ಕಡ್ಡಾಯವಾಗಿ ಕಮ್ಯೂನಿಟಿ ಹೆಲ್ತ್ ಸವರ್ೇ ಕಾರ್ಯ ಕೈಗೊಳ್ಳುವಂತೆ ಸಚಿವ ಬೊಮ್ಮಾಯಿ ಸೂಚನೆ

ಹಾವೇರಿ:ಎ. 10: ವೈದ್ಯಕೀಯ ಕಾರಣ ಹೊರತು ಹೊರ ಜಿಲ್ಲೆಯ ಹಾಗೂ ಹೊರ ರಾಜ್ಯದ ಪ್ರಯಾಣಿಕರು ಜಿಲ್ಲಾ ಗಡಿಯೊಳಗೆ ಬರದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ಹಾಗೂ ಜಿಲ್ಲಾಡಳಿತಕ್ಕೆ  ಗೃಹ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್-19 ಕುರಿತಂತೆ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

     ಚೆಕ್ಪೋಸ್ಟ್ಗಳಲ್ಲಿ ಕಡ್ಡಾಯವಾಗಿ ತಪಾಸಣೆ ನಡೆಸಿ, ಪಾಸ್ ಇಲ್ಲದೆ ಅನಗತ್ಯವಾಗಿ ಜಿಲ್ಲೆಯೊಳಗೆ ಪ್ರವೇಶಮಾಡುವ ಪ್ರಯಾಣಿಕರ ವಾಹನಗಳನ್ನು ಸೀಜ್ಮಾಡಿ. ಎಲ್ಲ ಚೆಕ್ ಪೋಸ್ಟ್ಗಳಲ್ಲೂ ಸಿಸಿ ಕ್ಯಾಮರಾಗಳನ್ನು ಅಳಡಿಸಿ ಕೇಂದ್ರೀಕೃತ ವ್ಯವಸ್ಥೆಯಲ್ಲಿ ನಿಗಾವಹಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಜಿಲ್ಲೆಯಾದ್ಯಂತ ಪ್ರವಾಸಕೈಗೊಂಡು ಲಾಕ್ಡೌನ್ ವ್ಯವಸ್ಥೆಯನ್ನು ಬಿಗಿಗೊಳಿಸಿ. ಜನರಿಗೆ ಲಾಕ್ಡೌನ್ ಇದೇ ಎಂಬ ಕಲ್ಪನೆಯೇ ಇಲ್ಲದೇ ಓಡಾಡುತ್ತಿರುವ ಮಾಹಿತಿ ಬಂದಿದೆ. ರಾತ್ರಿ ಮತ್ತು ಮಧ್ಯಾಹ್ನದ ವೇಳೆಯಲ್ಲಿ ಲಾಕ್ ಡೌನ್ ವ್ಯವಸ್ಥೆಯನ್ನು ಉಲ್ಲಂಘಿಸಿ ಉದ್ದೇಶ ಪೂರ್ವಕವಾಗಿ ಓಡಾಡುವ ವಾಹನಗಳನ್ನು ಸೀಜ್ಮಾಡಿ ಎಂದು ಸೂಚನೆ ನೀಡಿದರು. 

     ಕಡ್ಡಾಯ ವೈದ್ಯಕೀಯ ತಪಾಸಣೆ: ಜಿಲ್ಲೆಯ ಎಲ್ಲ  ಮನೆ ಮನೆಗಳಿಗೆ ಭೇಟಿ ಆರೋಗ್ಯ ತಪಾಸಣೆ ನಡೆಸಬೇಕು. ಜಿಲ್ಲಾ ಹೆಲ್ತ್ ರಿಪೋಟ ತಯಾರಿಸಿ, ಕಡ್ಡಾಯವಾಗಿ ವೈದ್ಯಕೀಯ ಸಿಬ್ಬಂದಿಗಳು ತಪಾಸಣೆಯಲ್ಲಿ ಭಾಗವಹಿಸಬೇಕು. ಇವರ ಜೊತೆ ಆಶಾ, ಅಂಗನವಾಡಿ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಜೊತೆಗಿರಬೇಕು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಉಸ್ತುವಾರಿ ವಹಿಸುವಂತೆ ಸೂಚನೆ ನೀಡಿದರು.

        ಸಾಮಾನ್ಯ ತಪಾಸಣೆ ನಡೆಸದೆ ಸ್ಕೆತಾಸ್ಕೋಪ್ ಬಳಸಿಯೇ ತಪಾಸಣೆ ನಡೆಸಬೇಕು. ಯಾವುದೇ ಕಾರಣಕ್ಕೂ ಕೋವಿಡ್ ಕಮ್ಯೂನಿಟಿಗೆ ಹರಡಬಾರದು. ಕಮ್ಯೂನಿಟಿ ಹೆಲ್ತ್ ಚೆಕಪ್ ಕಡ್ಡಾಯ. ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ, ನಾವೆಲ್ಲ ಸುರಕ್ಷಿತವಾಗಿದ್ದೇವೆ ಆರಾಮವಾಗಿರೋಣ ಎಂಬ ಮನೋಭಾವ ಬಿಡಿ. ಕೋವಿಡ್ ಸೋಂಕು ಯಾವುದೇ ಕ್ಷಣದಲ್ಲಿ ಪತ್ತೆಯಾಗಬಹುದು. 

