ನವದೆಹಲಿ, ಅ 12: ಜಮ್ಮು - ಕಾಶ್ಮೀರದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಸುಧಾರಣೆಯಾಗುತ್ತಿದ್ದು ಇಂದಿನಿಂದ ಮೊಬೈಲ್ ಸೇವೆ ದೊರೆಯಲಿದೆ ಎಂದು ಸ್ಥಳೀಯ ಅಧಿಕಾರಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಈ ನಡುವೆ ಪ್ರವಾಸಿಗರ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಗುರುವಾರವಷ್ಟೇ ಸರ್ಕಾರ ಹಿಂದಕ್ಕೆ ಪಡೆದಿತ್ತು. ಕಾಶ್ಮೀರಕ್ಕೆ ಹೆಚ್ಚಿನ ಪ್ರವಾಸಿಗರು, ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಮೊಬೈಲ್ ಸೇವೆಯನ್ನು ಆರಂಭ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಜಮ್ಮು - ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ವಾಪಸ್ ಪಡೆದುಕೊಂಡ ನಂತರ ಕಣಿವೆ ರಾಜ್ಯದಲ್ಲಿ ಕಳೆದ ಸುಮಾರು 60 ದಿನಗಳಿಂದಲೂ ಸಾಮಾನ್ಯ ಜನಜೀವನ ಬಾಧಿತವಾಗಿತ್ತು. ಗುರುವಾರಷ್ಟೇ ಕಾಶ್ಮೀರ ಸರ್ಕಾರ ಬಂಧನದಲ್ಲಿದ್ದ ಮೂವರು ರಾಜಕೀಯ ನಾಯಕರನ್ನು ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಿತ್ತು.