ಶ್ರೀನಗರ, ಸೆ 14 ಕಾಶ್ಮೀರ ಕಣಿವೆಯಲ್ಲಿ ಆಗಸ್ಟ್ 5ರಿಂದ ಸ್ಥಗಿತಗೊಳಿಸಿದ್ದ ಭಾರತ್ ಸಂಚಾರ್ ನಿಗಮ ನಿಯಮಿತ (ಬಿಎಸ್ಎನ್ಎಲ್) ಸೇರಿದಂತೆ ದೂರಸಂಪರ್ಕ ಕಂಪನಿಗಳ ಮೊಬೈಲ್ ಮತ್ತು ಇಂಟರ್ನೆಟ್ ಸೇವೆ ಈಗಲೂ ಅಮಾನತಿನಲ್ಲಿದೆ.
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370 ಮತ್ತು 35 ಎ ವಿಧಿ ರದ್ದುಗೊಳಿಸಿದ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಆಗಸ್ಟ್ 5ರ ನಂತರ ಕಣಿವೆಯಲ್ಲಿ ನಿರ್ಬಂಧ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಈ ಮಧ್ಯೆ, ಕಾಶ್ಮೀರ ಕಣಿವೆಯಲ್ಲಿ ಬಿಎಸ್ಎನ್ಎಲ್ ಸ್ಥಿರ ದೂರವಾಣಿಗಳನ್ನು ಮಾತ್ರ ಕಾಯರ್ಾಚರಣೆಗೆ ಮುಕ್ತಗೊಳಿಸಲಾಗಿದೆ. ಪುನಃಸ್ಥಾಪನೆ ಮತ್ತು ಹೊಸ ಸ್ಥಿರ ದೂರವಾಣಿ ಸಂಪರ್ಕಗಳಿಗಾಗಿ ಸಾವಿರಾರು ಸಂಖ್ಯೆಯಲ್ಲಿ ಅಜರ್ಿಗಳನ್ನು ಸರ್ಕಾರಿ ಟೆಲಿಕಾಂ ಆಪರೇಟರ್ಗಳು ಸ್ವೀಕರಿಸುತ್ತಿದ್ದಾರೆ.
ಆಗಸ್ಟ್ 5ರಿಂದ ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗಳನ್ನು ಕಣಿವೆಯಲ್ಲಿ ಸ್ಥಗಿತಗೊಳಿಸಲಾಗಿದೆ. ಈ ಸೇವೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಜನರು ಆಶಿಸುತ್ತಿರುವುದರಿಂದ ಬಿಎಸ್ಎನ್ಎಲ್ ಪೋಸ್ಟ್ಪೇಯ್ಡ್ ಮೊಬೈಲ್ ಸಂಪರ್ಕಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ.
ಆದಾಗ್ಯೂ, ಬಿಎಸ್ಎನ್ಎಲ್ ಪೋಸ್ಟ್ಪೇಯ್ಡ್ ಸಂಪರ್ಕದ ದರವು ರಾತ್ರೋರಾತ್ರಿ 500ರಿಂದ 700 ರೂ.ಗೆ ಏರಿಕೆಯಾಗಿದೆ.
ಪೋಸ್ಟ್ಪೇಯ್ಡ್ ಸಂಪರ್ಕವನ್ನು ಪಡೆಯುವ ದರವನ್ನು ರಾತ್ರೋರಾತ್ರಿ ಹೆಚ್ಚಿಸಲಾಗಿದೆ. ಗುರುವಾರ ನನಗೆ 500 ರೂ ಎಂದು ತಿಳಿಸಲಾಗಿತ್ತು. ಇಂದು ಸಂಪರ್ಕ ಪಡೆಯಲು ಬಂದಾಗ 700 ರೂ ಎಂದು ನನಗೆ ತಿಳಿಸಲಾಯಿತು ಎಂದು ನಾಟಿಪೋರಾದ ನಿವಾಸಿ ಯೂನಿಸ್ ಸಲೀಮ್ ಯುಎನ್ಐಗೆ ತಿಳಿಸಿದ್ದಾರೆ.
ಬಿಎಸ್ಎನ್ಎಲ್ ಸೇರಿದಂತೆ ಎಲ್ಲಾ ದೂರಸಂಪರ್ಕ ಕಂಪನಿಗಳ ಮೊಬೈಲ್ ನೆಟ್ವಕರ್್ ಕಳೆದ 41 ದಿನಗಳಿಂದ ಕಣಿವೆಯಲ್ಲಿ ಸ್ಥಗಿತಗೊಂಡಿತ್ತು, ಸ್ಥಳೀಯ ಪತ್ರಿಕೆಗಳು, ಪತ್ರಕರ್ತರು, ವಿದ್ಯಾರ್ಥಿಗಳು ಮತ್ತು ಇತರ ವೃತ್ತಿಪರರಿಗೆ ಈ ನಿರ್ಧಾರದಿಂದ ಭಾರೀ ಹೊಡೆತಬಿದ್ದಿದೆ.
ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ವದಂತಿಗಳನ್ನು ತಡೆಗಟ್ಟುವ ಸಲುವಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಆಗಸ್ಟ್ 5 ರಂದು ಶ್ರೀನಗರ ಸೇರಿದಂತೆ ಕಾಶ್ಮೀರ ಕಣಿವೆಯಾದ್ಯಂತ ಸಂವಹನ ಜಾಲವನ್ನು ಸ್ಥಗಿತಗೊಳಿಸಲಾಯಿತು. ಸಂವಹನದ ಅಮಾನತಿನಿಂದ ಕಣಿವೆಯಲ್ಲಿ ಜನರು ಪರಸ್ಪರ ಸಂಪರ್ಕ ಸಾಧಿಸಲು ಸಾಧ್ಯವಾಗದೆ ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಯಿತು, ವಿಶೇಷವಾಗಿ ಸಂಬಂಧಿಕರು ಕಣಿವೆಯ ಹೊರಗೆ ಇದ್ದ ಕುಟುಂಬಗಳು ತಮ್ಮ ಸಂಬಂಧಿಕರನ್ನು ಸಂಪಕರ್ಿಸಲಾಗದೆ ಪರಿತಪಿಸುವಂತಾಯಿತು.
ಆಗಸ್ಟ್ ಕೊನೆಯ ವಾರದಲ್ಲಿ ಬಾರ್ಜುಲ್ಲಾ ಮತ್ತು ಸೋನವಾರ್ ದೂರವಾಣಿ ವಿನಿಮಯ ಕೇಂದ್ರಗಳೊಂದಿಗೆ ಸಂಪರ್ಕ ಹೊಂದಿದ ಚಂದಾದಾರರಿಗೆ ಲ್ಯಾಂಡ್ಲೈನ್ಗಳನ್ನು ಮರುಸ್ಥಾಪಿಸಲಾಗಿದೆ. ಮುಖ್ಯ ಬಿಎಸ್ಎನ್ಎಲ್ ದೂರವಾಣಿ ವಿನಿಮಯ ಕೇಂದ್ರದಿಂದ ಎಲ್ಲ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಚಂದಾದಾರರ ಲ್ಯಾಂಡ್ಲೈನ್ ಫೋನ್ಗಳನ್ನು ಗುರುವಾರ ಮಾತ್ರ ಮರುಸ್ಥಾಪಿಸಲಾಗಿದೆ.
ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದರಿಂದ, ಸುದ್ದಿಸಂಸ್ಥೆಗಳು ಸೇರಿದಂತೆ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರು ತೀವ್ರ ತೊಂದರೆಗೊಳಗಾದರು. ಆದಾಗ್ಯೂ, ಜಿಲ್ಲಾಡಳಿತವು ನಗರದ ಸೋನವಾರ್ನಲ್ಲಿ ಮಾಧ್ಯಮ ಸೌಲಭ್ಯ ಕೇಂದ್ರವನ್ನು ಸ್ಥಾಪಿಸಿತು, ಅಲ್ಲಿ ಪತ್ರಕರ್ತರು ತಮ್ಮ ಸುದ್ದಿಗಳನ್ನು ಆಯಾ ಮಾಧ್ಯಮ ಸಂಸ್ಥೆಗಳಿಗೆ ಕಳುಹಿಸುತ್ತಿದ್ದಾರೆ. ಆದಾಗ್ಯೂ, ಸೀಮಿತ ಸಂಖ್ಯೆಯ ವ್ಯವಸ್ಥೆಗಳು ಮಾತ್ರ ಕಾರ್ಯನಿರ್ವಹಿಸುತ್ತಿರುವುದರಿಂದ ಪತ್ರಕರ್ತರು ತಮ್ಮ ಸರದಿ ಪಡೆಯಲು ಗಂಟೆಗಟ್ಟಲೆ ಕಾಯಬೇಕಾಯಿತು.
ಶೀಘ್ರದಲ್ಲೇ ಕಣಿವೆಯಲ್ಲಿ ಮೊಬೈಲ್ ಫೋನ್ಗಳನ್ನು ಸಹ ಮರುಸ್ಥಾಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ವದಂತಿಗಳನ್ನು ಹರಡಲು ಸಂವಹನ ಜಾಲವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿರುವುದರಿಂದ ಅದನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.