ಜ್ಯೋತಿ ಬೆಳಗಲು ಮೋದಿ ಕರೆ; ಬೆಂಬಲಿಸುವಂತೆ ನಟಿ ತಾರಾ ಮನವಿ

ಬೆಂಗಳೂರು,‌ ಏ‌‌. 3,ಕೊರೊನಾ ವಿರುದ್ಧ ಏಕತೆಯ ಮಂತ್ರ‌ ಜಪಿಸಲು ಪ್ರಧಾನಿ ನರೇಂದ್ರ ಮೋದಿ ಏಪ್ರೀಲ್  5ರಂದು ದೇಶಾದ್ಯಂತ  ಜ್ಯೋತಿ ಬೆಳಗಿಸಲು ಕರೆ‌‌‌ ನೀಡಿದ್ದನ್ನು ಮೇಲ್ಮನೆ‌ ಮಾಜಿ ಬಿಜೆಪಿ ಸದಸ್ಯೆ,‌ ನಟಿ‌‌‌ ತಾರಾ ಅನುರಾಧಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಏಪ್ರಿಲ್ 5 ರಂದು ಪ್ರತಿ ಮನೆಯಲ್ಲಿ ದೀಪ ಹಚ್ಚುವ ಮೂಲಕ  ನಾವೆಲ್ಲರೂ ಒಂದೇ ಎಂಬ ಒಗ್ಗಟ್ಟಿನ ಸಂದೇಶ ಸಾರಬೇಕು. ಮೋದಿಯವರ ಸಂದೇಶ ತಪ್ಪದೇ ಪಾಲಿಸೋಣ. ಸಾವಿರಾರು ವರ್ಷಗಳ ಹಿಂದಿನಿಂದ ನಮ್ಮ ಹಿರಿಯರು, ಋಷಿ ಮುನಿಗಳು ಜ್ಯೋತಿ ಬೆಳಗುವುದನ್ನೇ ಹೇಳಿದ್ದರು. ದೀಪ ಹಚ್ಚುವ ಮೂಲಕ ಅಂಧಕಾರ ಓಡಿಸೋಣ ಎಂದರು.ಕೊರೋನಾ ನಶವಾಗಲಿ. ಈ ದೇಶ ಬಿಟ್ಟು ತೊಲಗಲಿ ಎಂದು ಜ್ಯೋತಿ ಹಚ್ಚಿ ಪ್ರಾರ್ಥಿಸೋಣ. ಮೋದೀಜಿ ನಾವು ನಿಮ್ಮೊಂದಿಗಿದ್ದೇವೆ ಎಂದು ತಾರಾ ಸಹಮತ ವ್ಯಕ್ತಪಡಿಸಿದರು.