದ್ರ ಸಕರ್ಾರದ ವಿರುದ್ದ ಕಿಡಿಕಾರಿದರು.
ಅವರು ಶನಿವಾರ ಪಟ್ಟಣದ ದೇವರ ಹಕ್ಕಲಿನ ಶಾಂತಿಕಾ ಪರಮೇಶ್ವರಿ ಸಭಾಭವನದಲ್ಲಿ ಅಕ್ಷರ ದಾಸೋಹ ನೌಕರರ ಉತ್ತರ ಕನ್ನಡ ಜಿಲ್ಲಾ 4ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲೊ ಒಂದಿಷ್ಟು ಬಡ ಮಕ್ಕಳು ಊಟ ಮಾಡಿದ ಚಿತ್ರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದಶರ್ಿಸಿ ಮಾನ್ಯತೆ ಪಡೆದು ಗುತ್ತಿಗೆ ಪಡೆಯಲು ಮುಂದಾಗಿರುವ ಇಸ್ಕಾನ್ ಪ್ರಯತ್ನವನ್ನು ನಮ್ಮ ಸಂಘಟನೆ ತಡೆದಿದೆ. ಕೇಂದ್ರ ಸಕರ್ಾರ ಶೇ 40 ಅನುದಾನ ಕಡಿತಗೊಳಿಸಿ ಕೇವಲ 1939 ಕೋಟಿ ಅನುದಾನ ನೀಡಿದೆ. ಸಕರ್ಾರ ಜವಾಬ್ದಾರಿಯಿಂದ ಜಾರುತ್ತಿದೆ. ಬಡ ಮಕ್ಕಳಿಗೆ ನೀಡುವ ಅನ್ನದಲ್ಲಿಯ ಹಣವನ್ನೂ ಉಳಿಸಲು ಹೊರಟಿದೆ. ಕೇಂದ್ರ ಸಕರ್ಾರ ಕೇವಲ 600 ರೂ ನೀಡುತ್ತದೆ. ರಾಜ್ಯ ಸಕರ್ಾರ 2000 ರೂ ನೀಡುತ್ತದೆ. ದೇಶದಲ್ಲಿ 12 ಕೋಟಿ ರಾಜ್ಯದಲ್ಲಿ 54 ಲಕ್ಷ ಮಕ್ಕಳಿಗೆ ಏಕಕಾಲದಲ್ಲಿ ಹಾಲು ಊಟ ನೀಡಲಾಗುತ್ತದೆ. ಅಕ್ಷರ ದಾಸೋಹ ಕೇವಲ ವಿದ್ಯಾಥರ್ಿಗಳಿಗೆ ಊಟ ನೀಡುವ ಯೋಜನೆ ಅಲ್ಲ. ಈ ಯೋಜನೆ ಹಲವು ಉತ್ತಮ ಕಲ್ಪನೆಯನ್ನು ಹೊಂದಿದೆ. ಮಗುವಿನ ಬುದ್ದಿಯ ಬೆಳವಣಿಗೆ, ಗ್ರಹಣ ಶಕ್ತಿ, ಆರೋಗ್ಯ ವರ್ಧನೆ ಈ ಯೋಜನೆಯ ಬಹುಮುಖ್ಯ ಉದ್ದೇಶವಾಗಿದೆ. ಅಲ್ಲದೆ ಲಿಂಗ ತಾರತಮ್ಯ ಸಹ ಇದು ತೊಲಗಿಸಬಲ್ಲದು. ಇಂತಹ ಯೋಜನೆಯಲ್ಲಿ ತಮ್ಮನ್ನು ತೊಡಗಸಿಕೊಂಡಿರುವ ನೌಕರರ ಹಿತ ಕಾಯುವದು ಸಕರ್ಾರದ ಜವಾಬ್ದಾರಿ. ಆದರೆ ಈ ಯೋಜನೆಯನ್ನು ಖಾಸಗಿಕರಣಗೊಳಿಸಲು ಸಕರ್ಾರ ಹುನ್ನಾರ ನಡೆಸುತ್ತಿದೆ. ಸಕರ್ಾರಕ್ಕೆ ಕೆಲಸವಾಗಬೇಕು. ಹಣ ಖಚರ್ಾಗಬಾರದು. ಇದು ಕಾಮರ್ಿಕರಿಗೆ ನ್ಯಾಯ ನೀಡುವ ಧೋರಣೆಯಲ್ಲ ಎಂದು ಅವರು ಸಕರ್ಾರದ ವಿರುದ್ಧ ಕಟಕಿಯಾಡಿದರು.
