105 ವರ್ಷದ ನಿವೃತ್ತ ಉದ್ಯೋಗಿ ಪಾದಕ್ಕೆರಗಿ ನಮಸ್ಕರಿಸಿದ ಮೋದಿ

ಕೋಲ್ಕತಾ, ಜ 12:     ಕೋಲ್ಕತಾ ಪೋರ್ಟ್ ಟ್ರಸ್ಟ್ ನ 150 ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅದರ 105 ವರ್ಷದ ನಿವೃತ್ತ ಉದ್ಯೋಗಿಯೋರ್ವರ ಪಾದಕ್ಕೆರಗಿ ನಮಸ್ಕರಿಸಿದ್ದಾರೆ.  

ಟ್ರಸ್ಟ್ ವತಿಯಿಂದ 100 ಪೂರೈಸಿದ ಅದರ ಇಬ್ಬರು ನಿವೃತ್ತ ಉದ್ಯೋಗಿಗಳಾದ ನಾಗಿನ ಭಗತ್ (105) ಹಾಗೂ ನಾಗೇಶ್ ಚಂದ್ರ ಚಕ್ರವರ್ತಿ (100) ಅವರಿಗೆ ಗೌರವ ಸಮಾರಂಭ ಹಮ್ಮಿಕೊಂಡಿತ್ತು.  

ಗಾಲಿ ಕುರ್ಚೆಯಲ್ಲಿ ಆಗಮಿಸಿದ ನಾಗಿನ ಭಗತ್ ಗೌರವ ಸ್ವೀಕರಿಸಿದ ನಂತರ ಮೋದಿಗೆ ನಮಸ್ಕರಿಸಲು ಪ್ರಯತ್ನಿಸಿದಾಗ, ಹಿಂದೆ ಸರಿದ ಮೋದಿ, ಅವರನ್ನು ಅಲಂಗಿಸಿ, ಅವರ ಕಾಲಿಗೆ ನಮಸ್ಕರಿಸಿದ್ದಾರೆ.  

ಇದರಿಂದ ಪ್ರೇರೇಪಿತರಾದ ಸಭಿಕರು, ವಿದ್ಯಾರ್ಥಿಗಳು 'ಮೋದಿ ಮೋದಿ ' ಎಂದು ಘೋಷಣೆ ಕೂಗಿದರು.