ಬದುನಿರ್ಮಾಣ ಅಭಿಯಾನಕ್ಕೆ ಚಾಲನೆ, ಕೂಲಿಕಾರ್ಮಿಕರಿಗೆ ಪ್ರತಿಜ್ಞಾವಿಧಿ ಬೋಧಿಸಿದ ಸಚಿವ ಪಾಟೀಲ್

ಕೊಪ್ಪಳ, ಮೇ19,  ರಾಜ್ಯದಲ್ಲಿ ನೋಂದಾಯಿತ 53ಸಾವಿರ ಕಾರ್ಮಿಕರಿಗೆ  ಕಾರ್ಮಿಕ ಇಲಾಖೆಯಿಂದ 5 ಸಾವಿರ ರೂಪಾಯಿ  ನೀಡುವ ಐತಿಹಾಸಿಕ  ತೀರ್ಮಾನವನ್ನು ಸರ್ಕಾರ ಕೈಗೊಂಡಿದ್ದು   ಇದರಿಂದ ಬಹಳಷ್ಟುಜನರಿಗೆ  ಅನುಕೂಲವಾಗಿದೆ  ಎಂದು  ಕೊಪ್ಪಳ ಜಿಲ್ಲಾ ಉಸ್ತುವಾರಿಗಳೂ ಹಾಗೂ ಕೃಷಿ ಸಚಿವರಾಗಿರುವ ಬಿ.ಸಿ.ಪಾಟೀಲ್  ಹೇಳಿದ್ದಾರೆ.   ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮಲಕನಮರಡಿ ಗ್ರಾಮದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ "ಬದುನಿರ್ಮಾಣ ಅಭಿಯಾನ" ಕ್ಕೆ  ಚಾಲನೆ ನೀಡಿ ಅವರು ಮಾತನಾಡಿದರು. 
ಮನರೇಗಾ ಯೋಜನೆಯಡಿ ಕಾರ್ಮಿಕರು ವರ್ಷದ ನೂರು ದಿನಗಳಲ್ಲಿ ನಲವತ್ತು ದಿನಗಳ ಕಾಲ ರಸ್ತೆ ಕಾಮಗಾರಿ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಅಂತಹ ಕಾರ್ಮಿಕರನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಲಾಗುತ್ತಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಈ ರೀತಿ ಸುಮಾರು ಕೃಷಿಕಾರ್ಮಿಕರಿಗಾಗಿ ಬದು ನಿರ್ಮಾಣ ಅಭಿಯಾನ ಆಯೋಜಿಸಲಾಗಿದೆ ಎಂದರು.
ಪ್ರಧಾನಿ ಮೋದಿ ಈ ಮೊದಲು 60 ಸಾವಿರ ಕೋಟಿ .ರೂಪಾಯಿ ಮನರೇಗಾ ಯೋಜನೆಗೆ ನಿಗದಿಪಡಿಸಿದ್ದರು ಈಗ ಕೋವಿಡ್ ಸಂಕಷ್ಟ ಪರಿಹಾರಕ್ಕಾಗಿ ಕೂಲಿಕಾರ್ಮಿಕರಿಗಾಗಿಇನ್ನೂ 40 ಸಾವಿರ ಕೋ.ರೂಪಾಯಿ ಹೆಚ್ಚುವರಿಯಾಗಿ  ಘೋಷಿಸಿದ್ದಾರೆ.ಪರಿಣಾಮ ದುಡಿಯುವ ಕೈಗೆ ಕೆಲಸ ಹೊಟ್ಟೆಗೆ ಅನ್ನ ಸಿಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಬದು ನಿರ್ಮಾಣದಿಂದ ಭೂಮಿಯ ಫಲವತ್ತತೆ ಸಾರದ ರಕ್ಷಣೆಯ ಜೊತೆಗೆ ಅಂತರ್ಜಲ ಮಟ್ಟವೂ ಹೆಚ್ಚುತ್ತದೆ.ಕೋವಿಡ್ ಸಂದಿಗ್ಧ ಸಂದರ್ಭದಲ್ಲಿ ಬಡವರ,ಕೂಲಿ,ಕಾರ್ಮಿಕರು ಹಾಗೂ ರೈತರು ಸೇರಿದಂತೆ ಎಲ್ಲಾ ವರ್ಗದ ಪರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಂತಿವೆ.ರಾಜ್ಯ ಸರ್ಕಾರ ಎರಡುತಿಂಗಳ ಮೊದಲೇ ಪಡಿತರ ವಿತರಿಸಿದರೆ, ಕೇಂದ್ರ ಸರ್ಕಾರ ಮೇ.1 ರಿಂದ ಉಚಿತ ಪಡಿತರ ನೀಡುತ್ತಿದೆ.
