ಮಾಧ್ಯಮ, ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮನವಿ

ಲೋಕದರ್ಶನವರದಿ

ಹಿರೇಕೆರೂರು24: ಮಾಧ್ಯಮ ಹಾಗೂ ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ಘೋಸಿಸಬೇಕೆಂದು ಜಯಕನರ್ಾಟಕ ಸಂಘಟನೆಯ ಹಿರೇಕೆರೂರು ತಾಲೂಕ ಘಟಕದಿಂದ ತಹಶೀಲ್ದಾರ್ ಆರ್.ಎಚ್.ಭಾಗವಾನ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಭಾರತ ಕೊರೋನಾ ವೈರಸ್ ಎಂಬ ಮಹಾಮಾರಿಯ ವಿರುದ್ದ ಅತ್ಯಂತ ಶಕ್ತಿಶಾಲಿಯಾಗಿ ಹಾಗೂ ಯೋಜನಾ ಬದ್ದವಾಗಿ ಹೋರಾಟ ನಡೆಸುತ್ತಿದೆ.ಸಕರ್ಾರ ಇ ನಿಟ್ಟಿನಲ್ಲಿ ಅತ್ಯಂತ ಜಾಗರೂಕತೆಯಿಂದ ಕಾರ್ಯವನ್ನು ನಿರ್ವಹಿಸುತ್ತಿದೆ.ಈ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ಹಲವಾರು ವರ್ಗಗಳಿಗೆ ಅವರ ಕಷ್ಟಗಳನ್ನು ಪರಿಹರಿಸುವ ಕಾರ್ಯವನ್ನು ಮಾಡಿರುವುದು ನಿಜಕ್ಕು ಶ್ಲಾಘನೀಯ ಸಂಗತಿ.

     ಈ ಕೋರೋನಾ ವೈರಸ್ ವಿರುದ್ದದ ಹೋರಾಟದ ಸಂದರ್ಭದಲ್ಲಿ ನಿರಂತರವಾಗಿ ಮಾಧ್ಯಮ ಹಾಗೂ ಪತ್ರಕರ್ತರು ಅತ್ಯಂತ ಪರಿಶ್ರಮದ ಕಾರ್ಯವನ್ನು ನಿರ್ವಹಿಸಿದ್ದಾರೆ. ಆದರೆ ಸಕರ್ಾರ ಈ ವರ್ಗವನ್ನು ನಿರ್ಲಕ್ಷಿಸಿದ್ದು ನಿಜಕ್ಕು ಬೇಸರದ ಸಂಗತಿ.

ಸಮಾಜದ ಪ್ರತಿಯೊಂದು ಘಟನೆಯನ್ನು ರಾಜ್ಯದ ಜನಕ್ಕೆ ಕ್ಷಣ ಕ್ಷಣಕ್ಕೂ ತಲುಪಿಸುವ ಕೆಲಸ ಹಾಗೂ ಮುಂಜಾಗೃತಾ ಕ್ರಮಗಳನ್ನು ತಿಳಿಸುವ ಮೂಲಕ ಕೊರೋನಾ ವೈರಸ್ ತಡೆಯಿವಲ್ಲಿ ಈ ವರ್ಗ ಅತ್ಯಂತ ಶ್ರಮ ವಹಿಸಿ ಕಾರ್ಯ ನಿರ್ವಹಿಸುತ್ತಿದೆ. ಮುಖ್ಯಮಂತ್ರಿಗಳು ಕೂಡಲೆ ಮಾಧ್ಯಮ ಹಾಗೂ ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ಒದಗಿಸಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಜಯ ಕನರ್ಾಟಕ ಸಂಘಟನೆಯ ತಾಲೂಕ ಅಧ್ಯಕ್ಷ ಚಂದ್ರಶೇಖರ ಉಣಕಲ್, ಉಪಾಧ್ಯಕ್ಷ ರಾಜು ಜವಳಿ, ಕಾಯರ್ಾಧ್ಯಕ್ಷ ಮುಜೀಬ ಬಳಿಗಾರ, ಪ್ರ ಕಾರ್ಯದಶರ್ಿ ಮುನ್ನಾ ಆರ್, ಮಕಾಂದಾರ, ಮಾರುತಿ ಎಸ್, ರಾಜು ಹಿರೇಮಠ, ಬಸವರಾಜ ಕಟ್ಟಿಮನಿ, ಮಂಜುನಾಥ ಸಾಲಿ,ರಾಘವೇಂದ್ರ ಮಾಳಮ್ಮನವರ, ಹನುಮಂತಗೌಡ ಮರಿಗೌಡ್ರ, ನವೀನ, ಕುಮಾರ,ನಿಂಗರಾಜ ಮಡಿವಾಳರ, ಖಲೀಮ್ ಇತರರು ಇದ್ದರು.