ಮೆಕ್ಸಿಕೋ ನಗರ, ಜೂನ್ 14, ಈ ವರ್ಷದ ಜನವರಿಯಿಂದ ಮೇ ತಿಂಗಳವರೆಗೆ ಮೆಕ್ಸಿಕೋ ಮತ್ತು ಅಮೆರಿಕ ಗಡಿಯಲ್ಲಿರುವ ರಿಯೋ ಬ್ರಾವೋ ನದಿ ದಾಟುವ ಪ್ರಯತ್ನದಲ್ಲಿ ಒಟ್ಟು 17 ಮೆಕ್ಸಿಕನ್ ಮತ್ತು ವಿದೇಶಿ ವಲಸಿಗರು ಮೃತಪಟ್ಟಿದ್ದಾರೆ.ಮೆಕ್ಸಿಕೋದ ರಾಷ್ಟ್ರೀಯ ವಲಸೆ ಕೇಂದ್ರ (ಐಎನ್ಎಮ್) ಈ ಅಂಕಿಅಂಶ ನೀಡಿದೆ. ಐಎನ್ಎಮ್ ಪ್ರತಿನಿಧಿಗಳು ನಾಲ್ಕು ಮೃತದೇಹಗಳನ್ನು ಹೊರತೆಗೆದಿದ್ದು ಈ ಪೈಕಿ ಇಬ್ಬರು ಮೆಕ್ಸಿಕೋಗೆ ಸೇರಿದವರು ಹಾಗೂ ಒಬ್ಬರು ಹೋಂದುರಾಸ್ ಹಾಗೂ ಮತ್ತೊಬ್ಬರು ಗ್ವಾಟೆಮಾಲಾಗೆ ಸೇರಿದವರಾಗಿದ್ದಾರೆ.
ಇತರ 10 ಮೃತರು ಯಾವ ದೇಶಕ್ಕೆ ಸೇರಿದವರು ಎಂದು ಗುರುತುಪತ್ತೆಯಾಗಿಲ್ಲ ಎಂದು ಐಎನ್ಎಮ್ ತಿಳಿಸಿದೆ. 16 ಪುರುಷರು ಹಾಗೂ ಓರ್ವ ಮಹಿಳೆ ಮೃತಪಟ್ಟಿದ್ದು ಗಡಿ ನದಿಯಲ್ಲಿ ಮುಳುಗಿದ್ದಾರೆ. 2019 ರಲ್ಲಿ ಐಎನ್ಎಮ್ ಪ್ರತಿನಿಧಿಗಳು 29 ವಲಸಿಗರ ಮೃತದೇಹವನ್ನು ಹೊರತೆಗೆದಿದ್ದು ಕೇವಲ ಒಂಭತ್ತು ಜನರ ಗುರುತು ಮಾತ್ರ ಪತ್ತೆಯಾಗಿತ್ತು. ಆರು ಜನರು ಮೆಕ್ಸಿಕಾಗೆ ಸೇರಿದವರಾಗಿದ್ದು ತಲಾ ಒಬ್ಬರು ಹೋಂಡುರಾಸ್, ಕ್ಯೂಬಾ ಮತ್ತು ಬೆಲಿಜಿಯಾಗೆ ಸೇರಿದವರಾಗಿದ್ದರು.ವಲಸಿಗರ ಒಳನುಸುಳುವಿಕೆ ಹೆಚ್ಚಾಗಿದ್ದು ಅಮೆರಿಕದ ಕಣ್ಗಾವಲು ತೀವ್ರಗೊಂಡಿದ್ದು ಕಳೆದೊಂದು ದಶಕದಿಂದ ಗಡಿಯಲ್ಲಿ ರಿಯೋ ಬ್ರಾವೋ ನದಿಯಲ್ಲಿ ಅಥವಾ ಮರುಭೂಮಿಗಳಲ್ಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ ಎಂದು ತಜ್ಞರು ಹೇಳಿದ್ದಾರೆ.