ಲೋಕದರ್ಶನ ವರದಿ
ಬೇಸಿಗೆ ಹಿನ್ನಲೆ ಸಮರ್ಕ ಕುಡಿಯುವ ನೀರು ಪೂರೈಕೆಗೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒಪ್ಪಿಗೆ
ಕಂಪ್ಲಿ 17: ಬೇಸಿಗೆ ಹಿನ್ನಲೆ ಕುಡಿಯುವ ನೀರು ಪೂರೈಕೆ, ಬೀದಿ ದೀಪಗಳ ನಿರ್ವಹಣೆ, ರಸ್ತೆ ಸೇರಿದಂತೆ ನಾನಾ ಅಭಿವೃದ್ಧಿಗಳಿಗೆ 15ನೇ ಹಣಕಾಸು ಯೋಜನೆಯಡಿಯಲ್ಲಿ ಕ್ರಿಯಾಯೋಜನೆಗೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು.
ತಾಲೂಕು ಸಮೀಪದ ಗಾದಿಗನೂರು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಅಧ್ಯಕ್ಷೆ ಎನ್.ಪಾರ್ವತಿ ಶಂಕ್ರ್ಪ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಗುರುವಾರ ನಡೆಯಿತು. ನಂತರ ಪಿಡಿಒ ಟಿ.ಮಲ್ಲಿಕಾರ್ಜುನ ಮಾತನಾಡಿ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆ ದೋರದಂತೆ ಸೂಕ್ತಕ್ರಮ ಕೈಗೊಳ್ಳಲಾಗಿದೆ. ರಸ್ತೆ, ಕುಡಿಯುವ ನೀರು, ಬೀದಿ ದೀಪ, ನೈರ್ಮಲ್ಯ, ಸ್ವಚ್ಚತೆ ಸೇರಿದಂತೆ ವಿವಿಧ ಅಭಿವೃದ್ಧಿಗಾಗಿ ಇಂದಿನ ಸಾಮಾನ್ಯ ಸಭೆಯಲ್ಲಿ 15ನೇ ಹಣಕಾಸು ಯೋಜನೆಯಡಿಯಲ್ಲಿ ಸುಮಾರು 42 ಲಕ್ಷ ವೆಚ್ಚದ ಕ್ರಿಯಾ ಯೋಜನೆ ತಯಾರಿಸಲಾಯಿತು.
ಕಸ ಸಂಗ್ರಹಣೆ ಮತ್ತು ವಿಲೇವಾರಿ ಕುರಿತು ಸದಸ್ಯರೊಂದಿಗೆ ಚರ್ಚಿಸಲಾಯಿತು. ಗ್ರಾಪಂಯ ವ್ಯಾಪ್ತಿಯ ಜನತೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸದಾ ಸಿದ್ದರಾಗಿದ್ದೇವೆ ಎಂದರು. ತದನಂತರ ಕುಂದು ಕೊರತೆಯ ಸಾರ್ವಜನಿಕ ಅರ್ಜಿಗಳನ್ನು ಪರೀಶೀಲನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸದಸ್ಯರಾದ ದೊಡ್ಡನಗೌಡ ಕುಡತಿನಿ, ಬಿ.ಕೆ.ಸುರೇಶ, ಹರಿಜನ ಗಂಗಾಧರ, ಮಲ್ಲಮ್ಮ ಹರಿಜನ, ಎನ್.ಗೀತಾ, ಕೊರವರ ಯಂಕಮ್ಮ, ಕುರುಬರ ಕಮಲಾಕ್ಷಿ, ಉಮಾದೇವಿ ಕುರುಬರ, ನಾಯಕರ ಶಿವಲಕ್ಷ್ಮಿ, ಜಿ.ಶ್ರೀದೇವಿ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.