ಬೆಂಗಳೂರು, ಮಾ. 28, ಕೊರೊನ ಹರಡದಂತೆ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ತಮ್ಮ ಮತಕ್ಷೇತ್ರ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಜನರಿಗೆ ಜಾಗೃತಿ ಮೂಡಿಸಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಕ್ರಿಮಿನಾಶಕಗಳನ್ನು ಸಿಂಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದಲ್ಲದೇ ಖುದ್ದು ಅಧಿಕಾರಿಗಳ ಜೊತೆಗೂಡಿ ಕ್ರಿಮಿನಾಶಕಗಳನ್ನು ಸಿಂಪಡಿಸಿದರು. ನಂತರ ಲಾಕ್‌ಡೌನ್ ಬಗ್ಗೆ ಮಾಹಿತಿ ವಿವರಣೆ ನೀಡಿ ಜನರು ಹೊರಗೆ ಬಾರದಂತೆ ಪ್ರತಿ ವಾರ್ಡ್ ನ ಜನರಿಗೆ ಜಾಗೃತಿ ಮೂಡಿಸಲು ಆಟೋಗಳಿಗೆ ಚಾಲನೆ ನೀಡಿದರು. ಇನ್ನು ತರಕಾರಿ ಮಂಡಿಗೆ ಭೇಟಿ ನೀಡಿದ ಸಚಿವರು, ವ್ಯಾಪಾರಿಗಳು ಬೆಲೆ ಹೆಚ್ಚಿಸಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿದೆ. ತರಕಾರಿಗಳಿಗೆ ಜನ ಸ್ನೇಹಿ ಬೆಲೆ ನಿಗದಿ ಮಾಡಬೇಕು ಎಂದು ತಾಕೀತು ಮಾಡಿದರು.ತರಕಾರಿ ವ್ಯಾಪಾರಕ್ಕೆ ಕಮಲಮ್ಮನ ಗುಂಡಿ ಗ್ರೌಂಡ್, ಶಂಕರ ಮಂಠ ಗ್ರೌಂಡ್, ನಂದಿನಿ ಲೇಔಟ್ ಮೈದಾನವನ್ನು ಬಳಸಿಕೊಳ್ಳಬೇಕು. ಗುಂಪು ಗುಂಪಾಗಿ ಜನ ಸೇರುವುದು ಕಡಿಮೆ ಮಾಡಬೇಕು, ಹೆಚ್ಚಾಗಿ ಜನ ಸೇರಿದರೆ ಅತಿ ವೇಗವಾಗಿ ಕೋರೊನ ಹರಡುವ ಸಾಧ್ಯತೆ ಇದೆ ಎಂದು ತಿಳಿ ಹೇಳಿದರು.