ಮುಸುಕಿನ ಜೋಳ ಬೆಳೆಗಾರರಿಗೆ,ಹೂಬೆಳೆಗಾರರಿಗೆ,ತರಕಾರಿ ಹಣ್ಣು ಬೆಳೆಗಾರರಿಗೂ ಸರ್ಕಾರ ಪ್ಯಾಕೇಜ್ ಘೋಷಿಸಿದೆ ಎಂದು ಸಚಿವರು ಪುನರುಚ್ಚರಿಸಿದರು.ಬದು ನಿರ್ಮಾಣದಂತಹ ರೈತ ಪರ ಯೋಜನೆಯನ್ನು ನೀಡಿದ್ದು ಬಹಳ ಉಪಯೋಗಕಾರಿ ಎಂದು ಅವರು ಹೇಳಿದರು.
ಕೂಲಿ ಕಾರ್ಮಿಕರಿಂದ ಪ್ರತಿಜ್ಞೆ: ಬದುನಿರ್ಮಾಣದಲ್ಲಿ ಪಾಲ್ಗೊಂಡಿರುವ ಕೂಲಿಕಾರ್ಮಿಕರು ನೆಗಡಿ,ಕೆಮ್ಮು, ಜ್ವರ ದಿಂದ ಬಳಲುತ್ತಿಲ್ಲವೆಂದು ಹಾಗೂ ಕೆಲಸದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಾಗಿ ಕಾರ್ಮಿಕರಿಗೆ ಸಚಿವರು ಪ್ರತಿಜ್ಞಾವಿಧಿ ಬೋಧಿಸಿದರು.
ಏನಿದು ಬದು ನಿರ್ಮಾಣ ಅಭಿಯಾನ...? ಮಹಾತ್ಮಾ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರು ತಮ್ಮ ಹೊಲಗಳಲ್ಲಿಯೂ ಗಾಂಧಿ ಕೂಲಿ ಕೆಲಸ ಮಾಡಿಕೊಳ್ಳಲು ಸರ್ಕಾರ ಬೃಹತ್ ಅಭಿಯಾನಕ್ಕೆ ಮುಂದಾಗಿದ್ದು, ಮುಂಗಾರು ಮಳೆ ಪೂರ್ವದಲ್ಲಿ ನೆಲಕ್ಕೆ ಬಿದ್ದ ನೀರನ್ನು ಇಂಗಿಸಿಕೊಳ್ಳಲು ಹೊಲದಲ್ಲಿ ಬದು ನಿರ್ಮಾಣ ಮಾಸಾಚರಣೆ ಕೈಗೊಳ್ಳಲಾಗಿದೆ .ನರೇಗಾ ಯೋಜನೆಯಡಿ ರೈತರು ಕೂಲಿ ಕಾರ್ಮಿಕರಾಗಿ ದುಡಿದು ಬದುಗಳನ್ನು ನಿರ್ಮಿಸಿಕೊಳ್ಳಬಹುದಾಗಿದೆ. ಬಿದ್ದ ನೀರು ವ್ಯರ್ಥವಾಗಬಾರದು ಎಂಬ ಉದ್ದೇಶ ಒಂದೆಡೆಯಾದರೆ, ದುಡಿಯುವ ಕೈಗಳಿಗೆ ಕೆಲಸ ಕೊಡುವ ನಿಟ್ಟಿನಲ್ಲಿಯೂ ಸರ್ಕಾರ ಯೋಚಿಸಿದೆ. ಹೀಗಾಗಿ ರಾಜ್ಯ ಸರ್ಕಾರ ಬದು ನಿರ್ಮಾಣ ಮಾಸಾಚಾರಣೆಯನ್ನು ಮೇ 19ರಿಂದ ಜೂನ್ 16ರ ವರೆಗೆ ಹಮ್ಮಿಕೊಂಡಿದೆಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ,ಶಾಸಕರಾದ ಬಸವರಾಜ್ ದಡೇಸಗೂರು,ಪರಣ್ಣ ಮುನವಳ್ಳಿ.ಜಿಲ್ಲಾಪಂಚಾಯಿತಿ ಅಧ್ಯಕ್ಷ ವಿಶ್ವನಾಥ್ ರೆಡ್ಡಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.