ವೈದ್ಯಕೀಯ ತಪಾಸಣಾ ಕೇಂದ್ರಕ್ಕೆ ಸಚಿವ ಬೊಮ್ಮಾಯಿ ಭೇಟಿ

ಶಿಗ್ಗಾವಿ೧೦ : ತಾಲೂಕಿನ ತಡಸ ಕ್ರಾಸ ಬಳಿ ನಿಮರ್ಿಸಿರುವ  ಹೊರದೇಶ, ಹೊರರಾಜ್ಯ, ಜಿಲ್ಲೆಗಳು, ತಾಲೂಕಗಳಿಂದ ಬಂದಂತಹ ಪ್ರಯಾಣಿಕರನ್ನು ಪರಿಶೀಲಿಸಲು ನಿಮರ್ಿಸಿದ ನೋವೆಲ್ ಕೊರೊನಾ ವೈರಸ್ ತಾತ್ಕಾಲಿಕ ವೈದ್ಯಕೀಯ ತಪಾಸಣಾ ಕೇಂದ್ರಕ್ಕೆ ಗೃಹ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಬೇಟಿ ನೀಡಿ ಅಲ್ಲಿದ್ದ ತಾಪಮಾನ ತಪಾಸಣೆ  ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ವೈದ್ಯಕೀಯ  ಪರಿಕರಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೈಯ, ಸವಣೂರಿನ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ತಾಲೂಕ ದಂಡಾಧಿಕಾರಿ ಪ್ರಕಾಶ ಕುದರಿ, ತಾಲೂಕ ಕಾರ್ಯನಿವರ್ಾಹಕ ಅಧಿಕಾರಿ ಪ್ರಶಾಂತ ತುರಕಾಣಿ, ತಾಲೂಕ ಆರೋಗ್ಯಾಧಿಕಾರಿ ಡಾ|| ಹನುಮಂತಪ್ಪ ಕುಡಚಿ, ತಡಸ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ|| ಮಧನ ಘೋಡ್ಕೆ, ಭಾ.ಜ.ಪ ತಾಲೂಕ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಸೇರಿದಂತೆ ಪೋಲಿಸ ಇಲಾಖೆಯ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.