ಮಿನ್ನೇಸೋಟ, ಜೂನ್ 11, ಅಮೆರಿಕದಲ್ಲಿ ಜನಾಂಗೀಯ ಹತ್ಯೆಯ ವಿರುದ್ಧ ಭುಗಿಲೆದ್ದ ಪ್ರತಿಭಟನೆ ಮುಂದುವರಿದಿದ್ದು, ಮಿನ್ನೇಸೋಟದ ಸೇಂಟ್ ಪಾಲ್‌ನಲ್ಲಿರುವ ಕ್ರಿಸ್ಟೋಫರ್ ಕೊಲಂಬಸ್ ಪ್ರತಿಮೆಯ ಕುತ್ತಿಗೆಗೆ ಪ್ರತಿಭಟನಕಾರರು ಹಗ್ಗ ಹಾಕಿ ಅದನ್ನು ಕೆಳಕ್ಕೆ ಬೀಳಿಸಿದ್ದಾರೆ ಎಂದು ಸ್ಟಾರ್ ಟ್ರಿಬ್ಯೂನ್ ವರದಿ ಮಾಡಿದೆ.ಇದಕ್ಕೂ ಮೊದಲು ವರ್ಜೀನಿಯಾದ ರಿಚ್ಮಂಡ್‌ನಲ್ಲಿ ಪ್ರತಿಭಟನಕಾರರು ಕೊಲಂಬಸ್ ಪ್ರತಿಮೆಯನ್ನು ಉರುಳಿಸಿ ಕೆರೆಗೆ ಎಸೆದಿದ್ದರು.ಮಿನ್ನೇಸೋಟದ ಮಿನ್ನಿಯಾಪೋಲಿಸ್‌ನಲ್ಲಿ ಪೊಲೀಸರ ಕ್ರೌರ್ಯದಿಂದ ಆಫ್ರಿಕನ್ ಅಮೆರಿಕನ್ ಜಾರ್ಜ್ ಫ್ಲಾಯ್ಡ್ ಸಾವು ಸಂಭವಿಸಿತ್ತು. ಈ ಜನಾಂಗೀಯ ಹತ್ಯೆ ಮತ್ತು ಅನ್ಯಾಯದ ವಿರುದ್ಧ ವಿಶ್ವಾದ್ಯಂತ ಆಕ್ರೋಶ ಭುಗಿಲೆದ್ದಿತ್ತು. ಆದರೆ ಅನೇಕ ಪ್ರತಿಭಟನೆಗಳು ಪೊಲೀಸ್ ಮತ್ತು ನಾಗರಿಕರ ಮೇಲಿನ ಹಿಂಸಾಚಾರ, ವಿದ್ವಂಸಕ ಕೃತ್ಯ, ಅಗ್ನಿಸ್ಪರ್ಶ ಮತ್ತು ಲೂಟಿಗೆ ತಿರುಗಿ ಗಲಭೆಗಳಾಗಿ ಮಾರ್ಪಟ್ಟವು.