ಕೊನೆಗೂ ತಾಯ್ನಾಡಿಗೆ ಮರಳಿದ ಮೈಕ್ ಹೆಸ್ಸನ್

ನವದೆಹಲಿ, ಏ 28,ನ್ಯೂಜಿಲೆಂಡ್ ನ ಮಾಜಿ ಕೋಚ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ತಂಡದ ಕ್ರಿಕೆಟ್ ನಿರ್ದೇಶಕ ಮೈಕ್  ಹೆಸ್ಸನ್ ಕೊನೆಗೂ ತಾಯ್ನಾಡಿಗೆ ಮರಳಿದ್ದಾರೆ.
ನೊವೆಲ್ ಕೊರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಭಾರತದಲ್ಲಿ ಲಾಕ್ ಡೌನ್ ನಿರ್ಬಂಧಗಳನ್ನು ವಿಧಿಸಿದ್ದ ಕಾರಣ ಸುಮಾರು ಒಂದು ತಿಂಗಳಿಗಿಂತಲೂ ಅಧಿಕ ಸಮಯ ಕುಟುಂಬದಿಂದ ದೂರ ಉಳಿದಿದ್ದ ಮೈಕ್ ಕೊನೆಗೂ ಕುಟುಂಬ ಸೇರಿಕೊಂಡಿದ್ದಾರೆ.  ತವರಿಗೆ ಹೋಗುತ್ತಿರುವ ಕುರಿತು ಸಾಮಾಜಿಕ ತಾಣದಲ್ಲಿ ಮಂಗಳವಾರ ಖಚಿತಪಡಿಸಿರವ ಹೆಸ್ಸನ್, ಮುಂಬೈಗೆ ವಿಮಾನ ನಿಲ್ದಾಣಕ್ಕೆ ಹೋಗಲು ಬಸ್ ನಲ್ಲಿ ಒಂದು ದಿನ ಕಳೆದ ನಂತರ ಎಂತಹ ಅದ್ಬುತ ದೃಶ್ಯ.ನ್ಯೂಜಿಲೆಂಡ್ ಸಿಬ್ಬಂದಿ ತಮ್ಮ ವಾಪಾಸ್ಸಾತಿಯನ್ನು ಬರಮಾಡಿಕೊಂಡರು, ಎಂದು ಏರ್ ನ್ಯೂಜಿಲೆಂಡ್ ವಿಮಾನದ ಚಿತ್ರದೊಂದಿಗೆ ಟ್ವೀಟ್ ಮಾಡಿದ್ದಾರೆ.ತಾಯ್ನಾಡಿಗೆ ತೆರಳಲು ಅನುವು ಮಾಡಿಕೊಟ್ಟ ಪ್ರಧಾನಿ ನರೇಂದ್ರ ಮೋದಿ, ಭಾರತದಲ್ಲಿರುವ ನ್ಯೂಜಿಲೆಂಡ್ ಹೈಕಮಿಷನ್, ನ್ಯೂಜಿಲೆಂಡ್ ನ ವಿದೇಶಾಂಗ ಸಚಿವರು ಮತ್ತು ನ್ಯೂಜಿಲೆಂಡ್ ಪ್ರಧಾನಿ ಜಸಿಂದಾ ಆರ್ಡೆರ್ನ್ ಗೆ  45 ವರ್ಷದ ಹಸ್ಸೆನ್  ಕೃತಜ್ಞತೆ ಸಲ್ಲಿಸಿದ್ದಾರೆ.ಇಂಡಿಯನ್  ಪ್ರೀಮಿಯರ್ ಲೀಗ್ ನ 13ನೇ ಆವೃತ್ತಿಗಾಗಿ ಮೈಕ್ ಬೆಂಗಳೂರಿಗೆ ಆಗಮಿಸಿದ್ದರು. ಆದರೆ ಮಾ.29ರಿಂದ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿ  ಕೊರೊನಾದಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ.