650ಕ್ಕೂ ಹೆಚ್ಚು ಜನರಿಗೆ ಆಹಾರ ಕಿಟ್ ವಿತರಿಸಿದ ಸಚಿವ ಗೋಪಾಲಯ್ಯ

ಬೆಂಗಳೂರು, ಮೇ  20, ದೇಶಾದ್ಯಂತ 4 ನೇ ಹಂತದ ಲಾಕ್ ಡೌನ್ ಜಾರಿಯಲ್ಲಿದ್ದು, ಜನರು ಕೆಲಸಗಳಿಲ್ಲದೆ ಮನೆಯಲ್ಲಿ  ಇದ್ದಾರೆ. ಅವರಿಗೆ ಆಹಾರದ ಕೊತರೆಯಾಗಬಾರದೆಂದು  ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಗೋಪಾಲಯ್ಯ ಬುಧವಾರ ಸ್ವ ಕ್ಷೇತ್ರ ಮಹಾಲಕ್ಷ್ಮೀಪುರಂ ವಾರ್ಡ್ ನಂ 86ರ ಬಡ ಜನರಿಗೆ ಆಹಾರದ ಕಿಟ್ ಗಳನ್ನು ವಿತರಿಸಿದರು.ಇಂದು ಬೆಳಗ್ಗೆ ನಾಗಪುರ ವಾರ್ಡ್ ನ ಶಾಸಕರ ಭವನದಲ್ಲಿ ಸಚಿವರು 650 ಕ್ಕೂ ಹೆಚ್ಚು ಜನರಿಗೆ ಆಹಾರದ ಕಿಟ್ ಗಳನ್ನು ನೀಡಿದ್ದು‌, ಈ ವೇಳೆ ಜನರ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗಿತ್ತು.ಈ ಸಂದರ್ಭ ಬಿಜೆಪಿ ಬೆಂಗಳೂರು ಉತ್ತರ ಜಿಲ್ಲೆ ಉಪಾಧ್ಯಕ್ಷ  ಜಯರಾಮಯ್ಯ ,‌ ಬಿಜೆಪಿ ಮಂಡಲ ಅಧ್ಯಕ್ಷ  ರಾಘವೇಂದ್ರ ಶೆಟ್ಟಿ, ಮಾ.ಮ. ವೆಂಕಟೇಶ್, ರೈಲ್ವೇ ನಾರಾಯಣ್, ಶಿವಾನಂದ ಮೂರ್ತಿ, ಹಾಗೂ ಮುಖಂಡರು ಉಪಸ್ಥಿತರಿದ್ದರು.