ನವದೆಹಲಿ, ಜನವರಿ 23, ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ 26 ರಂದು ಭಾನುವಾರ ಮನ್ ಕೀಬಾತ್ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಬದಲಿಗೆ ಸಂಜೆ ಭಾಷಣ ಮಾಡಲಿದ್ದಾರೆ. ತಿಂಗಳ ಕೊನೆಯ ಭಾನುವಾರ ಮನ್ ಕೀ ಬಾತ್ ಕಾರ್ಯಕ್ರಮ ತಪ್ಪದೆ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದೆ. ಗಣರಾಜ್ಯೋತ್ಸದ ಕಾರಣ ಭಾರಿ ಮೋದಿ ಬೆಳಗ್ಗೆ ಭಾಷಣ ಮಾಡುವ ಬದಲಿಗೆ ಸಂಜೆ ಭಾಷಣ ಮಾಡಲಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ. ಕಾರ್ಯಕ್ರಮದ ಸಮಯವನ್ನು ಸಂಜೆಯ ವೇಳೆಗೆ ಬದಲಾಯಿಸಿರುವುದು ಇದೇ ಮೊದಲು.ಮೋದಿ ಪ್ರಧಾನಿ ಯಾದ ಮೇಲೆ ನಿರಂತವಾಗಿ ಆಕಾಶವಾಣಿಯಲ್ಲಿ ತಿಂಗಳ ಕೊನೆಯ ಭಾನುವಾರ ಮನ್ ಕೀ ಬಾತ್ ಕಾರ್ಯಕ್ರಮ ಪ್ರಸಾರ ವಾಗುತ್ತಿದೆ. ಇದನ್ನು ಆಕಾಶವಾಣಿ ಮತ್ತು ದೂರದರ್ಶನ ವಾಹಿನಿಗಳು ಏಕ ಕಾಲದಲ್ಲಿ ಪ್ರಸಾರ ಮಾಡುತ್ತಾ ಬಂದಿವೆ.