ಅಕ್ಟೋಬರ್ 11, 12ರಂದು ಮೋದಿ-ಕ್ಸಿ ಜಿನ್ಪಿಂಗ್ ಭೇಟಿ

ನವದೆಹಲಿ, ಅ.9:   ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಎರಡನೇ ಅನೌಪಚಾರಿಕ ಶೃಂಗಸಭೆಗಾಗಿ ಅಕ್ಟೋಬರ್ 11 ಮತ್ತು 12 ರಂದು ಚೆನ್ನೈಗೆ ಭೇಟಿ ನೀಡಲಿದ್ದಾರೆ. ಮುಂಬರುವ ಚೆನ್ನೈ ಅನೌಪಚಾರಿಕ ಶೃಂಗಸಭೆಯು ಉಭಯ ನಾಯಕರು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಪ್ರಾಮುಖ್ಯತೆಯ ವಿಷಯಗಳ ಕುರಿತು ತಮ್ಮ ಚರ್ಚೆಯನ್ನು ಮುಂದುವರಿಸಲು ಅವಕಾಶವನ್ನು ಒದಗಿಸುತ್ತದೆ. ಭಾರತ-ಚೀನಾ ಕ್ಲೋಸರ್ ಡೆವಲಪ್ಮೆಂಟ್ ಪಾಲುದಾರಿಕೆಯನ್ನು ಇನ್ನಷ್ಟು ಆಳವಾಗಿಸುವ ಬಗ್ಗೆ ಎರಡೂ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವ ಸಾಧ್ಯತೆಯಿದೆ. ಉಭಯ ನಾಯಕರು ತಮ್ಮ ಉದ್ಘಾಟನಾ ಅನೌಪಚಾರಿಕ ಶೃಂಗಸಭೆಯನ್ನು ಏಪ್ರಿಲ್ 27-28, 2018 ರಂದು ಚೀನಾದ ವುಹಾನ್ನಲ್ಲಿ ನಡೆಸಿದ್ದಾರೆ ಎಂದು ಎಂಇಎ ಹೇಳಿಕೆ ತಿಳಿಸಿದೆ.