ಅಲ್ಲದೇ ಈ ನೌಕರರು ಲೈಂಗಿಕ ಕಿರುಕುಳು, ದಬ್ಬಾಳಿಕೆ ಅನುಭವಿಸುವ ಪ್ರಸಂಗಗಳೂ ಉಂಟು. ಸ್ವತಂತ್ರ್ಯ ಭಾರತದಲ್ಲಿ ಅಕ್ಷರ ದಾಸೋಹ ನೌಕರರು ಸ್ವಾತಂತ್ರ್ಯ ಕಳೆದುಕೊಂಡಿದ್ದಾರೆ. ಇಂದು ಉದ್ಯೋಗದ ವ್ಯಾಖ್ಯಾನ ನಿಜ ಅರ್ಥದಲ್ಲಿ ಮರೆಯಾಗುತ್ತಿದೆ. ನೌಕರರ ಪರ ಸಕರ್ಾರದ ಧೋರಣೆ ಬದಲಾಗದಿದ್ದರೆ ತೀವ್ರ ಹೋರಾಟ ನಡೆಸುವದಾಗಿ ಅವರು ಸಕರ್ಾರವನ್ನು ಎಚ್ಚರಿಸಿದ್ದಾರೆ.
ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷ ತಿಲಕ್ ಗೌಡ ಮಾತನಾಡಿ, ಇಂದು ಅಧಿಕಾರದ ಆಸೆಗಾಗಿ ಸಮಾಜವನ್ನು ಅಸ್ಥಿರಗೊಳಿಸುವ ಅರ್ಥಹೀನ ಹೋರಾಟಗಳನ್ನು ನೋಡುತ್ತಿದ್ದೇವೆ. ಆದರೆ ಕಾಮರ್ಿಕರು, ಮದ್ಯಮ ವರ್ಗ ಮತ್ತು ಬಡವರ ಪರವಾಗಿ ಹೋರಾಟಗಳು ನಡೆಯುತ್ತಿಲ್ಲ. ಇಂದಿನ ಹೋರಾಟಗಳು ಕೇವಲ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ನಡೆಯುತ್ತಿರುವದು ಪ್ರತಿನಿತ್ಯ ನೋಡುತ್ತಿದ್ದೇವೆ. ದೇಶದಲ್ಲಿ ಕನಿಷ್ಟ ಕೂಲಿ ಕಾಯಿದೆ ಜಾರಿಯಲ್ಲಿದ್ದರೂ ಅದರ ಸಮರ್ಪಕ ಅನುಷ್ಠಾನವಾಗುತ್ತಿಲ್ಲ. ಕಾಮರ್ಿಕರ ಹಿತಕ್ಕಾಗಿ ಹೋರಾಟ ಸಮ್ಮೇಳನಗಳು ನಿರಂತರ ನಡೆಯಬೇಕು ಎಂದರು.
ಕನರ್ಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಯಮುನಾ ಗಾಂವಕರ್ ಅಧ್ಯಕ್ಷತೆ ವಹಿಸಿದ್ದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದಶರ್ಿ ಸಿ ಆರ್ ಶಾನಭಾಗ, ಅಕ್ಷರ ದಾಸೋಹ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಗಂಗಾ ನಾಯ್ಕ, ತಿಮ್ಮಪ್ಪ ಗೌಡ, ಗೀತಾ, ಗಣೇಶ ರಾಠೋಡ್, ಎಚ್ ಬಿ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.