ಯಲ್ಲಮ್ಮನಗುಡ್ಡಕ್ಕೆ ಸಚಿವ ದಿನೇಶ ಗುಂಡೂರಾವ್ ಭೇಟಿ

Minister Dinesh Gundao visits Yallammana Gudda

ಉಗರಗೋಳ 23: ಶ್ರೀಕ್ಷೇತ್ರ ಏಳುಕೋಳ್ಳದ ಯಲ್ಲಮ್ಮನಗುಡ್ಡಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್ ಭೇಟಿ ನೀಡಿ, ಶ್ರೀರೇಣುಕಾ ಯಲ್ಲಮ್ಮ ದೇವಿಯ ದರ್ಶನ ಆರ್ಶಿರ್ವಾದ ಪಡೆದುಕೊಂಡರು. 

ದೇವಸ್ಥಾನ ವತಿಯಿಂದ ಶಾಸಕ ವಿಶ್ವಾಸ ವೈದ್ಯ, ಸಚಿವ ದಿನೇಶ ಗುಂಡೂರಾವ್ ಅವರನ್ನು ಶಾಲೂಹೊದಿಸಿ ಸತ್ಕರಿಸಿದರು. 

ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ,  ಬೈಲ್‌ಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೇಗ್ಗಣ್ಣವರ ಹಾಗೂ ಆರೋಗ್ಯ ಇಲಾಖೆ ಮತ್ತು ತಾಲೂಕಾ ಅಧಿಕಾರಿಗಳು ಇದ್ದರು.