ಸಖಿ, ವಿಕಲಚೇತನರ ವಿಶೇಷ ಮತಗಟ್ಟೆ ಅಧಿಕಾರಿಗಳ ಸಭೆ

ಧಾರವಾಡ 13: ಧಾರವಾಡ ಲೋಕಸಭೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸ್ಥಾಪಿಸಲಿರುವ ಮಹಿಳೆಯರೆ ನಿರ್ವಹಿಸುವ ಸಖಿ ಹಾಗೂ ವಿಕಲಚೇತನ ಅಧಿಕಾರಿಗಳು ನಿರ್ವಹಣೆ ಮಾಡಲಿರುವ ವಿಶೇಷ ಮತಗಟ್ಟೆಗಳ ಕುರಿತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ ಜಿ.ಪಂ. ಸಿಇಓ ಡಾ. ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಇಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ನೂತನ ಸಭಾಭವನದಲ್ಲಿ ಸಭೆ ಜರುಗಿತು.

  ಸಭೆಯಲ್ಲಿ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಗಳು ಮತಗಟ್ಟೆಯನ್ನು ವಿಶೇಷವಾಗಿ ನಿರ್ವಹಿಸುವ ಮತ್ತು ವಿಕಲಚೇತನರು ಮತಗಟ್ಟೆ ನಿರ್ವಹಿಸುವ ಕುರಿತು ಸೂಚನೆಗಳನ್ನು ನೀಡಲಾಯಿತು.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೆಶಕ ಗಜಾನನ ಮನ್ನುಕೇರಿ, ಜಿಲ್ಲಾ ನೊಡೆಲ್ ಅಧಿಕಾರಿ ರಾಜಶ್ರೀ ಜೈನಾಪೂರ, ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿಕೆ.ಎಮ್.ಅಮರನಾಥ ಪಾಲ್ಗೊಂಡು ಸೂಚನೆಗಳನ್ನು ನೀಡಿದರು