ಪಣಜಿ , ಮೇ 26, ರಾಷ್ಟ್ರವ್ಯಾಪಿ ಲಾಕ್‌ಡೌನ್ ಕಾರಣದಿಂದ ಸಿಕ್ಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ತವರು ರಾಜ್ಯಗಳಿಗೆ ಕಳಿಸಿಕೊಡುವ ಕೆಲಸವನ್ನು ಗೋವಾ ಸರ್ಕಾರ ಬಹಳ ಬಿರುಸಿನಿಂದ ಕೈಗೊಂಡಿದೆ.1494 ವಲಸೆ ಕಾರ್ಮಿರಕರನ್ನು ಹೊತ್ತ ಶ್ರಮಿಕ್ ಎಕ್ಸ್‌ಪ್ರೆಸ್ ವಿಶೇಷ ರೈಲು ಇದೆ 25 ರಂದು ಕರ್ಮಲಿ ರೈಲ್ವೆ ನಿಲ್ದಾಣದಿಂದ ಜಾರ್ಖಂಡ್‌ನ ಹಟಿಯಾಕ್ಕೆ ಹೊರಟಿದೆ. ಅದೇ ರೀತಿ 1484 ವಲಸೆ ಕಾಮಿಕರನ್ನು ಹೊತ್ತ ಮತ್ತೊಂದು ಶ್ರಮಿಕ್ ಎಕ್ಸ್‌ಪ್ರೆಸ್ ವಿಶೇಷ ರೈಲು ಉತ್ತರ ಪ್ರದೇಶದ ಬಲಿಯಾಕ್ಕೆ ಮಡ್ಗಾಂವ್ ರೈಲ್ವೆ ನಿಲ್ದಾಣದಿಂದ ಹೊರಟಿದೆ. ರೈಲು ಹೊರುಡುವ ಮೊದಲು ಕಾರ್ಮಿಕರರಿಗೆ ವೈದ್ಯಕೀಯ ತಪಾಸಣೆ ಮತ್ತು ಇತರ ವಿಧಿ- ವಿಧಾನಗಳನ್ನು ನಡೆಸಲಾಯಿತು.ಬೆಂಗಳೂರಿನಿಂದ ಹತ್ತು ಪ್ರಯಾಣಿಕರನ್ನು ಹೊತ್ತ ಬಸ್ ಗೋವಾಕ್ಕೆ ಹೊರಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಇಡೀ ಕಾರ್ಯಾಚರಣೆಯನ್ನು ದಕ್ಷಿಣ ಗೋವಾ, ಮತ್ತು ಉತ್ತರ ಗೋವಾ ಜಿಲ್ಲಾ ಮ್ಯಾಜಿಸ್ಟ್ರೇಟ್ ನೇತೃತದಲ್ಲಿ ಕೈಗೊಳ್ಳಲಾಗಿದೆ.