ಕರಾಚಿ, ಮಾ 31,ಉದಯೋನ್ಮುಖ ಯುವ ಕ್ರಿಕೆಟರ್ಗಳು ತಮ್ಮ ಹೇರ್ಸ್ಟೈಲ್ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವ ಬದಲು ಆಟದ ಕಡೆಗೆ ಗಮನ ನೀಡುವಂತೆ ಪಾಕಿಸ್ತಾನದ ಮಾಜಿ ನಾಯಕ ಜಾವೆದ್ ಮಿಯಾಂದಾದ್ ಸಲಹೆ ನೀಡಿದ್ದಾರೆ. ತಲೆ ಬಾಚಿಕೊಳ್ಳುವುದರ ಕುರಿತು ಆಲೋಚಿಸುವುದಕ್ಕಿಂತಲೂ ಅಭ್ಯಾಸದಲ್ಲೇ ಆಗಲಿ ಅಥವಾ ಪಂದ್ಯದಲ್ಲೇ ಆಗಲಿ ತಮ್ಮ ಶೇ.100 ಪ್ರದರ್ಶನ ನೀಡುವ ಕಡೆಗಷ್ಟೇ ಗಮನ ನೀಡಬೇಕು ಎಂದು ಮಿಯಾಂದಾದ್ ಅಭಿಪ್ರಾಯ ಪಟ್ಟಿದ್ದಾರೆ. ಜತೆಗೆ ತಮ್ಮ ಹೆಸರನ್ನು ಉತ್ತುಂಗಕ್ಕೆ ಕೊಂಡಯೊಲು ಬ್ಯಾಟಿಂಗ್ ಮತ್ತು ಬೌಲಿಂಗ್ ಕಡೆಗೆ ಗಮನ ಹರಿಸಬೇಕು ಎಂದಿದ್ದಾರೆ."ವಿಕೆಟ್ಗಳನ್ನು ಅನಗತ್ಯವಾಗಿ ಕೈಚೆಲ್ಲುವುದಲ್ಲ. ಅಗತ್ಯ ಸಮಯ ತೆಗೆದುಕೊಂಡು ಕ್ರೀಸ್ನಲ್ಲಿ ನೆಲೆನಿಂತು ಆನಂದಿಸಬೇಕು. ಬೌಲರ್ಗಳೂ ಅಷ್ಟೇ ನೇರ ಮತ್ತು ನಿಖರವಾಗಿ ಬೌಲ್ ಮಾಡುವ ಕಡೆಗೆ ಗಮನ ನೀಡಬೇಕು. ಇದರರ್ಥ ನಿಮ್ಮ ಆಟದ ಕಡೆಗೆ ನೀವು ಬದ್ಧತೆ ಹೊಂದಿರಬೇಕು," ಎಂದು ಮಿಯಾಂದಾದ್ ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಹೇಳಿಕೊಂಡಿದ್ದಾರೆ.