ಪುರುಷರ ಖೋ-ಖೋ ಪಂದ್ಯಾವಳಿ: ಬಿ.ಐ.ಟಿ.ಎಂ ಗೆ ಪ್ರಥಮ ಸ್ಥಾನ

ಲೋಕದರ್ಶನ ವರದಿ

ಹೊಸಪೇಟೆ 03: ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯವು ಆಯೋಜಿಸಿರುವ ಎರಡು  ದಿನಗಳ ಕಲಬುರಗಿ ವಲಯಮಟ್ಟದ ಇಂಜಿನಿಯರಿಂಗ್ ಕಾಲೇಜುಗಳ ಪುರುಷರ ಖೋ-ಖೋ ಪಂದ್ಯಾವಳಿ ಜರುಗಿತು.

ಕನರ್ಾಟಕ ಕ್ರೀಡಾ ಪ್ರಾಧಿಕಾರದ ಖೋ ಖೋ ತರಬೇತಿದಾರರಾದ ಯತಿರಾಜ್ ಎ.ಎನ್ ಅವರು ಖೋ-ಖೋ ಪಂದ್ಯಾವಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ''ಮನುಷ್ಯ ತನ್ನ ದೇಹವನ್ನು ಸದೃಢವಾಗಿ ಕಾಪಾಡಿಕೊಳ್ಳಬೇಕಾದರೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ. ಖೋ ಖೋ ಭಾರತದ ದೇಶಿಯ ಕ್ರೀಡೆಯಾಗಿದ್ದು, ದೇಹ ಮನಸ್ಸುಗಳಿಗೆ ಉತ್ಸಾಹ ಹಾಗು ಚೈತನ್ಯ ತುಂಬುವ ಆಟವಾಗಿದೆ, ಕ್ರಿಕೆಟ್ ಮಾತ್ರವೇ ಕ್ರೀಡೆ ಎಂದುಕೊಳ್ಳುವ ಯುವಜನರ ಮಧ್ಯೆ ಎಂಜಿನೀಯರಿಂಗ್ ವಿದ್ಯಾಥರ್ಿಗಳು ಖೋ ಖೋ ಆಟವಾಡುತ್ತಿರುವುದು ಸಂತಸದ ಸಂಗತಿ'' ಎಂದರು.

ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಎಂ.ಶಶಿಧರ್ ಮಾತನಾಡಿ ``ಭಾರತದಲ್ಲಿ ಪ್ರಚೀನಕಾಲದಿಂದಲೂ ಖೋ ಖೋ ಆಟ ಪ್ರಚಲಿತವಾಗಿದೆ. ಮುಂಬರುವ ಏಶಿಯನ್ ಕ್ರೀಡೆಗಳಲ್ಲಿ ಖೋ-ಖೋ ಮೊದಲ ಬಾರಿಗೆ ಸೇರ್ಪಡೆಗೊಳ್ಳುತ್ತಿದೆ. ಕಬಡ್ಡಿಯಂತೆ ಖೋ-ಖೋ ಸಹಾ ಅಂತರಾಷ್ಟ್ರೀಯ ಮನ್ನಣೆ ಗಳಿಸುವತ್ತ ಸಾಗುತ್ತಿದೆ. ಪಿಡಿಐಟಿಯು ದೇಶೀಯ ಸಾಂಪ್ರದಾಯಿಕ ಕ್ರೀಡೆಗಳನ್ನು ಉತ್ತೇಜಿಸಲು ಇಂಥ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳುತ್ತಿದೆ'' ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷ ಜಾನೇಕುಂಟೆ ಬಸವರಾಜ ಮಾತನಾಡಿ ಆಟದಲ್ಲಿ ಸೋಲು, ಗೆಲುವು ಮುಖ್ಯವಲ್ಲ, ಒಳ್ಳೆಯ ಪ್ರದರ್ಶನ ನೀಡುವುದು ಮುಖ್ಯ. ವಿದ್ಯಾಥರ್ಿಗಳು ದಿನದಲ್ಲಿ ಕೆಲವು ನಿಮಿಷಗಳಾದರೂ ಆಟ, ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯೆ ಮತ್ತು ಕ್ರೀಡೆ ಒಂದೇ ನಾಣ್ಯದ ಎರಡು ಮುಖಗಳು. ಇವುಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳುವ ಕೆಲಸವನ್ನು ಮಾಡಬೇಕು''ಎಂದು ಹೇಳಿದರು.

ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಕುಂಟೆ ಬಸವರಾಜ್ ಜಾನೆ ಕುಂಟೆ ಹಾಗೂ ಪ್ರಾಂಶುಪಾಲ ಡಾಕ್ಟರ್ ಎಸ್ ಎಮ್ ಶಶಿಧರ್ ಅವರು ಟ್ರೋಫಿ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು. ಕಾಲೇಜಿನ ದೈಹಿಕ ನಿದರ್ೇಶಕ ಕೆ.ಎಸ್.ಮಂಜುನಾಥ, ಅಧ್ಯಾಪಕರಾದ ಪ್ರಮೋದ್, ಗಿರೀಶ್ ಮುಂತಾದವರು ಉಪಸ್ಥಿತರಿದ್ದರು.