  ಕೃಷಿ ಪ್ರಧಾನವಾದ ಹಾವೇರಿಯಲ್ಲಿ ಕಮ್ಯೂನಿಟಿಗೆ ಕೋವಿಡ್ ಹರಡಿದರೆ ನಿಯಂತ್ರಣ ಕಷ್ಟಸಾಧ್ಯ. ಅತ್ಯಂತ ಗಂಭೀರವಾಗಿ ಕೋವಿಡ್ ಸೋಂಕನ್ನು ಪರಿಗಣಿಸಿ ಜಿಲ್ಲೆಗೆ ನುಸಳದಂತೆ ಕಟ್ಟೆಚ್ಚರವಹಿಸಬೇಕು. ತಳಮಟ್ಟದ ಜನರ ಆರೋಗ್ಯ ತಪಾಸಣೆ ನಡೆಸಬೇಕು. ಕಾಮರ್ಿಕ ವರ್ಗಗಳಲ್ಲಿ ಅಪೌಷ್ಠಿಕತೆಯ ಅಂಶ ಹೆಚ್ಚಾಗಿರುತ್ತದೆ. ರೋಗ ನಿರೋಧ ಶಕ್ತಿ ಕಡಿಮೆ ಇರುವುದರಿಂದ ವೈಜ್ಞಾನಿಕ ಆರೋಗ್ಯ ತಪಾಸಣೆ   ಅತ್ಯಂತ ಮಹತ್ವದ್ದಾಗಿದೆ. ಇದರಿಂದ ಸಮೀಕ್ಷೆಯ ಜೊತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ತಪಾಸಣೆಯ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಇರುವವರಿಗೆ ವೈದ್ಯಕೀಯ ಚಿಕಿತ್ಸೆ ನೀಡಿದರೆ ಕರೋನಾ ಸೋಂಕು ತಗಲುವ ಸಾಧ್ಯ ಕಡಿಮೆ. ಈ ಕಾರಣಕ್ಕಾಗಿ ಪ್ರತಿ ಮನೆಗೆ ತಪಾಸಣೆ ನಡೆಸಬೇಕು ಎಂದು ಸೂಚನೆ ನೀಡಿದರು

ವೈದ್ಯಕೀಯ ಸಿದ್ಧತೆ: ಕೋವಿಡ್ -19 ವೈರಸ್ ಪತ್ತೆಯಾದರೆ ತುತರ್ು ಚಿಕಿತ್ಸೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಬಳ್ಳಾರಿಯಿಂದ ಮೂರು ವೆಂಟಿಲೇಟರ್ ಹಾವೇರಿಗೆ ಮಂಜೂರು ಮಾಡಲಾಗಿದೆ. ಈ ವೆಂಟಿಲೇಟರ್ಗಳನ್ನು ಬಿಮ್ಸ್ ಅಧಿಕಾರಿಗಳೊಂದಿಗೆ ಚಚರ್ಿಸಿ ತರಿಸಿಕೊಳ್ಳುವಂತೆ ಸೂಚನೆ ನೀಡಿದರು.

     ಸೆಂಟ್ರಲೈಸ್ ಪ್ರೆಜರ್ ಆ್ಯಕ್ಸಿಜನ್ ಸಪ್ಲೈ ಮಾಡುವ ವೆಂಟಿಲೇಟರ್ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು.  ಕನಿಷ್ಠ 40 ಹಾಸಿಗೆ ಚಿಕಿತ್ಸಾ ಸೌಲಭ್ಯ  ಜಿಲ್ಲಾ ಕೇಂದ್ರದಲ್ಲಿ ಹಾಗೂ ಐದು ಹಾಸಿಗೆಗಳ ಚಿಕಿತ್ಸಾ ಸೌಲಭ್ಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಇರುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. 

 ಖಾಲಿ ಇರುವ ವೈದ್ಯಕೀಯ, ಅರೇವೈದ್ಯಕೀಯ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಮಾಡಿಕೊಳ್ಳಲು ಸಕರ್ಾರದ ಆದೇಶಮಾಡಿದೆ. ನೇಮಕಾತಿಗೆ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು. ಹಾಗೂ ವೈದ್ಯಕೀಯ ಉಪಕರಣಗಳು, ಔಷಧಿ, ಮಾಸ್ಕ್ ಸೇರಿದಂತೆ ಅವಶ್ಯವಿರುವ ಸಾಮಗ್ರಿಗಳನ್ನು ಎಸ್.ಡಿ.ಆರ್.ಎಫ್. ಅನುದಾನದಲ್ಲಿ ಖರೀದಿಗೆ ಸೂಚಿಸಿದರು.

