ಶಿವಮೊಗ್ಗ,
ಮಾ.28, ಸಚಿವ ಸಂಪುಟದಲ್ಲಿ ಕೈಗೊಂಡ ತೀರ್ಮಾನದಂತೆ ಜಿಲ್ಲಾ ಉಸ್ತುವಾರಿ
ಸಚಿವರಿಗೆ ಜಿಲ್ಲೆಯ ಕೊರೊನಾ ತಡೆ ಜಾಗೃತಿ ಜವಾಬ್ದಾರಿ ವಹಿಸಿದ್ದು, ಮುಖ್ಯಮಂತ್ರಿ
ಬಿ.ಎಸ್.ಯಡಿಯೂರಪ್ಪ ಅವರ ನಿರ್ದೇಶನದಂತೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ
ಕೆ.ಎಸ್.ಈಶ್ವರಪ್ಪ ಸ್ಥಳೀಯ ಶಾಸಕರು, ಸಂಸದರು ಹಾಗೂ ಮೇಲ್ಮನೆಯ ಸದಸ್ಯರ ಜೊತೆ ಇಂದು
ಸಭೆ ನಡೆಸಿದರು.ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಂಸದ
ಬಿ.ವೈ ರಾಘವೇಂದ್ರ, ಶಾಸಕರಾದ ಅರಗಜ್ಞಾನೇಂದ್ರ, ಹರತಾಳ ಹಾಲಪ್ಪ, ಅಶೋಕ್ ನಾಯ್ಕ್
ಹಾಗೂ ವಿಧಾನಪರಿಷತ್ತು ಸದಸ್ಯರಾದ ಆಯನೂರು ಮಂಜುನಾಥ, ರುದ್ರೇಗೌಡ, ಪ್ರಸನ್ನ ಕುಮಾರ್
ಉಪಸ್ಥಿತರಿದ್ದರು.ಸಭೆಯಲ್ಲಿ ತರಕಾರಿ, ದಿನಸಿ ವಸ್ತುಗಳನ್ನು ಎಲ್ಲರಿಗೂ
ಸಮರ್ಪಕವಾಗಿ ವಿತರಣೆಯಾಗಬೇಕು. ಪೌರ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್ ಆಹಾರ
ದೊರೆಯಬೇಕು ಹಾಗೂ ಎಲ್ಲಾ ಮಹಾನಗರಪಾಲಿಕೆ ವಾರ್ಡ್‌ಗಳಿಗೆ ಔಷಧಿ ಕ್ರಿಮಿನಾಶಕ ಸಿಂಪಡನೆ
ಮಾಡಬೇಕು ಎಂದು ಅಧಿಕಾರಿಗಳಿಗೆ ಶಾಸಕರಿಗೆ ಸೂಚಿಸಲಾಯಿತು.ಸಮಾಜಘಾತುಕ ಶಕ್ತಿಗಳು
ಹಾಗೂ ಅಕ್ರಮ ಮರಳುಗಾರಿಕೆ ಮತ್ತು ಅರಣ್ಯ ಅಕ್ರಮ ನಾಟಾ ಸಾಗಾಣಿಕೆಯನ್ನು ಗಂಭೀರವಾಗಿ
ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆಯೂ ಚರ್ಚಿಸಲಾಯಿತು.