ಕ್ಷೇತ್ರದ ಅಭಿವೃದ್ದಿಗಾಗಿ ಅನುಧಾನ ತರಲು ಸಿದ್ದನಿದ್ದೇನೆ : ಶಾಸಕ ಪಠಾಣ

ಕ್ಷೇತ್ರದ ಅಭಿವೃದ್ದಿಗಾಗಿ ಅನುಧಾನ ತರಲು ಸಿದ್ದನಿದ್ದೇನೆ : ಶಾಸಕ ಪಠಾಣ I am ready to bring relief for the development of the constituency: MLA Pathana

ಶಿಗ್ಗಾವಿ 16 : ಕ್ಷೇತ್ರದ ಅಭಿವೃದ್ದಿಗಾಗಿ ಪ್ರಧಾನಿ ಮೋದಿಯವರ ಹತ್ತಿರ ಹೋಗಿಯಾದರೂ ಅನುಧಾನ ತರಲು ನಾನು ಸಿದ್ದನಿದ್ದೇನೆ ಅಲ್ಲದೇ ಹಿರೆಬೆಂಡಿಗೇರಿ ಒಂದೇ ಗ್ರಾಮಕ್ಕೆ ಒಂದು ವರ್ಷದಲ್ಲಿ 7 ಕೋಟಿಗೂ ಹೆಚ್ಚು ಅನುಧಾನ ಹಾಕಲಾಗಿದೆ ಎಂದು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಹೇಳಿದರು. ತಾಲೂಕಿನ ಹಿರೇಂಬೆಡಿಗೇರಿ ಗ್ರಾಮದಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿದ ಅವರು ನನ್ನ ಕ್ಷೇತ್ರದ ಅಭಿವೃದ್ದಿಗಾಗಿ ನಾನು ಅನುಧಾನ ಕೇಳುವುದು ತಪ್ಪೇ ? ನಾನು ತಂದ ಕೆಲಸಗಳನ್ನ ನಾನೇ ಉದ್ಘಾಟಿಸಬೇಕು,

ನಾನು ತಂದ ಅನುಧಾನದ ಯಾದಿಯನ್ನು ಸಂಸದ ಜೋಷಿಯವರಿಗೆ ತೋರಿಸಲು ಪೈಲ್ ಮಾಡಿಕೊಂಡು ಬಂದಿದ್ದೆ, ಅನಿವಾರ್ಯ ಕಾರಣಗಳಿಂದ ಅವರು ಬಂದಿಲ್ಲ, ಮುಂಬರುವ ಕಾರ್ಯಕ್ರಮದಲ್ಲಿ ಪೈಲ್ ಕೊಡುತ್ತೇನೆ, ಜೊತೆಗೆ ನನ್ನ ಕ್ಷೇತ್ರಕ್ಕೆ ಇಷ್ಟು ಕೆಲಸಗಳು ಬೇಕು ಎಂದು ಕೊಡಿ ಎಂದು ಜೋಷಿಯವರ ಹತ್ತಿರವೂ ಕೇಳಲು ನಾನು ಸಿದ್ದನಿದ್ದೇನೆ, ವಿರೋಧ ಪಕ್ಷದವರು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಳ್ಳುವವರು ಚರ್ಚೆಗೆ ಬರಲಿ ಎಂದರು. ತಾಲೂಕಾ ಗ್ಯಾರಂಟಿ ಸಮೀತಿ ಅದ್ಯಕ್ಷ ಎಸ್ ಎಫ್ ಮಣಕಟ್ಟಿ ಮಾತನಾಡಿ, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ಉದ್ದೇಶ ಇಟ್ಟು ನಮ್ಮ ಶಾಸಕರು ಕಾರ್ಯವನ್ನ ಮಾಡುತ್ತಿದ್ದಾರೆ,

ಹಲವಾರು ಯೋಜನೆಗಳನ್ನ ತಂದು ಗ್ರಾಮಗಳ ಅಭಿವೃದ್ದಿಯ ಪಣ ತೊಟ್ಟಿದ್ದಾರೆ, ದೇವಸ್ಥಾನಗಳ ಜೀರ್ಣೊದ್ದಾರವೂ ನಡೆದಿವೆ, ಶೈಕ್ಷಣಿಕವಾಗಿ ಕ್ರಾಂತಿಕಾರಕ ಬೆಳವಣಿಗೆಗಳು ನಡೆದಿವೆ, ವಿರೋಧ ಪಕ್ಷದವರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಆದರೆ ಅವರ ಆರೋಪದಲ್ಲಿ ಹುರುಳಿಲ್ಲ, ಸಾವುರಾರು ಕೋಟಿಗಳನ್ನ ತಂದು ಅಭಿವೃದ್ದಿ ಮಾಡುತ್ತಿರುವುದು ಅವರಿಗೆ ಸಹಿಸಲಾಗುತ್ತಿಲ್ಲ ಎಂದರು.

ಕೆ ಎಂ ಎಫ್ ನಿರ್ದೇಶಕ ಶಂಕರಗೌಡ್ರ ಪಾಟೀಲ ಮಾತನಾಡಿದರು. ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ ಕಂಬಾಳಿಮಠ, ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಗುಡ್ಡಪ್ಪ ಜಲದಿ, ಬಾಬರ್ ಬೋವಾಜಿ, ಸುರೇಶ ಹರಿಜನ, ಫಯಾಜ್ ಸವಣೂರ, ಮೌಲಾಸಾಬ್ ತಹಶೀಲ್ದಾರ, ಫಕ್ಕೀರಯ್ಯ ಹಿರೇಮಠ, ಮಂಜುನಾಥ ತಿಮ್ಮಾಪೂರ, ಅಣ್ಣಪ್ಪ ಲಮಾಣಿ, ಹುಸೇನಸಾಬ್ ಕಡೆಮನಿ, ಮೋದಿನಸಾಬ್ ದಿವಾನದಾರ, ಸಿ ವಾಯ್ ಕಟ್ಟಿಗೌಡ್ರ, ನಾಗಪ್ಪ ತಿಪ್ಪಕ್ಕನವರ, ಪಕ್ಕೀರಣ್ಣ ವಾಲ್ಮೀಕಿ, ವೈದ್ಯಾಧಿಕಾರಿ ಟಿ ಸತೀಶ, ಸಂತೋಷ ಚಾಕಲಬ್ಬಿ, ನಾಗಪ್ಪ ಅದೃಶ್ಯಪ್ಪನವರ, ವೈದ್ಯ ನಾಗೇಶ ಸೇರಿದಂತೆ ವೈದ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮದ ಮುಖಂಡರು, ಸಾರ್ವಜನಿಕರು ಇದ್ದರು.