     ಕೃಷಿ ಚಟುವಟಿಕೆ, ಅಗತ್ಯ ವಸ್ತುಗಳಾದ ತರಕಾರಿ, ದಿನಸಿ, ಮೆಡಿಕಲ್ ಶಾಪ್ ಸೇರಿದಂತೆ ಸಕರ್ಾರದ ಮಾರ್ಗಸೂಚಿಯಂತೆ ಮಾರಾಟಕ್ಕೆ ರಿಯಾಯಿತಿ ನೀಡಿ. ಸಾಧ್ಯವಾದರೆ ಸ್ಥಳೀಯವಾಗಿ ಜಿಲ್ಲಾಧಿಕಾರಿಗಳೊಂದಿಗೆ ಚಚರ್ಿ ಸಮಯ ನಿಗಧಿಪಡಿಸಿ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಾಗೃತಿ ಮೂಡಿಸಿ  ಎಂದು ಸಲಹೆ ನೀಡಿದರು.

ಸಕರ್ಾರಿ ಸೇವೆಗೆ ಒಂದೆರಡು ಪೆಟ್ರೋಲ್ ಬಂಕ್ಗಳನ್ನು ಗುರುತಿಸಿಕೊಳ್ಳಿ, ಉಳಿದಂತೆ ಪಾಸ್ ಇದ್ದವರಿಗೆ ಮಾತ್ರ ಡಿಸೈಲ್, ಪೆಟ್ರೋಲ್ ನೀಡಬೇಕು. ಅನಗತ್ಯವಾಗಿ ಓಡಾಡುವವರಿಗೆ ಇಂಧನ ಹಾಕಬೇಡಿ ಎಂದು ಸೂಚನೆ ನೀಡಿದರು.

ರೇಷನ್ ಕಾಡರ್್ಗಾಗಿ ಅಜರ್ಿ ಸಲ್ಲಿಸಿದವರಿಗೂ ಪಡಿತರ ಪದಾರ್ಥಗಳನ್ನು ನೀಡಿ, ರೇಷನ್ ಕಾಡರ್್ ಹೊಂದಿದವರಿಗೆ ಓಟಿಪಿಗಾಗಿ ಕಾಯಬೇಡಿ. ಸಹಿಮಾಡಿಸಿಕೊಂಡು ಎರಡು ತಿಂಗಳ ರೇಷನ್ಗಳನ್ನು ನೀಡಿ ಎಂದು ಸೂಚಿಸಿದರು.

     ಪ್ರಸ್ತಾವನೆ ಸಲ್ಲಿಸಿ: ಸಭೆಯಲ್ಲಿ ಶಾಸಕರು ಬೇಡಿಕೆ ಸಲ್ಲಿಸಿದಂತೆ ಜಿಲ್ಲೆಗೆ ಹೆಚ್ಚುವರಿ ಉಚಿತ ಹಾಲು ವಿತರಣೆಗೆ ಬೇಕಾದ ಹಾಲಿನ ವಿವರ, ಆಟೋ ಚಾಲಕರು, ಸಲ್ಯೂನ್ ಶಾಪ್ ಸೇರಿದಂತೆ ವಿವಿಧ ಕಾಮರ್ಿಕ ವರ್ಗಕ್ಕೆ ಹಾಗೂ ವಲಸೆ ಕಾಮರ್ಿಕರಿಗೆ ಬೇಕಾದ ಆಹಾರ ಸಾಮಗ್ರಿಗಳ ಕುರಿತಂತೆ ಪ್ರಸ್ತಾವನೆ ಸಲ್ಲಿಸಿಲು ಆಹಾರ ಮತ್ತು ನಾಗರಿಕ ಸಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಸನಗೌಡ ದೇಸಾಯಿ, ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ಜಿ.ಪಂ.ಸದಸ್ಯ ಸಿದ್ಧರಾಜ ಕಲಕೋಟಿ, ವಿರುಪಾಕ್ಷಪ್ಪ ಕಡ್ಲಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ರಮೇಶ ದೇಸಾಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ,  ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಪೊಲೀಸ್ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜರ್ುನ ಬಾಲದಂಡಿ, ಉಪವಿಭಾಗಾಧಿಕಾರಿಗಳಾದ ಡಾ.ದಿಲೀಷ್ ಶಶಿ, ಶ್ರೀಮತಿ ಅನ್ನಪೂರ್ಣ ಮುದಕಮ್ಮನವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ, ಜಿಲ್ಲಾ ಶಸ್ತ್ರ ಚಿಕಿತ್ಸ ಡಾ. ನಾಗರಾಜ ನಾಯಕ ಇತರರು ಉಪಸ್ಥಿತರಿದ್ದರು.