ವ್ಯಕ್ತಿ ಕಾಣೆ: ಪತ್ತೆಗೆ ಮನವಿ
ಬಳ್ಳಾರಿ 17:ಸಿರುಗುಪ್ಪ ತಾಲ್ಲೂಕಿನ ಹಾಗಲೂರು ಗ್ರಾಮದ ನಿವಾಸಿ 40 ವರ್ಷದ ಸೋಮಶೇಖರ ರೆಡ್ಡಿ ಎನ್ನುವ ವ್ಯಕ್ತಿಯು 2023ರ ನ.09 ರಂದು ಕಾಣೆಯಾಗಿರುವ ಕುರಿತು ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕೆಂದು ಸಿರಿಗೇರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಮನವಿ ಮಾಡಿದ್ದಾರೆ.
*ವ್ಯಕ್ತಿಯ ಚಹರೆ:*ಎತ್ತರ 5.5 ಅಡಿ, ಕೋಲು ಮುಖ, ಎಣ್ಣೆಕೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ವ್ಯಕ್ತಿ ಕಾಣೆಯಾದ ಸಂಧರ್ಭದಲ್ಲಿ ಕೆಂಪು ಬಣ್ಣದ ಅಂಗಿ, ಕೆಂಪು ಮತ್ತು ಬಿಳಿ ಬಣ್ಣದ ಪಂಚೆ ಧರಿಸುರುತ್ತಾನೆ ಹಾಗೂ ಕನ್ನಡ, ತೆಲುಗು ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ.ಮೇಲ್ಕಂಡ ಚಹರೆ ಗುರುತುಳ್ಳ ವ್ಯಕ್ತಿಯ ಮಗ್ಗೆ ಮಾಹಿತಿ ದೊರೆತಲ್ಲಿ ಸಿರಿಗೇರಿ ಪೊಲೀಸ್ ಠಾಣೆಯ ದೂ:08396-244426 ಮೊ:9480803056 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ:08392-258100 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.